ಏಷ್ಯಾಕಪ್ ಕ್ರಿಕೆಟ್ ಟೂರ್ನಿ, ಭಾರತ ಪಾಕ್ ಮುಖಾಮುಖಿ ಇಂದು

0
0
loading...

ದುಬೈ: ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯ ಲೀಗ್​ ಪಂದ್ಯದಲ್ಲಿ ಇಂದು ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿದ್ದು, ಅದಕ್ಕಾಗಿ ಈಗಾಗಲೇ ವೇದಿಕೆ ಸಜ್ಜಾಗಿದೆ.ವಿಶ್ವ ಕ್ರಿಕೆಟ್ ಅಭಿಮಾನಿಗಳ ಚಿತ್ತ ದುಬೈನತ್ತ ನೆಟ್ಟಿದೆ.
ಈಗಾಗಲೇ ಉಭಯ ತಂಡಗಳು ತಾವೂ ಆಡಿರುವ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿವೆ, ಇಂದಿನ ಪಂದ್ಯದಲ್ಲಿ ಉಭಯ ತಂಡಗಳಿಗೆ ಪ್ರತಿಷ್ಠೆಯಿಂದ ಕೂಡಿದೆ. ಈ ಹಿಂದೆ ಇಂಗ್ಲೆಂಡ್​​ನಲ್ಲಿ ನಡೆದಿದ್ದ ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಭಾರತ ಹೀನಾಯ ಸೋಲು ಕಂಡಿತು. ಇದೀಗ ಸೇಡು ತೀರಿಸಿಕೊಳ್ಳಲು ರೋಹಿತ್​ ಪಡೆ ಸಜ್ಜಾಗಿದೆ.
ಈ ಹಿಂದಿನ ಏಷ್ಯಾಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಉತ್ತಮ ನಿರ್ವಹಣೆ ತೋರಿದ್ದು, ತಾನು ಆಡಿರುವ 8 ಪಂದ್ಯಗಳ ಪೈಕಿ ಭಾರತ 4 ಹಾಗೂ ಪಾಕ್​ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿವೆ. ಏಷ್ಯಾಕಪ್​​ನಲ್ಲಿ ಭಾರತ-ಪಾಕ್​ ಇಲ್ಲಿಯವರೆಗೆ 8 ಸಲ ಮುಖಾಮುಖಿಯಾಗಿದ್ದು, ಅದರಲ್ಲಿ ಭಾರತ 4 ಹಾಗೂ ಪಾಕಿಸ್ತಾನ 3 ಸಲ ಗೆಲುವು ಪಡೆದಿವೆ.

loading...