ಏಷ್ಯಾಕಪ್: ಪಾಕ್ ತಿವಿದ ಭಾರತ,ರೋಹಿತ್ ಪಡೆಯ ಬೌಲಿಂಗ್ಗೆ ತತ್ತರಿಸಿದ ಸರ್ಪರಾಜ ಬಳಗ

0
0
loading...

ದುಬೈ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಭಾರತ ಪಾರುಪತ್ಯ ಮೆರೆದು ಎಂಟು ವಿಕೆಟ್ಗಳ ರೋಚಕ ಗೆಲುವು ಕಂಡಿದೆ. ಬೌಲಿಂಗ್​ನಲ್ಲಿ ಮ್ಯಾಜಿಕ್ ಮಾಡಿ ಪಾಕಿಸ್ತಾನವನ್ನು ಕೇವಲ 162 ರನ್​ಗೆ ಕಟ್ಟಿಹಾಕಿದ್ದ ಟೀಂ ಇಂಡಿಯಾ ಬ್ಯಾಟಿಂಗ್​ನಲ್ಲೂ ಪಾರಮ್ಯ ಮೆರೆಯುವ ಮೂಲಕ ಏಷ್ಯಾ ಕಪ್​ನ ಬಿಗ್​ ಫೈಟ್​ನಲ್ಲಿ ಪಾಕ್​ ತಂಡವನ್ನು ಭಾರತ ಎಂಟು ವಿಕೆಟ್​ಗಳಿಂದ ಮಣಿಸಿದೆ. ಈ ಮೂಲಕ ಲೀಗ್ ಹಂತದ ಎರಡೂ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಿದಂತಾಗಿದೆ.

ಚಿಕ್ಕ ಗುರಿಯನ್ನು ಬೆನ್ನಟ್ಟಿದ್ದ ಭಾರತ ತಂಡದ ಆರಂಭಿಕರಾದ ರೋಹಿತ್ ಶರ್ಮಾ ಹಾಗೂ ಶಿಖರ್​ ಧವನ್ ಉತ್ತಮ ಆರಂಭ ನೀಡಿ ಗೆಲುವನ್ನು ಖಚಿಸಪಡಿಸಿದರು. 52 ರನ್ ಗಳಿಸಿ ನಾಯಕ ರೋಹಿತ್ ಶರ್ಮಾ ಔಟಾದರೆ, ಧವನ್ ಆಟ 46 ರನ್​ಗೆ ಮಾಡಿ ಅರ್ಧಶತಕ ಮಿಸ್ ಮಾಡಿಕೊಂಡರು. 86 ರನ್​ಗಳ ಮೊದಲ ವಿಕೆಟ್​ ಜೊತೆಯಾಟದಲ್ಲೇ ಭಾರತದ ಗೆಲುವು ನಿಶ್ಚತವಾಗಿತ್ತು.
ನಂತರ ಬಂದ ಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ಭಾರತಕ್ಕೆ ನಿರೀಕ್ಷಿತ ಗೆಲುವನ್ನು ತಂದಿತ್ತರು. ರಾಯುಡು 31 ರನ್​ ಗಳಿಸಿದರೆ, ಕಾರ್ತಿಕ್ 31 ಗಳಿಸಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಸಹಕಾರಿಯಾದರು.
ಭಾರತದ ಪರ ಭುವಿ, ಹಾಗೂ ಕೇದಾರ ಜಾಧವ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

loading...