ಕಬ್ಬಿನ ಬಾಕಿ ಬಿಲ್ ನೀಡದಿರುವುದನ್ನು ಖಂಡಿಸಿ ಪ್ರತಿಭಟನೆ

0
2
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಲ್ಲಿ ೨೨ ಸಕ್ಕರೆ ಕಾರ್ಖಾನೆಗಳು ಇದ್ದು, ೧೭-೧೮ ನೇ ಸಾಲಿನ ಕಬ್ಬಿನ ಬಿಲ್ ಖಾಸಗಿ ಹಾಗೂ ಕೊ-ಆಫ್ ಸಕ್ಕರೆ ಕಬ್ಬಿನ ಬಾಕಿ ಬಿಲ್‌ನ್ನು ರೈತರಿಗೆ ಇನ್ನುವರೆಗೆ ಸರಿಯಾಗಿ ಬಿಲ್ ಪಾವತಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮನವಿಯನ್ನು ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ. ಜಿಲ್ಲೆಯ ಕೆಲವು ರೈತರು ರಾಷ್ಟçಪತಿಯವರಿಗೆ ದಯಾಮರಣ ಅರ್ಜಿ ಸಲ್ಲಿಸಿದರು ಇನ್ನುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಮಲಪ್ರಭಾ ಸಹಕಾರಿ ಸಕ್ಕೆರೆ ಕಾರ್ಖಾನೆಯ ಆಡಳಿತ ಮಂಡಳಿಯನ್ನು ವಜಾಗೊಳಿಸಿ ಸರಕಾರವೇ ಮುನ್ನಡಿಸಬೇಕಾಗಿದೆ ಎಂದು ಹಾಗೂ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಪ್ರತಿ ತಾಲೂಕಿನಲ್ಲಿ ತೆರೆಯಬೇಕು. ರೈತರಿಗೆ ರಾಷ್ಟçಪತಿ ಅವರಿಗೆ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಸಂಚಾಲಕ ಚೊನಪ್ಪಾ ಪೂಜಾರಿ, ಮಹಾಂತೇಶ ಹೀರೆಮಠ, ರಾಗವೇಂದ್ರ ನಾಯಿಕ, ಅಶೋಕ ಯಮಕನಮರಡಿ, ಜಯಶ್ರಿÃ ಗುರನ್ನವರ, ರವಿ ಸಿದ್ದನ್ನವರ, ಪ್ರಕಾಶ ನಾಯಿಕ, ಬಸವರಾಜ ಸಿದ್ದನ್ನವರ ಸೇರಿದಂತ ಇತರರು ಭಾಗವಹಿಸಿದರು.

loading...