ಕಾಂಗ್ರೆಸ್ ಜವಾಬ್ದಾರಿ ಹೆಚ್ಚಿಸಿದ ಮತದಾರರು: ಶ್ರೀನಿವಾಸ

0
1
loading...

ಕನ್ನಡಮ್ಮ ಸುದ್ದಿ-ಹಾನಗಲ್ಲ: ಜಿಲ್ಲೆಯ ಹಾನಗಲ್ಲ, ಸವಣೂರ, ರಾಣೆಬೆನ್ನೂರ, ಹಿರೇಕೆರೂರ ಜನತೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ಸತತ 10 ದಿನಗಳಿಂದ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಹಾನಗಲ್ಲ ಪುರಸಭೆ ಆಡಳಿತಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಚುನಾಯಿಸಿ ಪಕ್ಷಕ್ಕೆ ದೊಡ್ಡ ಬಹುಮತ ತಂದುಕೊಟ್ಟ ಮತದಾರರಿಗೆ ಅಭಿನಂದಿಸಿ ಮಾತನಾಡಿದ ಅವರು, ಹಾನಗಲ್ಲ ಪುರಸಭೆಯಲ್ಲಿ ಕಳೇದ 10 ವರ್ಷದಿಂದ ಅಭಿವೃದ್ದಿ ಕುಸಿದಿದೆ. ಹೊಸ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ವಚ್ಚತೆಯನ್ನು ಪರಿಣಾಮಕಾರಿಯಾಗಿ ಮಡುತ್ತೇವೆ. ಇಗಾಗಲೇ ಜಿ.ಪಂ,ತಾ.ಪಂ ಮತ್ತು ಪುರಸಭೆ ಕಾಂಗ್ರೆಸ್ ಆಡಳಿತದಲ್ಲಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಥಮ ಸ್ಥಾನದಲ್ಲಿದೆ. ಅಭಿವೃದ್ಧಿಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತದೆ. ಹದಗೆಟ್ಟ ರಸ್ತೆ, ಸಂಪರ್ಕ ರಸ್ತೆ, ಬೀದಿ ದೀಪ ಕಾರ್ಯಗಳ ನಿರ್ವಹಣೆ ಸೇರಿದಂತೆ ಹಾನಗಲ್ಲ ಪಟ್ಟಣವನ್ನು ಅಭಿವೃದ್ಧಿ ಪತಕ್ಕೆ ಒಯ್ಯಲಾಗುತ್ತದೆ. ಪ್ರತಿ ವಾರಕ್ಕೊಮ್ಮೆ ಪ್ರತಿ ಬಡಾವಣೆಗಳಿಗೆ ಭೇಟಿ ಸ್ವಚ್ಚತೆಯನ್ನು ನಿರಂತರವಾಗಿ ನಡೆಸುತ್ತೇವೆ. ಜನರ ನಿರೀಕ್ಷೆಯಂತೆ ಕಾರ್ಯ ನಿರ್ವಹಿಸಲಾಗುತ್ತದೆ. ನಮ್ಮ ಮುಂದಿನ ಗುರಿ ಲೋಕಸಭೆ ಚುನಾವಣೆ ಎಂದು ಶ್ರೀನಿವಾಸ ಮಾನೆ ಹೇಳಿದರು.

loading...