ಕಾಂಗ್ರೆಸ್ ನಾಯಕರುಗಳ ನಡುವಿನ ಅಸಮಾಧಾನ ಒಳಜಗಳ ಉಪಶಮನಕ್ಕೆ ಯತ್ನ

0
0
loading...

ಬೆಂಗಳೂರು:ನಿನ್ನೆ ನಡೆದ ಸಮನ್ವಯ ಸಮಿತಿ ಸಭೆ ಸಕಾರಾತ್ಮಕವಾಗಿ ನಡೆದಿದ್ದು,ಮುಂಬರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪಕ್ಷದ ಕಾರ್ಯವೈಖರಿ ಕುರಿತು ಚರ್ಚೆ ನಡೆಸಲು ಕಾಂಗ್ರೆಸ್ ನಾಯಕರು ಇಂದು ಸಭೆ ನಡೆಸುತ್ತಿದ್ದಾರೆ.ರಾಜ್ಯ ಕಾಂಗ್ರೆಸ್ ಉಸ್ತು ವಾರಿ ಕೆ.ಸಿ.ವೇಣುಗೋಪಾಲ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಎರಡು ದಿನಗಳ ಕಾಲ ಪಕ್ಷದ ಕಾರ್ಯವೈಖರಿ ಹಾಗೂ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಜೆಂಡಾ ಕುರಿತು ಚರ್ಚಿಸಲು ಹಮ್ಮಿಕೊಂಡಿರುವ ಎಲ್ಲಾ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗಿನ ಸಭೆ ಆರಂಭಗೊಂಡಿದೆ.
ಇಂದು ಬೀದರ್,ಬೆಳಗಾವಿ,ಚಿಕ್ಕೋಡಿ, ಕಲಬುರ್ಗಿ,ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಗ್ರಾಮೀಣ ಕ್ಷೇತ್ರಗಳ ಮುಖಂಡರ ಸಭೆ ನಡೆಸಿ ನಾಯಕರು ಪಕ್ಷ ಸಂಘಟನೆ, ಅಭ್ಯರ್ಥಿ ಆಯ್ಕೆ, ಇತರೆ ಪಕ್ಷಗಳ ಸ್ಥಿತಿ ಗತಿ ಬಗ್ಗೆ ಚರ್ಚೆ ನಡೆಸಲಾಗಿದೆ.
ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಬಗ್ಗೆ, ಪ್ರಚಾರ ಕಾರ್ಯ,ಕ್ಷೇತ್ರದಲ್ಲಿ ಮುಖಂಡರು ಕಾರ್ಯವೈಖರಿ ಸೇರಿ ದಂತೆ ಅಗತ್ಯ ವಿಚಾರ ಮಾಹಿತಿ ಪಡೆದಿದ್ದು,ಈ ಮೂಲಕ ನಾಯಕರುಗಳ ನಡುವಿನ ಅಸಮಾಧಾನ, ಒಳಜಗಳ ಉಪಶಮನಕ್ಕೆ ಮುಂದಾಗಲಾಗಿದೆ.
ಇನ್ನು ನಾಳೆ ಉತ್ತರ ಕರ್ನಾಟಕ, ಧಾರವಾಡ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಸಭೆ ನಡೆಯಲಿದೆ.

loading...