ಕಾಂಗ್ರೆಸ್ ಭಿನ್ನಮತ ಕುರಿತು ಗೊಂದಲ ಸೃಷ್ಟಿಸಬೇಡಿ

0
0
loading...

 

ಬೆಂಗಳೂರು: ರಾಜ್ಯದ ಸಮ್ಮಿಶ್ರ ರ‍್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಎದ್ದಿರುವ ವಿವಾದಗಳ ಕುರಿತು ಬಿಜೆಪಿ ರಾಜ್ಯ ಘಟಕ “ಯಾವುದೇ ಗೊಂದಲಕಾರಿ ಹೇಳಿಕೆ ನಿಡಬಾರದು, ಯಾವ ಗೊಂದಲ ಸೃಷ್ಟಿಸಬಾರದು” ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಬದಲಿಗೆ ಪ್ರತಿಪಕ್ಷದ ಪಾತ್ರವನ್ನು ಪ್ರಾಮಾಣಿಕವಾಗಿ ನರ‍್ವಹಿಸುವಂತೆ ಅವರು ಒತ್ತಾಯಿಸಿದ್ದಾರೆ.
ಮೈತ್ರಿಕೂಟ ರ‍್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೆಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, “ನಮ್ಮ ಆಶಯಗಳನ್ನು ಅನುಮಾನಿಸುವ ಅಗತ್ಯವಿಲ್ಲ” ಎಂದರು.
ಕಾಂಗ್ರೆಸ್ ಒಳಗೆ ನಡೆದಿರುವ ರಾಜಕೀಯ ಬೆಳವಣಿಗೆ ಕುರಿತಂತೆ ಬಿಜೆಪಿ ನಾಯಕರು ಯಾವ ಹೇಳಿಕೆಗಳನ್ನು ನೀಡಬಾರದೆಂದು ಸೂಚನೆ ಹೊರಡಿಸಲಾಗಿದೆ.
“ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಜತೆ ನಾನಿಂದ್ ಮಾತನಾಡಿದ್ದೇನೆ. ಆ ವೇಳೆ ಅವರು ಬಿಜೆಪಿ ನಾಯಕರು, ಕರ‍್ಯರ‍್ತರು ಯಾವುದೇ ಗೊಂದಲ ಸೃಷ್ಟಿಸಬಾರದೆಂದು ನಮಗೆ ಸೂಚಿಸಿದ್ದಾರೆ.ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ಯಾವುದೇ ಹೇಳಿಕೆಗಳನ್ನು ನಾವು ನೀಡಬಾರದು.ಬದಲಿಗೆ ನಾವು ಪ್ರಾಮಾಣಿಕ ಪ್ರತಿಪಕ್ಷವಾಗಿ ಕರ‍್ಯನರ‍್ವಹಿಸಬೇಕು ಎಂದಿದ್ದಾರೆ” ಯಡಿಯೂರಪ್ಪ ಹೇಳಿದರು.
ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತದ ಪ್ರಯೋಜನ ಪಡೆಯಲು, ಸಮ್ಮಿಶ್ರ ರ‍್ಕಾರವನ್ನು ಬುಡಮೇಲುಗೊಳಿಸಲು ಬಿಜೆಪಿ ಪ್ರಯತ್ನಿಸಿದೆ ಎನುವ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆ ಬಳಿಕ ಶಾ ಈ ಸೂಚನೆ ನೀಡಿದ್ದಾರೆ.
ಬೆಳಗಾವಿ ಪ್ರಭಾವಿ ನಾಯಕರಾದ ಸತೀಶ್ ಜಾರಕಿಹೋಳಿ ಹಾಗೂ ರಮೇಶ್ ಜಾರಕಿಹೋಳಿ ಸೋದರರು ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರೊಡನೆ ಭಿನ್ನಾಭಿಪ್ರಾಯ ತಾಳಿರುವುದು ಸಮ್ಮಿಶ್ರ ರ‍್ಕಾರದ ಮೇಲೆ ಕರಿನೆರಳನ್ನು ಚಾಚಿದೆ.

loading...