ಕುತೂಹಲ ಮೂಡಿಸಿದ ಪಟ್ಟಣ ಪಂಚಾಯತಿ ಅಧ್ಯಕ್ಷ ಸ್ಥಾನ

0
12

ಯೂನುಸ್ ಮೂಲಿಮನಿ
ನಾಲತವಾಡ: ನಾಲತವಾಡ ಪಟ್ಟಣ ಪಂಚಾಯತ ಎರಡನೇ ಅವಧಿ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಮೀಸಲು ಪ್ರಕಟ. ತಿರ್ವ ಕುತೂಹಲ ಕೆರಳಿಸದ ಅಧ್ಯಕ್ಷ ಸ್ಥಾನ. ನಾಲತವಾಡ ಪ.ಪಂ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮೀಸಲು ಪಡೆದರು ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಅ ಮಹಿಳೆ ಮೀಸಲು ಪ್ರಕಟವಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಲ್ಲಿ ರಾಜಕೀಯ ಲೆಕ್ಕಾಚಾರ ಆರಂಭವಾಗಿದೆ. ೧೪ ಸದಸ್ಯರ ಬಲದ ಪ.ಪಂಗೆ ೬ ಕಾಂಗ್ರೆಸ್, ೬ ಜೆಡಿಎಸ್, ೧ ಪಕ್ಷೆÃತರ, ೧ ಬಿಜೆಪಿ ಆಯ್ಕೆಯಾಗಿದ್ದಾರೆ. ಮೊದಲ ಅವಧಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಅವರ ಸೋದರನ ಮಗ ಪೃಥ್ವಿರಾಜ ನಾಡಗೌಡ ಅವಿರೋಧವಾಗಿ ಆಯ್ಕೆಯಾದರೆ ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಅದೃಷ್ಟಕರವಾಗಿ ಲಭಿಸಿತು, ಇನ್ನು ಕಾಂಗ್ರೆÃಸ್ ಮತ್ತು ಬಿಜೆಪಿ ಪಕ್ಷ ಹೊಂದಾಣಿಕೆ ಮಾಡಿಕೊಂಡು ಮೊದಲ ಅವಧಿಯ ಅಧಿಕಾರವನ್ನು ನಡೆಸಿದ್ದಾರೆ.
ಎಲ್ಲರ ಚಿತ್ತ ನಾಲತವಾಡ ದತ್ತ: ಹೌದು ತಾಲೂಕಿನ ರಾಜಕೀಯ ಪ್ರತಿಷ್ಠೆಯ ಗ್ರಾಮವೆಂದೆ ಖ್ಯಾತಿ ಪಡೆದಿರುವ ನಾಲತವಾಡ ಪಟ್ಟಣ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದೆ. ಈ ಬಾರಿ ಏನಿದ್ದರು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತಿರ್ವ ಪೈಪೋಟಿ ಏರ್ಪಡುವುದು ನಿಶ್ಚಯವಾಗಿದೆ, ಪ.ಪಂ ಹಿಂದಿನ ಅವಧಿಯಲ್ಲಿ ಜೆಡಿಎಸ್ ಪಕ್ಷದಿಂದ ಆಯ್ಕೆಯಾದ ಕೆಲವು ಸದಸ್ಯರನ್ನು ಕಾಂಗ್ರೆÃಸ್ ಆಡಳಿತ ಕಡೆಗಣಿಸಿದ್ದರಿಂದ ಜೆಡಿಎಸ್‌ನಲ್ಲಿದ ಮೂರು ಸದಸ್ಯರು ಹಾಲಿ ಶಾಸಕ ಎ.ಎಸ್.ಪಾಟೀನ ನಡಹಳ್ಳಿ ಅವರ ಕಡೆ ಗುರುತಿಸಿಕೊಂಡಿದ್ದಾರೆ. ಸದ್ಯ ಈಗ ಬಿಜೆಪಿಯ ಪಕ್ಷಕ್ಕೆ ನಾಲ್ಕು ಸದಸ್ಯರ ಬಲ ಬಂದಿದೆ. ಇನ್ನು ಒಂದು ವಿಷೇಶ ಸಂಗತಿ ಏನಂದರೆ ಎಸ್ಸಿ ಮಹಿಳೆ ಅಭ್ಯರ್ತಿ ಬಿಜೆಪಿ ಪಕ್ಷದಲ್ಲಿ ಇದ್ದ ಕಾರಣ ಅನಿವಾರ್ಯವಾಗಿ ಬಿಜೆಪಿ ಪಕ್ಷಕ್ಕೆ ಆಡಳಿತ ಬಿಟ್ಟು ಕೊಡುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷದ್ದಾಗಿದೆ. ಅದರಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ರಾಜಕೀಯವಾಗಿ ಬಹಳ ಚತುರ ಎಂದು ಖ್ಯಾತಿ ಗಳಿಸಿದ್ದರಿಂದ ಅವರು ಪಕ್ಷೆÃತರ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ತಮ್ಮ ಕಡೆ ಸೆಳೆಯಲು ಎಲ್ಲ ಕಸರತ್ತು ಮಾಡಬಹುದು ಎಂದು ಸಾರ್ವಜನಿಕರಲ್ಲಿ ಚರ್ಚೆ ಶುರುವಾಗಿದೆ.

ಯಾರಿಗೆ ಸ್ಥಾನ: ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ ಕೇವಲ ಒಬ್ಬರೆ ಅಭ್ಯರ್ಥಿಯಾಗಿರುವ ಲತಾ. ಸಿದ್ದಪ್ಪ. ಕಟ್ಟಿಮನಿ ಅಧ್ಯಕ್ಷ ಸ್ಥಾನ ಪಡೆದರು. ಹಿಂದುಳಿದ ವರ್ಗ ಅ ಮಹಿಳೆ ಸ್ಥಾನಕ್ಕೆ ಕಾಂಗೆಸ್ ಮತ್ತು ಜೆಡಿಎಸ್ ಅಭ್ಯರ್ಥಿ ನಡುವೆ ಪೈಪೂಟಿ ಏರ್ಪಡುತ್ತೆÃ, ಕಾಂಗ್ರೆಸ್‌ನ ಸಲ್ಮಾ ಬೇಗಂ ನಾಡದಾಳ ಹಾಗೂ ಜೆಡಿಎಎಸ್‌ನ ಭೀಮವ್ವ ಕ್ಷೆÃತ್ರಿ ನೇರ ಸ್ಪರ್ದೆಯಾಗುತ್ತದೆ ಭೀಮವ್ವ ಕ್ಷೆÃತ್ರಿ ಅವರೇ ಉಪಾಧ್ಯಕ್ಷ ಸ್ಥಾನ ಗಿಟ್ಟಿಸುವ ಸಾಧ್ಯತೆ ಹೆಚ್ಚಾಗಿದೆ.

loading...