ಕೃತಿಚೌರ್ಯ ಸಾಹಿತ್ಯ ಲೋಕಕ್ಕೆ ಮಾಡುವ ದ್ರೋಹ

0
0
loading...

ಕನ್ನಡಮ್ಮ ಸುದ್ದಿ-ಧಾರವಾಡ: ಮೂಲ ಬರಹಗಾರರ ಪರವಾನಿಗೆ ಇಲ್ಲದೇ ಅವರ ಕಥೆ, ಸಾಹಿತ್ಯವನ್ನು ಕದ್ದು, ತಿರುಚಿ ಬರೆದು, ತನ್ನದೇ ಎನ್ನುವುದು ಅಪ್ಪಟ ಕೃತಿಚೌರ್ಯ ಸಲ್ಲದು ಸಾಹಿತ್ಯ ಲೋಕಕ್ಕೆ ಮಾಡುವ ದ್ರೋಹ ಹಾಗೂ ಸ್ಯಯಂಕೃತ ಅಪರಾಧ ಎಂದು ಬುದ್ಧಿಸ್ಟ್ ಪಾಲಿ ಎಜುಕೇಶನ್ ರಿಸರ್ಚ ಟ್ರಸ್ಟ್‍ನ ಪಬ್ಬಜ್ಜೋರ ವಿತಿಪಾಲಿವಿಜ್ಜಾಮುನಿಯೋ ಹೇಳಿದರು.
ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಜಾನಪದ ಲೋಕ Àಆಯೋಜಿಸಿದ “ಧಾರವಾಡ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಾಳೆ ಬಾ ತಾಯವ್ವಾ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿದರು. ಹುತಾತ್ಮ ಮೈಲಾರ ಮಹದೇವರ ಬದುಕು-ಸಾವು ಸೋಮಶೇಖರ ಜಾಡರವರನ್ನು ಆಕóರ್ಷಿಸಿ ಅವರು ಕೈ ಹಿಡಿದರು. ಅವಸರ ಪಡದೇ, ಧಾರಾಳವಾಗಿ ಬೂಸಿ ಹೊಡೆದು ಬಚಾವಾಗುವ ಅವಕಾಶ ಇದ್ದರೂ ಒಲ್ಲದೇ, ಕೈಯಿಂದ ಹಣ ಖರ್ಚು ಮಾಡಿ, ವರ್ಷಾನುಗಟ್ಟಲೇ ಕಾಲು ಸವಿಸಿ, ಹುತಾತ್ಮನ ನಿಕಟವರ್ತಿಗಳನ್ನು ಸಂಪರ್ಕಿಸಿ, ಸತ್ಯಾಂಶಗಳನ್ನು ಸಂಗ್ರಹಿಸಿ, ಒಂದು ಥಿಸಿಸ್ಸೇ ಮಾಡಿಟ್ಟುಕೊಂಡು ನಾಟಕ ರಚಿಸಿ, ಸ್ವಾತಂತ್ರ್ಯಯೋಧರ ಮುಂದೆ ವಾಚನ ಮಾಡಿದರು. ಕಥೆ, ಸಾಹಿತ್ಯವನ್ನು ಕದ್ದು, ತಿರುಚಿ ಬರೆದು ಅನೇಕರು ಮೈಲಾರ ಮಹದೇವ ನಾಟಕ ಮಾಡುತ್ತಿದ್ದುದು ಇತಿಹಾಸದ ಕೊಲೆ, ಸತ್ಯದ ಕೊಲೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿಯವರು ಮಾತನಾಡಿ, ಮೂಲ ಬರಹಗಾರರನ್ನು ಸಂಪರ್ಕಿಸಿದರೆ ಖಂಡಿತವಾಗಿಯೂ ಪರವಾನಿಗೆ ನೀಡುವುದಷ್ಟೇ ಅಲ್ಲ ಮಾರ್ಗದರ್ಶನವನ್ನೂ ಮಾಡುತ್ತಾರೆ. ಆಗ ಕೃತಿಗೆ ಇನ್ನೂ ಹೆಚ್ಚಿನ ಮೆರಗು ದೊರಕುತ್ತದೆ ಎಂದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಡಿಕೇರಿ ಮಾತನಾಡಿ, ಬಂಡವಾಳವಿಲ್ಲದೇ ಬಡಾಯಿ ಕೊಚ್ಚಿಕೊಳ್ಳುವವರು, ಸರಕಾರದ ಹಣದೋಚಲೆಂದೇ ಜನ್ಮತಾಳಿದ ಸಂಘಟನೆಗಳು ಹಾಗೂ ಲೆಟರ್ ಹೆಡ್ ಕಲಾವಿದರು ಇದ್ದಲ್ಲಿ ಕೃತಿಚೌರ್ಯ ತಾಂಡವವಾಡುತ್ತಿರುತ್ತದೆ. ಇದೂ ಒಂದು ಸಾಮಾಜಿಕ ಪಿಡುಗಾಗಲು ನಾವು ಅವಕಾಶ ನೀಡಬಾರದು ಎಂದರು. ಸುಭಾಸ ಶಿಂಧೆ, ಡಾ. ಚೇತನಕುಮಾರ ನಾಯ್ಕ, ಡಾ ಅಭಿಲಾಷಾ ಚೇತನ್‍ರಾಜ್, ಕುಮಾರಿ ಭಾಗ್ಯಶ್ರೀ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅನೇಕ ಗಣ್ಯರನ್ನು ಸನ್ಮಾನಿಸಿ ಧಾರವಾಡ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

loading...