ಕೃಷಿ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ: ಶ್ರೀಗಳು

0
0
loading...

ವಿಜಯಪುರ: ಪ್ರತಿಯೊಬ್ಬ ರೈತ ಸಮಗ್ರ ಕೃಷಿ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶ್ರೀ ಸಿದ್ದೇಶ್ವರ ಸಂಸ್ಥೆಯ ಉಪಾಧ್ಯಕ್ಷ ಸಂಗು ಸಜ್ಜನ ಹೇಳಿದರು.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದ ಫ.ಗು.ಹಳಕಟ್ಟಿ ಸಭಾಭವನದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆ ಮತ್ತು ಶ್ರೀ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘÀ ಸಹಯೋಗದಲ್ಲಿ ವಿಜಯಪುರದಲ್ಲಿ ಡಿಸೆಂಬರನಲ್ಲಿ ನಡೆಯುವ ಭಾರತೀಯ ಸಂಸ್ಕøತಿ ಉತ್ಸವ-5, ಅಖೀಲ ಭಾರತ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದ ನಿಮ್ಮಿತ್ತ ಆಯೋಜಿಸಿದ ‘ಕೃಷಿ ಸಂಗಮ’ ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ರೈತರು ಏಕ ಬೇಳೆ ಮತ್ತು ಕಡಿಮೆ ಸಮಯದ ಅಧಿಕ ಇಳುವರಿಗಾಗಿ ರಾಸಾಯನಿಕ ಗೊಬ್ಬರಗಳಿಗೆ ಆಧ್ಯತೆ ನೀಡುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಇದೆಕ್ಕಲ್ಲ ಪರಿಹಾರವೆಂದರೆ ರೈತರು ಸಮಗ್ರ ಕೃಷಿಯಿಂದ ಸಾವಯವ ಕೃಷಿಯೆಡೆಗೆ ಹೆಜ್ಜೆಯಿಡಬೇಕೆಂದರು.
ನಮ್ಮ ದೇಶದ ಅತ್ಯಂತ ಗೌರವದ ಕಾಯಕವೆಂದರೆ ಕೃಷಿಯಾಗಿದೆ. ಜಾಗತೀಕರಣ ಮತ್ತು ನಗರೀಕರಣದ ಪ್ರಭಾವದಿಂದ ಗ್ರಾಮದ ಜನರು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕಳವಳ ವ್ಯಕ್ತಡಿಸಿದರು.
ಜ್ಞಾನಯೋಗಾಶ್ರಮ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸದಾಶಯದಂತೆ ವಿಜಯಪುರದಲ್ಲಿ ನಡೆಯುವ ಭಾರತೀಯ ಸಂಸ್ಕøತಿ ಉತ್ಸವದಲ್ಲಿ ದೇಶದ ಎಲ್ಲಾ ರಾಜ್ಯಗಳಿಂದ ಕರ್ನಾಟಕ ಸೇರಿದಂತೆ ಸುಮಾರು 15ರಿಂದ 20 ಲಕ್ಷ, ವಿದೇಶದಿಂದ ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮಕ್ಕೆ ಬರುವ ನೀರಿಕ್ಷೆಯಿದೆ ಎಂದರು.
ಕಾರ್ಯಕ್ರಮದಲ್ಲಿ ಏರ್ಪಡಿಸಿರುವ ಕೃಷಿ ಪ್ರಾತ್ಯೇಕ್ಷಿತತೆ ಪ್ರದರ್ಶಿನಿ ನೋಡುಗರಿಗೆ ಕೃಷಿಕೇತ್ರದ ಕಡೆಗೆ ಒಲವು ಮೂಡಿಸಲು ಪ್ರೇರಣೆ ನೀಡುವಂತಿರುತ್ತದೆ. ಈ ಎರಡು ಜಿಲ್ಲೆಯ ಕೃಷಿ ತಜ್ಞರು, ಕೃಷಿ ವಿಶ್ವವಿದ್ಯಾಲಯದ ಮುಖ್ಯಸ್ಥರು, ಕೃಷಿ ಪಂಡಿತರು, ಪ್ರಗತಿಪರ ರೈತರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕು ಎಂದು ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷಿ ವಿಸ್ತರಣಾ ಮುಖ್ಯಸ್ಥ ಡಾ.ಆರ್.ಬಿ.ಬೆಳ್ಳಿ ಅವರು ಮಾತನಾಡಿ, ಕೈಯಲ್ಲಿ ಪದÀವಿಯಿದ್ದರು ನೀರುದ್ಯೋಗಿಗಳಾಗಿ ನೌಕರಿಗಾಗಿ ಅಲೆಯದೆ, ಯುವಕರು ಕೃಷಿಕೇತ್ರದತ್ತ ಒಲವು ತೊರಿಸುವಂತೆ ಮಾಡಬೇಕಾಗಿದೆ ಎಂದರು.

ಭಾರತ ವಿಕಾಸ ಸಂಗಮದ ಕರ್ನಾಟಕ ವಿಭಾಗ ಪ್ರಮುಖರಾದ ಪಲ್ಲವಿ ಪಾಟೀಲ ಪ್ರಾಸ್ಥವಿಕವಾಗಿ ಮಾತನಾಡಿ, ಗ್ರಾಮೀಣ ಯುವಕರು ನೌಕರಿಗಾಗಿ ನಗರಕ್ಕೆ ವಲಸೆ ಹೋಗದೆ ಕೃಷಿಕಾಯಕದಲ್ಲಿ ಹೊಸ ಬದುಕನ್ನು ಕಟ್ಟಿಕೊಳ್ಳಬಹುದು ಎಂದರು. ಭಾರತೀಯ ಕೃಷಿಪದ್ಧತಿ ಜೊತೆಗೆ ವೈಜ್ಞಾನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡರೆ ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರುವುದಿಲ್ಲವೆಂದರು. ಪಶುಸಂಗೋಪನೆ, ತೋಟಗಾರಿಕೆ, ಅರಣ್ಯ ಕೃಷಿಗೂ ಸಹ ರೈತರು ಆಧ್ಯತೆ ನೀಡಬೇಕೆಂದರು.

ತೋಟಗಾರಿಕೆ ವಿಜ್ಞಾನಿ ಡಾ.ಪೀರಜಾದೆ, ಡಾ.ಎಸ್.ಎಚ್.ಗೋಲ್ಯಾಳ, ಡಾ.ಎಸ್.ಜಿ.ಅಸ್ಕಿ, ಕೃಷಿ ಅಧಿಕಾರಿಗಳಾದ ಗೀರಿಜಾ ಪಟ್ಟಣಶೆಟ್ಟಿ, ಜಯಪ್ರದ ದಶವಂತ, ಮಂಜುಳಾ ಬಂಕಾಪುರ, ಕೃಷಿ ಪಂಡಿತ ಎಸ್.ಟಿ. ಪಾಟೀಲ, ಶ್ರೇಷ್ಟ ಕೃಷಿಕ ಮಹಾಂತೇಶ ಕೌಲಗಿ, ಪ್ರಗತಿ ಪರ ರೈತರಾದ ಶಿವನಗೌಡ ಪಾಟೀಲ, ಯಮನಪ್ಪ ಉಳ್ಳಾಗಡ್ಡಿ, ಔಷಧಿ ಸಸ್ಯ ಪಾಲಕರಾದ ಎಸ್.ಎಸ್.ಸಜ್ಜನ. ರಘುವೀರ ಸಿಂಗ್, ಎಸ್.ಕೆ. ಗಾಳಿ ಉಪಸ್ಥಿತರಿದ್ದರು

loading...