ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮೇಲೆ ಹಲ್ಲೆ

0
0
loading...

ಕನ್ನಡಮ್ಮ ಸುದ್ದಿ-ಕುಮಟಾ: ಶ್ರೀಕುಮಾರ ಟ್ರಾವೆಲ್ಸ್‌ ಬಸ್ಸಿನ ಚಾಲಕನೋರ್ವ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನಿಗೆ ಹಲ್ಲೆ ನಡೆಸಿರುವ ಸಂಬಂಧ ಕುಮಟಾ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.
ಕುಮಟಾ ಘಟಕಕ್ಕೆ ಸೇರಿದ ಕುಮಟಾ-ಬಳ್ಳಾರಿ ಬಸ್ಸಿನ ಚಾಲಕ ವಿನೋದ ತುಳಸಿರಾಮ ರಾತೋಡ ಹಲ್ಲೆಗೊಳಗಾದ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ. ಇವರು ಬೆಳಗ್ಗೆ 6 ಗಂಟೆಗೆ ಕುಮಟಾ ಬಸ್‌ ನಿಲ್ದಾಣದಿಂದ ಶಿರಸಿ ಕಡೆ ತೆರಳುತ್ತಿರುವ ಸಂದರ್ಭದಲ್ಲಿ ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಸಿಹಳ್ಳ ಬಳಿ ಶ್ರೀಕುಮಾರ ಟ್ರಾವೆಲ್ಸ್‌ ಬಸ್ಸಿನ ಚಾಲಕನೋರ್ವ ಸೈಡ್‌ ಕೊಡುವ ವಿಚಾರದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ವಿನೋದ ಅವರನ್ನು ಅವಾಚ್ಯ ಶಬ್ಧದಲ್ಲಿ ನಿಂದಿಸುವ ಜೊತೆಗೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.
ಈ ಸಂಬಂಧ ಕೆಎಸ್‌ಆರ್‌ಟಿಸಿ ಬಸ್ಸಿನ ಚಾಲಕ ವಿನೋದ ರಾತೋಡ ಅವರು ಕುಮಟಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪಿಎಸ್‌ಐ ಸಂಪತ್‌ ಮುಂದಿನ ತನಿಖೆ ಕೈಗೊಂಡಿದ್ದಾರೆ.

loading...