ಕೊಪ್ಪಳ ನಗರಸಭೆ, ಕುಷ್ಟಗಿ ಪುರಸಭೆ ಕಾಂಗ್ರೆಸ್ ತೆಕ್ಕೆಗೆ

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಜಿಲ್ಲೆಯ 04 ಸ್ಥಳೀಯ ಸಂಸ್ಥೆಗಳ 104 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಸೋಮವಾರ ನಡೆದ ಫಲಿತಾಂಶದಲ್ಲಿ 47 ಕಾಂಗ್ರೆಸ್, 43 ಬಿಜೆಪಿ, 04 ಜೆಡಿಎಸ್ ಹಾಗೂ 10 ಜನ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಕೊಪ್ಪಳ ನಗರಸಭೆ ಹಾಗೂ ಕುಷ್ಟಗಿ ಪುರಸಭೆ ಕಾಂಗ್ರೆಸ್ ಪಾಲಾಗಿದ್ದು, ಯಲಬುರ್ಗಾ ಪಟ್ಟಣ ಪಂಚಾಯತಿ ಬಿಜೆಪಿ ಮಡಿಲಿಗೆ ಸೇರಿದೆ ಇನ್ನೂ ಗಂಗಾವತಿ ನಗರಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗಳಿಸಿದ್ದರೂ ಅತಂತ್ರ ಸ್ಥಿತಿ ನಿರ್ಮಾನವಾಗಿದೆ. ಮತ ಎಣಿಕೆ ಕಾರ್ಯವು ಆಯಾ ತಾಲೂಕಿನಲ್ಲಿ ಬೆಳಿಗ್ಗೆ ಎಂಟು ಗಂಟೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್‍ನಲ್ಲಿ ಆರಂಭವಾದ ಮತ ಎಣಿಕೆ, ನಾಲ್ಕು ತಾಲೂಕಗಳ ಏಳು ಕೊಠಡಿಗಳಲ್ಲಿ 24 ಟೆಬಲ್‍ಗಳ ಮೂಲಕ ಮತ ಏಣಿಕೆ ನಡೆಸಲಾಯಿತು, ಸುಮಾರು 10 ಗಂಟೆ ವೇಳೆಗೆ ಸಂಪೂರ್ಣ ಫಲಿತಾಂಶವನ್ನು ಪ್ರಕಟಿಸಲಾಯಿತು. ಕೊಪ್ಪಳ ನಗರಸಭೆ : ಕೊಪ್ಪಳ ನಗರಸಭೆಯಲ್ಲಿ 31 ವಾರ್ಡಿನಲ್ಲಿ ಕಾಂಗ್ರೆಸ್ 15, ಬಿಜೆಪಿ 10 ಜೆಡಿಎಸ್ 02 ಹಾಗೂ ಪಕ್ಷೇತರ 04 ಜನ ಆಯ್ಕೆಯಾಗಿದ್ದಾರೆ.
ಗಂಗಾವತಿ ನಗರಸಭೆ: ಗಂಗಾವತಿ ನಗರಸಭೆಯ 35 ವಾರ್ಡಿಗೆ ಸಂಬಂದಿಸಿದಂತೆ ಕಾಂಗ್ರೆಸ್ 17, ಬಿಜೆಪಿ 14, ಜೆಡಿಎಸ್ 02, ಹಾಗೂ ಪಕ್ಷೇತರ ಇಬ್ಬರು ಆಯ್ಕೆಯಾಗುವುದರ ಮೂಲಕ ಅತಂತ್ರ ಫಲಿತಾಂಶ ಬಂದಿದೆ. ಆದರೆ ಇಲ್ಲಿ ಅಧ್ಯಕ್ಷ ಸ್ಥಾನಕ್ಕೆ 18 ಸೀಟುಗಳು ಬೇಕಾಗಿದೆ. ಕಾಂಗ್ರೆಸ್‍ನವರು ಇಬ್ಬರ ಪಕ್ಷೇತರನ್ನು ಒಂದೂಗೂಡಿದರೆ ಸರಳವಾಗಿ ಆಡಳಿತ ಚುಕ್ಕಾಣಿ ಹಿಡಿಯಬಹುದು. ಯಲಬುರ್ಗಾ ಪಟ್ಟಣ ಪಂಚಾಯತಿ: ಯಲಬುರ್ಗಾ ಪಟ್ಟಣ ಪಂಚಾಯತಿಯಲ್ಲಿ 15 ವಾರ್ಡುಗಳಲ್ಲಿ ಬಿಜೆಪಿ 11, ಕಾಂಗ್ರೆಸ್ 03, ಹಾಗೂ ಒರ್ವ ಪಕ್ಷೇತರ ಗೇಲವು ಸಾಧಿಸಿದ್ದಾರೆ. ಆದರೆ ಇಲ್ಲಿಯ ಮತದಾರ ಬಿಜೆಪಿಗೆ ನಿಶ್ಚಳ ಬಹುಮತ ನೀಡಿದ್ದರಿಂದ ಪಂಚಾಯಿತಿಯಲ್ಲಿ ತನ್ನ ಅಧಿಕಾರದ ಭಾವುಟ ಆರಿಸಲಿದೆ. ಕುಷ್ಟಗಿ ಪುರಸಭೆ: ಕುಷ್ಟಗಿ ಪುರಸಭೆಯ 23 ವಾರ್ಡುಗಳಲ್ಲಿ ಕಾಂಗ್ರೆಸ್ 12, ಬಿಜೆಪಿ 08, ಪಕ್ಷೇತರ ಒಂದು ಅವಿರೋಧ ಆಯ್ಕೆಯ ಸೇರಿ ಮೂವರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್‍ಗೆ ನಿಶ್ಚಳ ಬಹುಮತ ನೀಡಿದ್ದರಿಂದ ಕುಷ್ಟಗಿ ಪುರಸಭೆ ಕಾಂಗ್ರೆಸ್ ಗದ್ದುಗೆ ಏರಲಿದೆ. ಸಮಬಲ ಚಿಟಿಯಲ್ಲಿ ಗೆದ್ದ ಬಿಜೆಪಿ : ಕೊಪ್ಪಳ ನಗರಸಭೆಯ ವಾರ್ಡ್ 5ರಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗೆ ಸಮಬಲ ಮತಗಳು ಬಂದಿದ್ದರಿಂದ, ಅಭ್ಯರ್ಥಿಗಳ ಒಪ್ಪಿಗೆ ಮೇರೆಗೆ ಚಿಟಿ ಎತ್ತುವ ಮೂಲಕ ಫಲಿತಾಂಶ ಪ್ರಕಟಿಸಲಾಯಿತು. ಮತೆ ಎಣಿಕೆ ಆರಂಭದಿಂದಲೂ ಕಾಂಗ್ರೆಸ್‍ನ ರೇಣಿಕಾ ಕಲ್ಲಾಕ್ಷಪ್ಪ ಪೂಜಾರ, ಹಾಗೂ ಬಿಜೆಪಿ ವಿದ್ಯಾ ಸುನೀಲ ಹೆಸರೂರು ನಡುವೆ ಬಾರಿ ಕುತೂಹಲದ ಹೋರಾಟ ಇತ್ತು, ಇಬ್ಬರೂ ಅಭ್ಯರ್ಥಿಗಳಿಗೂ 233 ಮತಗಳು ಪಡೆಯುವುದರ ಮೂಲಕ ಸಮಬಲದ ಮತಗಳನ್ನು ಗಳಿಸಿದರು. ಕೊನೆಗೆ ಚುನಾವಣೆ ಅಧಿಕಾರಿ ಚುನಾವಣೆಯ ನಿಯಮದ ಪ್ರಕಾರ ಚಿಟಿ ಎತ್ತಿದಾಗ ವಿಜಯದ ಅದೃಷ್ಟ ಬಿಜೆಪಿಗೆ ಬಂತು. ಬಿಜೆಪಿಯ ವಿದ್ಯಾ ಸುನೀಲ ಹೆಸರೂರು ಚಿಟಿಯಲ್ಲಿ ತಮ್ಮ ಗೆಲವು ಕಂಡುಕೊಂಡರು. ವಿದ್ಯಾ ವಿನಯ ಅವರು ಎಂಬಿಎ ಪಧವಿದರೆಯಾಗಿದ್ದು, ಕೊಪ್ಪಳ ನಗರಸಭೆಯ 31 ಅಭ್ಯರ್ಥಿಗಳ ಪೈಕಿ ವಿದ್ಯಾ ಸುನೀಲ ಹೆಸರೂರು ಎಚ್ಚು ವಿದ್ಯಾವಂತೆ ಅಭ್ಯರ್ಥಿ ಎಂದು ಗುರುತಿಸಲಾಗಿದೆ.

loading...