ಕ್ರೀಡೆಗಳಲ್ಲಿ ಉತ್ತಮ ಸ್ಪರ್ಧೆ ನೀಡಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು

0
0
loading...

ಕನ್ನಡಮ್ಮ ಸುದ್ದಿ-ಹಳಿಯಾಳ: ಪ್ರಸಕ್ತ ಸಾಲಿನಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಲಯ, ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸ್ಪರ್ಧೆ ನೀಡಿ ಅನೇಕ ಪ್ರಶಸ್ತಿ ಪಡೆಯುವ ಮೂಲಕ ಶಾಲೆಯ ಹಾಗೂ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ವಲಯ ಮಟ್ಟ: ಬಾಲಕರ ವಿಭಾಗದಲ್ಲಿ ಜೋಕಿಮ್ ಕಾತ್ನಾಳಕರ 100 ಮೀ, 200ಮೀ, 80ಮೀ ಹರ್ಡಲ್ಸ್ ಪ್ರಥಮ ಸ್ಥಾನ ಪಡೆದು ವೀರಾಗ್ರಣಿ ಬಾಲಕ ಪ್ರಶಸ್ತಿ ಪಡೆದಿದ್ದಾನೆ. ಖಾದರಲಿಂಗ್ 200 ಮೀ ದ್ವಿತೀಯ, ಚಕ್ರ ಎಸೆತ ಎತ್ತರ ಜಿಗಿತ ತೃತೀಯ, ಏಕನಾಥ 400ಮೀ, 600ಮೀ ತೃತೀಯ ಪವನ ಎತ್ತರ ಜಿಗಿತ ದ್ವಿತೀಯ, ಗಣೇಶ ಚಕ್ರ ಎಸೆತ ಪ್ರಥಮ, ಗಂಡು ಎಸೆತ ತೃತೀಯ, 4*100 ಮೀ ರೀಲೆ ಪ್ರಥಮ ಖೋ-ಖೋ ಕಬ್ಬಡ್ಡಿ ದ್ವಿತೀಯ ವ್ವಾಲಿಬಾಲ್ ಪ್ರಥಮ.
ಬಾಲಕಿಯರ ವಿಭಾಗದಲ್ಲಿ ಗ್ರೇಸಿಕಾ 100 ಮೀ ದ್ವಿತೀಯ, ಯೋಗಿಣಿ 200 ಮೀ ತೃತೀಯ ಸಂಜನಾ 600 ಮೀ ಪ್ರಥಮ ಎತ್ತರ ಜಿಗಿತ ತೃತೀಯ, ಗ್ರೇಸಿ ಗುಂಡು ಎಸೆತ ಚಕ್ರ ಎಸೆತ ಪ್ರಥಮ. ಜೋಯಲಾ ಎತ್ತರ ಜಿಗಿತ ದ್ವಿತೀಯ. ಈ ಕ್ರೀಡಾಕೂಟದಲ್ಲಿ ಕಾರ್ಮೆಲ್ ಶಾಲೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಕೊಂಡಿದೆ. ತಾಲೂಕ ಮಟ್ಟ: ಜೋಕಿಮ 100ಮೀ, 80ಮೀ ಹರ್ಡಲ್ಸ್ ದ್ವಿತೀಯ, 200ಮೀ ಪ್ರಥಮ. ಖಾದರಲಿಂಗ 200ಮೀ ದ್ವಿತೀಯ. ಗಿಪ್ಸ್ 400ಮೀ ದ್ವಿತೀಯ, ಪವನ ಎತ್ತರ ಜಿಗಿತ ದ್ವತೀಯ. ಗಣೇಶ ಚಕ್ರ ಎಸೆತ ತೃತೀಯ 4*100 ಮೀ ರೀಲೆ ಪ್ರಥಮ. ವಾಲಿಬಾಲ್ ದ್ವಿತೀಯ.
ಜಿಲ್ಲಾ ಮಟ್ಟ: ಜೋಕಿಮ 200ಮೀ ಪ್ರಥಮ ಅಭಿಮನ್ಯು 41 ಕೆ.ಜಿ ಕುಸ್ತಿ ಪ್ರಥಮ ಪಡೆದು ಇಬ್ಬರು ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಕ ಚರ್ಚಿಲ್ ದಾಲಮೆತ ಅವರು ತರಬೇತಿ ನೀಡಿರುವ ಕ್ರೀಡಾಪಟುಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಾಲಾ ಸಂಚಾಲಕ ಫಾ|| ಜ್ಞಾನ ಪ್ರಕಾಶ ರಾವ್, ಮುಖ್ಯಾಧ್ಯಾಪಕಿ ಪ್ರೆಸಿಲ್ಲಾ ಜೂಡಿತ ಪಿಂಟೊ, ಶಿಕ್ಷಕ ವೃಂದ, ಶ್ಲಾಘಿಸಿದ್ದಾರೆ.

loading...