ಖಂಡ್ರೆ ಸಂದಾನ ಸೂತ್ರಾ ಯಶಸ್ವಿ: ಪಿಎಲ್ ಡಿ‌ ಬ್ಯಾಂಕ್ ಚುನಾವಣೆ ಗದ್ದಲ ಅಂತ್ಯ

0
0
ಕನ್ನಡಮ್ಮ ಸುದ್ದಿ- ಬೆಳಗಾವಿ: ಪಿಎಲ್‌ಡಿ ಬ್ಯಾಂಕ್‌ಅಧ್ಯಕ್ಷ‌ ಉಪಾಧ್ಯಕ್ಷ ಚುನಾವಣೆ ಸಣ್ಣ ವಿಷಯವಾಗಿದೆ. ಒಮ್ಮತದ ಅಭ್ಯರ್ಥಿಗಳಾದ ಅಧ್ಯಕ್ಷ ಸ್ಥಾನವನ್ನು ಮಹದೇವ ಪಾಟೀಲ ಹಾಗೂ ಉಪಾಧ್ಯಕ್ಷ  ಸ್ಥಾನ ಬಾಪು ಸಾಬ್ ಜಮಾದಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ನಾಯಕರ‌ ಮಧ್ಯೆ ಸಂವನದ ಕೊರತೆಯಿಂದ ಸಮಸ್ಯೆ ಉದ್ಬವಾಗಿದೆ. ಪಕ್ಷದ ಎಲ್ಲ‌ ಕಾಂಗ್ರೆಸ್ ಮುಖಂಡರೊಂದಿಗೆ
ಮಾತನಾಡಿ  ಒಮ್ಮತ ಅಭಿಪ್ರಾಯದಿಂದ ಅಧ್ಯಕ್ಷ ಉಪಾದ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ‌ ಎಂದರು.
ಪಿಎಲ್ ಡಿ ಬ್ಯಾಂಕ್ ಚುನಾವಣೆ ದಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಲ್ಲ. ಪಕ್ಷಕ್ಕಾಗಿ ಎಲ್ಲರೂ ಜಿಲ್ಲೆಯಲ್ಲಿ ಒಮ್ಮತದಿಂದ ಇದ್ದಾರೆ ನಾಯಕರಲ್ಲಿ ಯಾವುದೇ ಭಿನ್ನಾಪ್ರಾಯವಿಲ್ಲೆಂದು ಸ್ಪಷ್ಟಡಿಸಿದರು.
ಸತೀಶ ಜಾರಕಿಹೊಳಿ ಮಾತನಾಡಿ,  ಈ ಹಿಂದೆ  ಸ್ಥಳಿಯ ಚುನಾವಣೆಯಾಗಿರುವುದರಿಂದ
ಇಲ್ಲೇ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳುತ್ತೆವೆಂದು ತಿಳಿಸಿದ್ದವೆ. ಆದರು ದೊಡ್ಡ ವಿಷಯವಾಗಿತ್ತು. ಪಕ್ಷದ ಮುಖಂಡರ ಅಭಿಪ್ರಾಯಕ್ಕೆ ಒಮ್ಮತವಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನವಲಗಟ್ಟಿ,ಈರಣ್ಣಾ ಮತ್ತಿಗಟ್ಟಿ
 ಸೇರಿದಂತೆ ಇತರರು ಇದ್ದರು.
loading...