ಗಂಗಾವತಿ ನಗರಸಭೆ ಚುನಾವಣೆ ಫಲಿತಾಂಶ ಅತಂತ್ರ

0
1
loading...

ಕನ್ನಡಮ್ಮ ಸುದ್ದಿ-ಗಂಗಾವತಿ: -ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಅತಂತ್ರ ಫಲಿತಾಂಶ ಹೊರಬಿದ್ದಿದೆ. ಅಧಿಕಾರ ಗದ್ದುಗೆಗಾಗಿ ಪೈಪೋಟಿ ನಡೆಸಿದ ಬಿಜೆಪಿ ಹಾಗೂ ಕಾಂಗ್ರೆಸ್‍ಗೆ ತೀವ್ರ ನಿರಾಸೆಯಾಗಿದ್ದು, ಸದ್ಯಕ್ಕೆ ಜೆಡಿಎಸ್ ಹಾಗೂ ಪಕ್ಷೇತರರ ಮೇಲೆ ಅವಲಂಬನೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಜೂನಿಯರ್ ಕಾಲೇಜ್‍ನಲ್ಲಿ ಸೋಮವಾರ ಬೆಳಿಗ್ಗೆ 08 ಗಂಟೆಗೆ ಪ್ರಾರಂಭವಾದ ಮತ ಎಣಿಕೆ ಕಾರ್ಯ ಯಾವುದೇ ಗೊಂದಲಗಳಿಲ್ಲದೇ ಸುಮಾರು 12 ಗಂಟೆಗೆ ಪೂರ್ಣಗೊಂಡಿತು. ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಫಲಿತಾಂಶದ ಮಾಹಿತಿ ನೀಡಿದ ಚುನಾವಣಾಧಿಕಾರಿ ಜಂಬಣ್ಣ ಐಲಿ ನಗರಸಭೆಯ ಒಟ್ಟು 35 ವಾರ್ಡ್‍ಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್-17, ಬಿಜೆಪಿ-14, ಜೆಡಿಎಸ್-02, ಪಕ್ಷೇತರ-02 ಸ್ಥಾನ ಗಳಿಸಿದೆ ಎಂದು ಅಧಿಕೃತವಾಗಿ ಪ್ರಕಟಿಸಿದರು. ಇದೇ ವೇಳೆ ಕಾಂಗ್ರೆಸ್‍ನ ವಿಜೇತ ಅಭ್ಯರ್ಥಿ ಶ್ಯಾಮೀದ್ ಮನಿಯಾರ್ ಮಾತನಾಡಿ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ನೇತೃತ್ವದಲ್ಲಿ ಸತತ 15 ವರ್ಷಗಳಿಂದ ನಗರ ಅಭಿವೃದ್ದಿಗಾಗಿ ಶ್ರಮಿಸಲಾಗುತ್ತಿದೆ. ಜನಪರ ಕಾರ್ಯಗಳನ್ನು ಮೆಚ್ಚಿರುವ ಮತದಾರರು ಕಾಂಗ್ರೆಸ್‍ಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಸೂಚಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವೇ ನಗರಸಭೆಯ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದು, ಅಭಿವೃದ್ದಿಯ ನಾಗಾಲೋಟ ಮುಂದುವರೆಯಲಿದೆ ಎಂದು ತಿಳಿಸಿದರು. ಪರಣ್ಣ ವಿಶ್ವಾಸ : ನಗರಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 14 ಸ್ಥಾನಗಳನ್ನು ಪಡೆದಿದ್ದು ಜೆಡಿಎಸ್ ಹಾಗೂ ಪಕ್ಷೇತರರ ಬೆಂಬಲದಿಂದ ಅಧಿಕಾರದ ಗದ್ದುಗೆ ಏರಲಿದ್ದೇವೆ. ಅಧಿಕಾರಕ್ಕಾಗಿ ಕಾಂಗ್ರೆಸ್ ವಾಮಮಾರ್ಗ ಹಿಡಿಯುವ ಸಾಧ್ಯತೆಯಿದ್ದು ಯಾವುದೇ ರೀತಿಯ ಕುದುರೆ ವ್ಯಾಪಾರಕ್ಕೆ ಅವಕಾಶ ಕೊಡುವುದಿಲ್ಲ. ಪಕ್ಷೇತರರ ವಿಶ್ವಾಸ ಪಡೆದು ಎಲ್ಲರ ಸಹಕಾರದೊಂದಿಗೆ ನಗರದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಲಾಗುವುದು ಎಂದು ತಿಳಿಸಿದರು. ಬಾಕ್ಸ್ ಕಾಂಗ್ರೆಸ್ ಪಕ್ಷದ ಶಾಮೀದ್ ಮನಿಯಾರ್, ಮನೋಹರಸ್ವಾಮಿ ಹಿರೇಮಠ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಮುಖಂಡ ದೇವಪ್ಪ ಕಾಮದೊಡ್ಡಿ ಪರಾಭಾವಗೊಂಡಿದ್ದು ಬಿಜೆಪಿಯ ಯಂಕಪ್ಪ ಕಟ್ಟಿಮನಿ, ಕಾಂಗ್ರೆಸ್‍ನ ಅರ್ಜುನ ನಾಯಕ ಮೊದಲ ಪ್ರಯತ್ನದಲ್ಲೇ ಮತದಾರರಿಂದ ತಿರಸ್ಕøತಗೊಂಡಿದ್ದಾರೆ. ಬಿಜೆಪಿಯ ಬಂಡಾಯ ಅಭ್ಯರ್ಥಿಗಳಾದ ಸೈಯ್ಯದ್‍ಅಲಿ, ಮನೋಹರಗೌಡ ಹೇರೂರು ಇನ್ನಿತರ ಪ್ರಮುಖರಿಗೆ ಸೋಲಿನ ರುಚಿ ತೋರಿಸಿದ್ದಾರೆ. ವಿಜೇತ ಅಭ್ಯರ್ಥಿಗಳ ಪಟ್ಟಿ 1 ನೇ ವಾರ್ಡ – ಬಿಜೆಪಿ, ವಾಸು ದೇವರಾವï 2 ನೇ ವಾರ್ಡ – ಬಿಜೆಪಿ, ಹೀರಾಬಾಯಿ 3 ನೇ ವಾರ್ಡ – ಬಿಜೆಪಿ, ಈರಮ್ಮ 4 ನೇ ವಾರ್ಡ – ಪಕ್ಷೇತರ, ಶರಬೋಜಿ ರಾವï 5 ನೇ ವಾರ್ಡ – ಜೆಡಿಎಸï, ಮಹ್ಮದï ಉಸ್ಮಾನï 6 ನೇ ವಾರ್ಡ – ಜೆಡಿಎಸï , ಅಬ್ದುಲï ಜಬ್ಬರï 7 ನೇ ವಾರ್ಡ – ಕಾಂಗ್ರೆಸï, ಮನೋಹರï ಸ್ವಾಮಿ 8 ನೇ ವಾರ್ಡ – ಕಾಂಗ್ರೆಸï, ಖಾಸೀ ಸಾಬï ಗದ್ವಾಲï 9 ನೇ ವಾರ್ಡ – ಕಾಂಗ್ರೆಸï, ಅಪ್ಸಾನï ಬೇಗಂ 10 ನೇ ವಾರ್ಡ – ಕಾಂಗ್ರೆಸï, ಮಸ್ತಾಕï ಅಲಿ 11 ನೇ ವಾರ್ಡ – ಬಿಜೆಪಿ, ಪರಶುರಾಮ ಮಡ್ಡೇರï 12 ನೇ ವಾರ್ಡ – ಕಾಂಗ್ರೆಸï, ಭೀಮವ್ವ ಹಾದಿಮನಿ 13 ನೇ ವಾರ್ಡ – ಕಾಂಗ್ರೆಸï, ಪಾರ್ವತಮ್ಮï 14 ನೇ ವಾರ್ಡ – ಬಿಜೆಪಿ, ಎಸï, ಉಮೇಶï ಸಿಂಗನಾಳï 15 ನೇ ವಾರ್ಡ – ಕಾಂಗ್ರೆಸï ಜರೀನಾ ಬೇಗಂ 16 ನೇ ವಾರ್ಡ – ಕಾಂಗ್ರೆಸï, ಮೌಲಾಸಾಬï 17 ನೇ ವಾರ್ಡ – ಬಿಜೆಪಿ, ನೀಲಕಂಠಪ್ಪ ಕಟ್ಟಿಮನಿ 18 ನೇ ವಾರ್ಡ – ಬಿಜೆಪಿ, ರಮೇಶï ಚೌಡ್ಕಿ 19 ನೇ ವಾರ್ಡ – ಬಿಜೆಪಿ, ಅಜೇಯï ಕುಮಾರï ಬಿಚ್ಚಾಲಿ 20 ನೇ ವಾರ್ಡ – ಬಿಜೆಪಿ, ಜಯಶ್ರೀ ಸಿದ್ದಾಪುರ 21 ನೇ ವಾರ್ಡ – ಕಾಂಗ್ರೆಸï, ಎಸï ಸೋಮನಾಥ ಭಂಡಾರ 22 ನೇ ವಾರ್ಡ – ಕಾಂಗ್ರೆಸï, ಸುನೀತಾ ಶ್ಯಾವಿ 23 ನೇ ವಾರ್ಡ – ಕಾಂಗ್ರೆಸï, ಅಬಿದಾ ಮುದ್ದಾಬಳ್ಳಿ 24 ನೇ ವಾರ್ಡ – ಕಾಂಗ್ರೆಸï, ಜರೀನಾ ಬೇಗಂ 25 ನೇ ವಾರ್ಡ – ಕಾಂಗ್ರೆಸï, ಶ್ಯಾಮಿದï ಸಾಬï ಮನಿಯಾರï 26 ನೇ ವಾರ್ಡ – ಬಿಜೆಪಿ, ಸುಧಾ ಸೋಮನಾಥï 27 ನೇ ವಾರ್ಡ – ಬಿಜೆಪಿ, ಸಂತೋಷï ಕುಮಾರï ಮಾಲಿಪಾಟೀಲï 28 ನೇ ವಾರ್ಡ – ಕಾಂಗ್ರೆಸï, ಎಫï ರಾಘವೇಂದ್ರ 29 ನೇ ವಾರ್ಡ – ಪಕ್ಷೇತರ, ವೆಂಕಟರಮಣ 30 ನೇ ವಾರ್ಡ – ಬಿಜೆಪಿ, ಸುಚೇತಾ ಸಿರಿಗೇರಿ 31 ನೇ ವಾರ್ಡ – ಕಾಂಗ್ರೆಸï, ಮಾಲಾಶ್ರೀ ಸಂದೀಪï ಕುಮಾರï 32 ನೇ ವಾರ್ಡ – ಕಾಂಗ್ರೆಸï, ಹುಲಿಗೆಮ್ಮ ಕಿರಿಕಿರಿ 33 ನೇ ವಾರ್ಡ – ಬಿಜೆಪಿ, ಎಸï ಅರ್ಚನಾ ಶ್ರೇಷ್ಠಿ 34 ನೇ ವಾರ್ಡ – ಕಾಂಗ್ರೆಸï, ಪಾರ್ವತಮ್ಮ ನಾಯಕಿ 35 ನೇ ವಾರ್ಡ – ಬಿಜೆಪಿ, ಅನಿತಾ ನಾಯಕï.

loading...