ಗಣಪತಿ, ಮೊಹರಂ ಹಬ್ಬ: ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

0
0
loading...

ನಿಡಗುಂದಿ: ಗಣಪತಿ ಹಾಗೂ ಮೊಹರಂ ಹಬ್ಬದ ಹಿನ್ನಲೆಯಲ್ಲಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಜರುಗಿತು.
ಅಲ್ಲಿ ಮಾತನಾಡಿದ ಪಿಎಸ್‌ಐ ಬಸವರಾಜ ಬಿಸಲಕೊಪ್ಪ, ಸೌಹಾರ್ದತೆಗೆ ಹೆಸರುವಾಸಿಯಾಗಿರುವ ನಿಡಗುಂದಿಯಲ್ಲಿ ಎಲ್ಲರೂ ಶಾಂತ ರೀತಿಯಿಂದ ಭಾವೈಕ್ಯತೆಯಿಂದ ಹಬ್ಬವನ್ನು ಆಚರಿಸಬೇಕು, ಗಣಪತಿ ಹಬ್ಬದಲ್ಲಿ ಅತ್ಯಂತ ಜೋರಾಗಿ ಧ್ವನಿವರ್ಧಕ ಹಚ್ಚುವುದನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಗಣಪತಿ ಕೂಡಿಸುವ ಮುನ್ನ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಬೇಕು, ಯಾವುದೇ ಕಾರಣಕ್ಕೂ ದಾಂಧಲೆ ಮಾಡಬಾರದು, ಮಾಡಿದರೆ ಅಂಥವರು ಎಷ್ಟೆÃ ದೊಡ್ಡವರಾಗಲಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೆÃನೆ ಎಂದರು.

ಗ್ರಾಮದ ಪ್ರಮುಖರಾದ ಎಂ.ಎಂ. ಮುಲ್ಲಾ, ಶೇಖಪ್ಪ ಬಳಿಗಾರ ಮಾತನಾಡಿ, ಹಬ್ಬಗಳು ಧರ್ಮದ ಪ್ರತೀಕ, ಆದರೆ ಬಹುತೇಕ ಜನ ಕುಡಿದ ಮತ್ತಿನಲ್ಲಿ ನೃತ್ಯ ಮಾಡುವುದು, ಇನ್ನಿÃತರ ಕಾರ್ಯ ಮಾಡುತ್ತಾರೆ, ಇದು ತಪ್ಪು, ದೇವರ ಹಬ್ಬದಲ್ಲಿ ಕುಡಿಯುವುದನ್ನು ಕಟ್ಟುನಿಟ್ಟಾಗಿ ಬಿಡಬೇಕು, ಕುಡಿದು ದರ್ಶನ ಮಾಡುವುದು ಮಾಡಬಾರದು, ಗಣೇಶೋತ್ಸವವನ್ನು ಆದರ್ಶವಾಗಿ ಆಚರಿಸಬೇಕು ಎಂದರು.
ಆರ್.ಬಿ. ಜನಗೊಂಡ ಮಾತನಾಡಿ, ಗಣೇಶೋತ್ಸವದಲ್ಲಿ ದಾಂಧಲೆ ಮಾಡುವವರ ವಿರುದ್ದ ರೌಡಿ ಶೀಟರ್ ತೆಗೆಯಲಾಗುವುದು ಎಂದರು.

ಶಿವಾನಂದ ಅವಟಿ, ಶಿವಾನಂದ ಮುಚ್ಚಂಡಿ ಇತರರು ಇದ್ದರು.

loading...