ಗೌರಿಗೆ ಗುಂಡು ಹಾರಿಸಿದ್ದು ಪರುಶರಾಮ್; ಎಫ್‍ಎಸ್‍ಎಲ್ ವರದಿ ದೃಢ

0
10
loading...

ಬೆಂಗಳೂರು: ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ಹಂತಕನನ್ನು ಸಾಬೀತು ಪಡಿಸುವಲ್ಲಿ ಎಸ್‍ಐಟಿ ತಂಡ ಯಶಸ್ವಿಯಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ಗೌರಿಗೆ ಗುಂಡು ಹಾರಿಸಿದ್ದು,ಯಾರು ಎನ್ನುವುದರ ಬಗ್ಗೆ ಗುಜರಾತ್ ಎಫ್‍ಎಸ್‍ಎಲ್ ವರದಿ ದೃಢಪಡಿಸಿದೆ.ಬಂಧಿತರಾಗಿರುವ ಆರೋಪಿಗಳಲ್ಲಿ ಪ್ರಮುಖನಾಗಿರುವ ಪರುಶರಾಮ್ ಹತ್ಯೆ ನಡೆಸಿರುವುದು ಎಂದು ಸಾಬೀತಾಗಿದೆ.

ಜೂನ್ ತಿಂಗಳ ದೃಶ್ಯಾವಳಿಗಳನ್ನು ಎಫ್‍ಎಸ್‍ಎಲ್‍ಗೆ ಎಸ್‍ಐಟಿ ತಂಡ ಕಳುಹಿಸಿತ್ತು.ಇದೀಗ ಎಸ್‍ಐಟಿ ನೀಡಿದ್ದ ಸಾಕ್ಷ್ಯಗಳನ್ನು ಪರೀಶೀಲಿಸಿ ಎಫ್‍ಎಸ್‍ಎಲ್ ವರದಿ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಎಸ್‍ಐಟಿ ಅಧಿಕಾರಿಗಳು ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಧರ್ಮ ಎನ್ನುವ ವಿಚಾರ ಒಂದೇ ನನ್ನ ತಲೆಯಲ್ಲಿತ್ತು. ಗೌರಿ ಅವರನ್ನು ಕೊಂದರೆ ಧರ್ಮ ಉಳಿಯತ್ತೆ,ಅದಕ್ಕೆ ಕೊಂದು ಮುಗಿಸಿದೆ.ಗೌರಿಲಂಕೇಶ್ ಬಗ್ಗೆ ನನ್ನ ಹಿರಿಯರು ಹೇಳುವಾಗ ಆಕೆ ಒಬ್ಬ ಧರ್ಮ ವಿರೋಧಿ ಎಂದು ನನ್ನ ರಕ್ತ ಕುದಿಯುತ್ತಿತ್ತು. ಅದಕ್ಕೆ ಆಕೆಯನ್ನು ಕೊಂದು ಹಾಕಿದೆ.

ಗೌರಿಹಿಂದೂ ವಿರೋಧಿ ಎಂದು ನಿರ್ಧರಿಸಿ ಕೊಲೆ ಮಾಡಿದೆ.ಗೌರಿಯನ್ನು ಕೊಂದ ನಂತರ ನನ್ನಿಂದ ಧರ್ಮ ಉಳಿಯಿತು, ಧರ್ಮಕ್ಕೆ ನಾನು ಅಳಿಲು ಸೇವೆ ಮಾಡಿದೆ ಎಂಬ ಹೆಮ್ಮೆಯಿಂದಲೇ ಮನೆಗೆ ಹೋದೆ ಎಂದು ಪ್ರಕರಣದ ಆರೋಪಿ ಬಾಯ್ಬಿಟ್ಟಿದ್ದಾನೆ.ಗೌರಿ ಹಂತಕರನ್ನು ಬಂಧಿಸುವ ಮೊದಲು ಎಸ್‍ಐಟಿ ತಂಡ ಆರೋಪಿಗಳ ರೇಖಾಚಿತ್ರ ಕೂಡ ಬಿಡಿಸಿ ಮಾಧ್ಯಮಕ್ಕೆ ಬಿಡುಗಡೆ ಮಾಡಿತ್ತು.ಆ ರೇಖಾ ಚಿತ್ರದಲ್ಲಿ ಈತನ ಕೂಡ ಇದ್ದ.ಇದೇ ಆರೋಪಿ ಗೌರಿ ಹತ್ಯೆ ನಡೆಸಿದ್ದು ಅನ್ನೋದು ಸಾಬೀತಾಗಿದೆ ಎಂದು ತಿಳಿದುಬಂದಿದೆ.

loading...