ಜಗಜೀವನರಾಮ ಮೂರ್ತಿ ವಿರೂಪಗೊಳಿಸಿದವರ ಮೇಲೆ ಕ್ರಮಕ್ಕೆ ಆಗ್ರಹ

0
0
loading...

ವಿಜಯಪುರ: ಹುಳಿಮಾವು ಗ್ರಾಮದಲ್ಲಿ ಬಾಬೂಜಿ ಅವರ ಮೂರ್ತಿ ವಿರೂಪಗೊಳಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ಮಾದಿಗರ ಸಂಘ ಜಿಲ್ಲಾ ಘಟಕದ ವತಿಯಿಂದ ಶುಕ್ರವಾರ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ರ‍್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿತು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾಧ್ಯಕ್ಷ ಶ್ರಿÃಶೈಲ ರತ್ನಾಕರ ಮಾತನಾಡಿ, ಮೈಸೂರು ಜಿಲ್ಲೆಯ ಹುಳಿಮಾವು ಗ್ರಾಮದಲ್ಲಿ ಡಾ. ಬಾಬು ಜಗಜೀವನರಾಮ ಮೂರ್ತಿಯನ್ನು ವಿರೂಪಗೊಳಿಸಿರುವ ಘಟನೆ ನಡೆದಿರುವುದು ಖಂಡನೀಯ. ಹಸಿರು ಕ್ರಾಂತಿಯ ಮೂಲಕ ಕೃಷಿ ರಂಗದ ಬಲವರ್ಧನೆಗೆ ಶ್ರಮಿಸಿದ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಅವಮಾನಗೊಳಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು. ದೇಶ ಕಂಡ ಮಹಾನ್ ಸ್ವಾತಂತ್ರö್ಯ ಹೋರಾಟಗಾರ, ಸಂವಿಧಾನದ ರಚನಾ ಸಭೆ ಸದಸ್ಯ, ಉಪ ಪ್ರಧಾನಿ ಸೇರಿದಂತೆ ಹತ್ತಾರು ಮಹತ್ತರವಾದ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ಬಾಬೂಜಿ ಅವರ ಪ್ರತಿಮೆಯನ್ನು ಹಾಳುವ ಮಾಡಿರುವುದು ಖಂಡನಾರ್ಹ. ಇ.ಎಸ್.ಐ. ಪಿ.ಎಫ್. ಇನ್ನೂ ಅನೇಕ ಶೋಷಿತರ ಕಾರ್ಮಿಕರ ಬದುಕಿನಲ್ಲಿ ಬೆಳಕಾಗಿ ಪ್ರಜ್ವಲಿಸಿದ ವ್ಯಕ್ತಿ ಡಾ.ಬಾಬೂಜಿ, ಅಂತಹ ವ್ಯಕ್ತಿಯ ಪ್ರತಿಮೆಯನ್ನು ಅವಮಾನಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು, ಮೂರ್ತಿ ಭಗ್ನ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ರಾಜಶೇಖರ ಬಾಸಗಿ, ಮುತ್ತು ಶೇಗುಣಸಿ, ಪರಶುರಾಮ ರೋಣಿಹಾಳ, ರವಿಚಂದ್ರ ದೊಡಮನಿ, ಶ್ರಿÃಕಾಂತ ಬಿರಾದಾರ, ರಮೇಶ ಬಿರಾದಾರ, ಸಿದ್ದು ಶೇಗುಣಸಿ, ಮಲ್ಲಪ್ಪ ಬಾಗೇವಾಡಿ, ಸುರೇಶ ಗಚ್ಚಿನಮನಿ, ಕಿರಣ ಆಸಂಗಿ, ಮಲ್ಲು ವಾಲಿಕಾರ, ರವಿ ನಾರಾಯಣಪುರ, ಪ್ರಕಾಶ ಸಾಧುಕರ, ಪರಶುರಾಮ ದೊಡಮನಿ ಪಾಲ್ಗೊಂಡಿದ್ದರು.

loading...