ಜನತಾ ಬಜಾರ : ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

0
0
loading...

ಬಾಗಲಕೋಟೆ: ಇಲ್ಲಿನ ಬಾಗಲಕೋಟ ಜಿಲ್ಲಾ ಕಂಜುಮರ್ಸ ಕೋ-ಆಫ್ ಹೋಲ-ಸೇಲ್ (ಜ£ತಾ ಬಜಾರ)ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಚಂದ್ರಶೇಖರ ಜಿಗಜಿನ್ನಿ ಉಪಾಧ್ಯಕ್ಷರಾಗಿ ಗುಳೇದಗುಡ್ಡದ ವೀರಬಸಪ್ಪ ತಿಪ್ಪಾ ಅವರು ಅವಿರೋಧವಾಗಿ ಆಯ್ಕೆಯಾದರು.
ಬುಧವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಇವರಿಬ್ಬರು ಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದವು ಪರಿಶೀಲನೆ ಹಾಗೂ ವಾಪಾಸ್ಸಾತಿ ನಂತರ ಅವಿರೋಧ ಆಯ್ಕೆಯನ್ನು ರಿಟರ್ನಿಂಗ್ ಆಫಿಸರ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಎಲ್.ಹೊದ್ಲುರ ಘೋಷಿಸಿದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದ ಬಾಗಲಕೋಟೆಯ ಸುಭಾಷ ಹೊದ್ಲುರ,ಭೀಮಸಿ ಯಮನಪ್ಪ ಮೋರೆ,ಸುನೀಲ ಬಾಳಾಸಾಹೇಬ ಕಲಬುರ್ಗಿ,ಪ್ರಕಾಶ ಜಿಗಜಿನ್ನಿ,ರವೀಂದ್ರ ಸಂಗಮ,ಶ್ರಿÃಮತಿ ಜ್ಯೊÃತಿ ಸಂಗಪ್ಪ ನಾಶಿ, ದಾನಮ್ಮ ಬಸನಗೌಡ ಗೌಡರ, ಬಸನಗೌಡ ಅಪ್ಪನಗೌಡ ಗೌಡರ, ಶಿವಲೀಲಾ ಅಶೋಕ ಚಟ್ಟೆÃರ,ಬಿಳಗಿಯ ಮುರಗೇಂದ್ರ ನಾಗರಾಳ, ಬೇವೂರಿನ ನೀಲಪ್ಪ ಪೂಜಾರ,ಬದಾಮಿಯ ಅಡಿಯಪ್ಪ ಯಲ್ಲಪ್ಪ ಢಾಣಕಶಿರೂರ ಅವರುಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜನತ ಬಜಾರನ ವ್ಯವಸ್ಥಾಪಕ ಬಸವರಾಜ ಮಾಗಿ ಸಿಬ್ಬಂದಿ ವರ್ಗದವರಾದ ಮಳಿಯಪ್ಪ ಗೌಡರ ಜಮಖಂಡಿ, ಅರಳಿಮಟ್ಟಿ ಪಾಲ್ಗೊಂಡಿದ್ದರು.

loading...