ಜನರ ಕಣ್ಣಿಗೆ ಮಣ್ಣು ಎರಚಿದ ಕಾಂಗ್ರೆಸ್: ಡಾ.ವಿಶ್ವನಾಥ ಆರೋಪ

0
0
loading...

ಜನರ ಕಣ್ಣಿಗೆ ಮಣ್ಣು ಎರಚಿದ ಕಾಂಗ್ರೆಸ್: ಡಾ.ವಿಶ್ವನಾಥ ಆರೋಪ
ಬೈಲಹೊಂಗಲ: ಸ್ವತಂತ್ರಗೊಂಡ ಭಾರತ ದೇಶವನ್ನು ಸುಮಾರು ೫೭ವರ್ಷ ಆಡಳಿತಮಾಡಿದ ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣು ಎರೆಚ್ಚುವ ಕಾರ್ಯಮಾಡುತ್ತಿದ್ದು ಪ್ರಪಂಚದಲ್ಲಿ ನಾಲ್ಕನೇಯ ಆರ್ಥಿಕ ಸದೃಡ ರಾಷ್ಟçವಾಗಿ ಹೊರಹೊಮ್ಮುವ ಸಂದರ್ಭದಲ್ಲಿ ತೈಲ ಬೇಲೆ ಮಾತ್ರ ಮುಂಡಿಟ್ಟುಕೊಂಡು ಕಾಂಗ್ರೆÃಸ್ ಪಕ್ಷ ಭಾರತ ಬಂದ್ ಕರೆ ನೀಡುತ್ತಿರುವದು ಪ್ರಜ್ಞಾವಂತ ಭಾರತೀಯರಲ್ಲಿ ಜಿಜ್ಞಾಸೆ ಮೂಡುವಂತಾಗಿದೆ ಎಂದು ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳು ಕರೆನೀಡಿದ ಭಾರತ ಬಂದ್ ಹಿನ್ನಲೆಯಲ್ಲಿ ಪತ್ರಿಕಾ ಪ್ರಕಟಣೆ ನೀಡಿದ ಅವರು, ಪ್ರತಿಶತ ೮೫ರಷ್ಟು ಅವಧಿ ಆಡಳಿತ ಮಾಡಿದ ಕಾಂಗ್ರೆÃಸ್ ಪಕ್ಷ ದೇಶವನ್ನು ತೈಲದಲ್ಲಿ ಸ್ವಾವಲಂಭನೆ ಮಾಡದೆ ಆಮದು ಮಾಡಿಕೊಳ್ಳುವದರಲ್ಲೆ ಕಾಲಹರಣ ಮಾಡಿ ದೂರು ದೃಷ್ಟಿಯಿಲ್ಲದೆ ಈಗ ಕೇಂದ್ರ ಸರ್ಕಾರ ಜಾರಿಗೆ ತಂದ ಜಿಎಸ್‌ಟಿ ಯಿಂದ ತೈಲವನ್ನು ಹೋರಗಿಡುವಂತೆ ಮಾಡಿ, ಕಾಂಗ್ರೆÃಸ್ ತೈಲ ಬೆಲೆಯ ಏರಿಕೆಯ ವಿರುದ್ದ ಭಾರತ ಬಂದ್ ಕರೆನೀಡುತ್ತಿರುವದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸಿದರಲ್ಲದೆ ತೈಲ ಕ್ಷೆÃತ್ರದಲ್ಲಿ ವಾಸ್ತವ ಚಿತ್ರಣವನ್ನು ಕಾಂಗ್ರೆÃಸ್ ಪಕ್ಷ ಸಂಪೂರ್ಣವಾಗಿ ಮುಚ್ಚಿಡಲು ಪ್ರಯತ್ನಿಸುತ್ತಿದೆ ಎಂದು ದೂರಿದರು.
೨೦೧೭ ಜೂನ ತಿಂಗಳಲ್ಲಿ ಅಂತರಾಷ್ಟಿçÃಯ ಮಾರುಕಟ್ಟೆಯಲ್ಲಿ ತೈಲ ಬೆಲೆ ೪೫.೭೫ ಡಾಲರ್ ಇದ್ದಾಗ ಡಿಜೈಲ್ ರೂ ೫೩.೮೫, ಪೆಟ್ರೊÃಲ್ ಬೆಲೆ ರೂ ೬೪.೨೩ ಇತ್ತು. ಜಾಗತಿಕ ಮಟ್ಟದಲ್ಲಿ ಕಳೆದ ೧೪ತಿಂಗಳಲ್ಲಿ ತೈಲ ಬೆಲೆ ಶೇ ೭೩ ರಷ್ಟು ಏರಿಕೆ ಕಂಡು ತೈಲ ಬೆಲೆ ಇಂದು ೭೯.೩೫ ಡಾಲರಗಳಾಗಿದ್ದರು ತೈಲದಲ್ಲಿ ಶೇ ೨೯.೫೮ ರಷ್ಟು ಮಾತ್ರ ಏರಿಕೆಯಾಗಿರುವದು ಕೇಂದ್ರ ಸರ್ಕಾರದ ಸಾಧನೆಯಾಗಿದೆ ಎಂದರು.
ಅಲ್ಲದೆ ತೈಲ ಬೆಲೆಯಲ್ಲಿ ಎಷ್ಟೆ ಏರಿಕೆಯಾದರು ಕೇಂದ್ರ ಸಕಾರಕ್ಕೆ ಹೋಗುವ ತೆರೆಗೆ ನಿಶ್ಚಿತವಾಗಿದ್ದು ಪ್ರತಿ ಲೀ. ಪೆಟ್ರೊÃಲದಿಂದ ಕೇಂದ್ರ ಸರ್ಕಾರಕ್ಕೆ ರೂ ೬.೬೬ದೊರೆಯಲಿದ್ದು ರಾಜ್ಯ ಸರ್ಕಾರಕ್ಕೆ ರೂ ೨೫ ದೊರೆಯಲಿದೆ (೪ಪಟ್ಟು). ಅಲ್ಲದೆ ರಾಷ್ಟಿçÃಯ ಹೆದ್ದಾರಿಗಳ ನಿರ್ಮಾಣಕ್ಕಾಗಿ ಪ್ರತಿ ಲೀ.ಕ್ಕೆ ರೂ ೮ ಪ್ರಾಧಿಕಾರಕ್ಕೆ ಜಮೆಯಾಗಿ ಪ್ರತಿ ವರ್ಷ ರಾಜ್ಯದಲ್ಲಿ ಹೆದ್ದಾರಿ ನಿರ್ಮಾಣಕ್ಕೆ ರೂ ೧,೪೪,೦೦೦ ಕೋಟಿ ಹೂಡಿಕೆಯಾಗುತ್ತಿದೆ. ಕಳೆದ ೧೪ ತಿಂಗಳಲ್ಲಿ ಪ್ರತಿ ಲೀ.ಪೆಟ್ರೊÃಲಕ್ಕೆ ರೂ ೧೯ ಗಳು ಹೆಚ್ಚಾದಾಗ ರಾಜ್ಯಕ್ಕೆ ೫.೫೦ ರೂಗಳು ದೊರೆತಿದ್ದು ಕೇಂದ್ರ ಸರ್ಕಾರದ ತೆರಿಗೆ ಪಾಲು ಶೂನ್ಯವಾಗಿದೆ ಎಂದರು.
ಕಳೆದ ೧೪ ವರ್ಷಗಳಲ್ಲಿ ಯುಪಿಎ ಸರ್ಕಾರ ಬಾಕಿ ಇಟ್ಟು ಕೊಂಡಿದ್ದ ಸಬ್ಸಿಡಿ ಹಣ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಮೋದಿ ಸಕಾರ ಬಂದ ಮೇಲೆ ತಿರಿಸಿರುವದು ಎನ್‌ಡಿಎ ಸರ್ಕಾರದ ಸಾಧನೆಯಾಗಿದ್ದು ಕಳೆದ ಅವಧಿಯಲ್ಲಿ ದೇಶವನ್ನು ಬ್ರಷ್ಟಾಚರದಿಂದ ತಿಂದುಹಾಕಿದ್ದ ಕಾಂಗ್ರೆÃಸ್ ಸಕಾರ ಜನರಿಗೆ ಈ ಎಲ್ಲ ವಿಷಯಗಳನ್ನು ಮರೆ ಮಾಚುತ್ತಿದೆ ಎಂದು ಕಿಡಿಕಾರಿದರು. ಕಾಂಗ್ರೆÃಸ್ ಸರ್ಕಾರ ಕಳೆದ ೬೭ ವರ್ಷದಲ್ಲಿ ಭಾರತ ದೇಶಾಧ್ಯಂತ ೧೩ ಕೋಟಿ ಜನಕ್ಕೆ ಗ್ಯಾಸ್ ಸಂಪರ್ಕ ಕಲ್ಪಿಸಿದ್ದರೆ ಎನ್‌ಡಿಎ ಸರ್ಕಾರ ಕಳೆದ ೪.೫ವರ್ಷದಲ್ಲಿ ೧೦ಕೋಟಿ ಅನೀಲಸಂಪರ್ಕದಲ್ಲಿ ಬಿಪಿಎಲ್ ಕುಟುಂಬಗಳಿಗೆ ೫ಕೋಟಿ ಜನರಿಗೆ ಉಚಿತ ನೀಡಲಾಗಿದೆ ಎಂದರು. ಅಲ್ಲದೆ ಯುಪಿಎ ಸರ್ಕಾರದಲ್ಲಿ ಹಣದುಬ್ಬರ ೧೦ಕ್ಕಿಂತಲೂ ಹೆಚ್ಚಾಗಿತ್ತು ಇಂದು ಹಣದುಬ್ಬರ ೪.೧೭ಕ್ಕೆ ಇಳಿದರು ಕೇವಲ ತೈಲ ಬೆಲೆಯನ್ನು ಮುಂದಿಟ್ಟುಕೊಂಡು ಮುಂಬರುವ ಲೋಕಸಭಾ ಚುನಾವಣೆಗೆ ಗಿಮಿಕ್ ಮಾಡುತ್ತಿರುವ ಕಾಂಗ್ರೆÃಸ್ ಪಕ್ಷಕ್ಕೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಆದ್ದರಿಂದ ಪ್ರಜ್ಞಾವಂತ ದೇಶದ ಜನತೆ ಇದನ್ನು ಅರ್ಥೈಸಿಕೊಂಡು ಮತ್ತೆ ದೇಶದ ಅಭಿವೃದ್ಧಿಗಾಗಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಗಳನ್ನಾಗಿ ಮಾಡಿ ವಿಶ್ವದ ಅಗ್ರ ್ರಗಣ್ಯ ನಾಯಕರಲ್ಲಿ ಶ್ರೆÃಷ್ಠರನ್ನಾಗಿಸಬೇಕೆಂದರು.

loading...