ಜನಸಂಪರ್ಕ ಸಭೆಯ ಮೂಲಕ ಅಹವಾಲು ಸ್ವಿÃಕಾರ

0
0
loading...

ಬಾಗಲಕೋಟೆ: ಜಿಲ್ಲೆಯ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ತೇರದಾಳ ಮತ್ತು ರಬಕವಿ-ಬನಹಟ್ಟಿಯಲ್ಲಿ ಜರುಗಿದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಅವರು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವಿÃಕರಿಸಿದರು.
ಗುರುವಾರ ಜಮಖಂಡಿ ಉಪವಿಭಾಗದ ತೇರದಾಳ ಮತ್ತು ರಬಕವಿ-ಬನಹಟ್ಟಿಯಲ್ಲಿ ಜರುಗಿದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನೊಂದ ಜನತೆ ತಮ್ಮ ಅಹವಾಲು ಕುಂದು ಕೊರತೆಗಳನ್ನು ಹೊತ್ತುಕೊಂಡು ಬಂದಾಗ ಅವುಗಳಿಗೆ ಸ್ಪಂಧಿಸಿ ಇತ್ಯರ್ಥ ಪಡಿಸುವ ಕೆಲಸವಾಗಬೇಕು. ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು. ಸರಕಾರ ಜಾರಿಗೆ ತಂದ ಪ್ರತಿಯೊಂದು ಯೋಜನೆಗಳನ್ನು ಸಮರ್ಪಕವಾಗಿ ಜಿಲ್ಲೆಯ ಜನತೆಗೆ ತಲುಪಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು. ಈ ಜನಸಂಪರ್ಕ ಸಭೆಯಲ್ಲಿ ಒಟ್ಟು ೧೪ ಅರ್ಜಿಗಳು ಸ್ವಿÃಕರಿಸಲಾಗಿದ್ದು, ಅದರಲ್ಲಿ ತೇರದಾಳದಿಂದ ೮ ಹಾಗೂ ರಬಕವಿ-ಬನಹಟ್ಟಿಯಿಂದ ೬ ಅರ್ಜಿಗಳು ಸ್ವಿÃಕೃತವಾಗಿವೆ.
ಅಗಷ್ಟ್ ಮಾಹೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಭೇಟಿ ನೀಡಿದಾಗ ಸಾರ್ವಜನಿಕರಿಂದ ಒಟ್ಟು ೩೯ ಅಹವಾಲುಗಳು ಸ್ವಿÃಕೃತಗೊಂಡಿರುತ್ತವೆ. ಅದರಲ್ಲಿ ಬಾಗಲಕೋಟ ೦೯, ಬದಾಮಿ ೧೦, ಹುನಗುಂದ ೦೩, ಜಮಖಂಡಿ ೧೩, ಮುಧೋಳ ೦೩, ಬೀಳಗಿ ೦೧ ಅಹವಾಲುಗಳು ಸ್ವಿÃಕೃತಗೊಂಡಿವೆ. ಬಂದ ಅರ್ಜಿಗಳಲ್ಲಿ ಮಳೆಯಿಂದ ಬೆಳೆಹಾನಿ ಪರಿಹಾರ, ಜಮೀನು ಖರೀದಿ, ನ್ಯಾಯಬೆಲೆ ಮಂಜೂರಾತಿ, ಸಿಂದುತ್ವ ಪ್ರಮಾಣ ಪತ್ರ, ಆಸ್ತಿ ಅತಿಕ್ರಮಣ, ಜಮೀನು ಹಕ್ಕು ಪತ್ರ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಬಂದಿದ್ದು, ಅವುಗಳಿಗೆ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

loading...