ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸಿ

0
0
loading...

ರಬಕವಿ-ಬನಹಟ್ಟಿ: ನಗರಸಭಾ ಸದಸ್ಯರು ವಾರ್ಡ್ನ ಜನತೆಯ ಕಷ್ಟ ಸುಖಗಳನ್ನು ಅರಿತು ನಡೆಯಬೇಕು. ಅವರ ಮನೆ ಮನೆಗೆ ತೆರಳಿ ಅವರ ಸಮಸ್ಯೆಗಳನ್ನು ಅರಿತುಕೊಂಡು ಅವುಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಹೊಸೂರ ಗ್ರಾಮದಲ್ಲಿ ಕುರುಹಿನಶೆಟ್ಟಿ ಸಮಾಜ ಮತ್ತು ಶ್ರಿÃ ನೀಲಕಂಠೇಶ್ವರ ಮಠದ ವತಿಯಿಂದ ನೂತನ ನಗರಸಭಾ ಸದಸ್ಯರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಅಧಿಕಾರ ಶಾಶ್ವತವಲ್ಲ. ಜನರ ಪ್ರಿÃತಿ, ವಿಶ್ವಾಸ ಶಾಶ್ವತ, ಪಕ್ಷದ ತತ್ವ, ಸಿದ್ಧಾಂತ ಹಾಗೂ ನಿರ್ಣಯಗಳಿಗೆ ಪ್ರತಿಯೊಬ್ಬರು ಬದ್ಧರಾಗಿರಬೇಕು. ರಬಕವಿ-ಬನಹಟ್ಟಿಯಲ್ಲಿನ ಮೂಲಭೂತ ಸೌಲಭ್ಯಗಳನ್ನು ಸೇರಿದಂತೆ ಸಾರ್ವಜನಿಕರ ಸಮಸ್ಯೆಗಳಿಗೆ ಬಿಜೆಪಿ ಸ್ಪಂದಿಸಲಿದೆ. ಆ ನಿಟ್ಟಿನಲ್ಲಿ ವಾರ್ಡಿನ ಎಲ್ಲ ನೂತನ ಸದಸ್ಯರು ಸಮಸ್ಯೆಗಳ ಕುರಿತು ಪರೀಶೀಲಿಸಿ ಜನರ ಸೇವೆ ಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಡಿವೆಪ್ಪ ಕರಿಜಾಡರ, ಶಂಕರೆಪ್ಪ ಬುಜರುಕ, ಮಾದೇವ ಚೋಳಿ, ಮಂಜುನಾಥ ಲೇಂಡಿ, ಮಲ್ಲೆÃಶ ಬಿಸನಾಳ, ಹಣಮಂತ ಕಳ್ಳಿಗುದ್ದಿ, ಗಿರಮಲ್ಲಪ್ಪ ಬಾಗೇವಾಡಿ, ಶೇಖರ ಹಕಲದಡ್ಡಿ, ಮಾನಿಂಗ ಯಳಸಂಗ, ಪರಪ್ಪ ಗಿರಿಸಾಗರ, ಮಹಾಲಿಂಗಪ್ಪ ಕರಿಜಾಡರ, ಮಾಣಿಂಗ ಸಂಕಾನಟ್ಟಿ, ಗಂಗಪ್ಪ ಬೀಳಗಿ, ಮಲ್ಲಿಕಾಜಿ ಕರಿಜಾಡರ, ಶ್ರಿÃಶೈಲ ಮೂಲಿಮನಿ, ಚಂದ್ರಶೇಖರ ವಜ್ರಮಟ್ಟಿ, ಕಾಡಪ್ಪ ಹಳ್ಳಿ, ರಾಮು ಜೈನಾಪೂರ ಸೇರಿದಂತೆ ಅನೇಕರು ಇದ್ದರು.

loading...