ಜಾರಕಿಹೊಳಿ ಕುಟುಂಬದಿಂದ ಕೊಲೆ ಬೇದರಿಕೆ:ಮುನವಳ್ಳಿ ಆರೋಪ

0
0
loading...

ಜಾರಕಿಹೊಳಿ ಕುಟುಂಬದಿಂದ ಕೊಲೆ ಬೇದರಿಕೆ:ಮುನವಳ್ಳಿ ಆರೋಪ

ಕನ್ನಡಮ್ಮ ಸುದ್ದಿ:ಜಾರಕಿಹೊಳಿ ಕುಟುಂಬ ನನ್ನಗೆ ಕೊಲೆ ಬೇದರಿಕೆ ಹಾಕಿದೆ. ನನಗೆ ನೀಡಿದ ಗನ್ ಮ್ಯಾನ್ ನನ್ನು ರಮೇಶ ಜಾರಕಿಹೊಳಿ ಷಡ್ಯಂತ್ರ ತೆಗೆದು ಹಾಕಿದರು. ಕಾಂಗ್ರೆಸ್ ಮುಖಂಡರಾದ ಟಿ.ಬಿ.ಜಯಚಂದ್ರ ಹಾಗೂ ಕಾಗೋಡು ತಿಮ್ಮಪ್ಪ ಇವರಿಗೆ ಜಾರಕಿಹೊಳಿ ಸಹೋದರರಿಗೆ ಸಹಾಯ ಮಾಡಿದ ಹಿನ್ನೆಲೆಯಲ್ಲಿ ಅವರು ವಿಧಾನ ಸಭಾ ಚುನಾವಣೆಯಲ್ಲಿ ಸೋಲು ಅನುಭವಿಸುವಂತಾಯಿತು ಎಂದು ಜಾರಕಿಹೊಳಿ ಸಹೋದರರ ವಿರುದ್ದ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ನಗರದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು ಡಿ.ಕೆ.ಶಿವಕುಮಾರ ಅವರೇ ದೈರ್ಯದಿಂದ ಬೆಳಗಾವಿಗೆ ಬನ್ನಿ ಇದು ಜಾರಕಿಹೊಳಿ ಅವರ ಸ್ವತಲ್ಲ ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಕಾಂಗ್ರೆಸ್ ಗೆ ಬ್ಲ್ಯಾಕ್ ಮೇಲ್ ಮಾಡುವರನ್ನು ವಜಾ ಮಾಡಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಜಾರಕಿಹೊಳಿ ಸಹೋದರರ ಸ್ವತಲ್ಲ. ಪಕ್ಷದಲ್ಲಿದ್ದುಕೊಂಡು ರಾಹುಲ ಗಾಂಧಿ ಅವರನ್ನು ಪ್ರಧಾನಿ ಹುದ್ದೆಯಲ್ಲಿದ್ದ ಕೆಳಗಿಳಿಸುವ ಹುನ್ನಾರವನ್ನು ಜಾರಕಿಹೊಳಿ ಸಹೋದರರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

loading...