ಜಾರಕಿಹೋಳಿ ವರ್ಸಸ್ ಹೆಬ್ಬಾಳಕರ್ ನಡುವಿನ ಕಿಚ್ಚು ತಣ್ಣಗಾಗಿಸಲು ಖಂಡ್ರೆ ಎಂಟ್ರಿ.

0
3
loading...

ಜಾರಕಿಹೋಳಿ ವರ್ಸಸ್ ಹೆಬ್ಬಾಳಕರ್ ನಡುವಿನ ಕಿಚ್ಚು ತಣ್ಣಗಾಗಿಸಲು ಖಂಡ್ರೆ ಎಂಟ್ರಿ.

ಕನ್ನಡಮ್ಮ ಸುದ್ದಿ-ಬೆಳಗಾವಿ: ತೀವ್ರ ಕೂತುಹಲ ಮೂಡಿಸಿರುವ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕಿನ ಅದ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣಾ ಇಂದು ನಡೆಯಲಿದ್ದು ,ಜಿಲ್ಲೆಯ ಇಬ್ಬರು ಪ್ರಭಾವಿಗಳ ಕಿಚ್ವನ್ನು ತಣ್ಣಗಾಗಿಸಲು ಕೆಪಿಸಿಸಿ ಕಾರ್ಯದ್ಯಕ್ಷ ಈಶ್ವರ ಖಂಡ್ರೆ ಎಂಟ್ರಿ ಕೊಟ್ಟಿದ್ದಾರೆ .

ಜಾರಕಿಹೋಳಿ ಬ್ರದರ್ಸ್ ಮತ್ತು ಹೆಬ್ಬಾಳಕರ್ ಬಣದ ನಡುವೆ ಚುನಾವಣಾ ಪೈಪೋಟಿ ನಡೆಯುತ್ತಿದೆ.ಲಕ್ಷ್ಮಿ ಬಣ ಮೇಲುಗೈ ಸಾಧಿಸಿದರೆ ದೊಸ್ತಿ ಸರಕಾರ ಕಂಟಕ ಎಂದು ಹೇಳಲಾಗುತ್ತಿದೆ ,ಒಂದು ವೇಳೆ ಜಾರಕಿಹೋಳಿ ಬ್ರದರ್ ಗೆದ್ದರೆ ಲಕ್ಷ್ಮಿ ಮುಖಭಂಗ ಜೊತೆಗೆ ರಾಜ್ಯಮಟ್ಟದ ನಾಯಕನಿಗೆ ಹಿನ್ನೆಡೆ ಎಂದು ಹೇಳಲಾಗುತ್ತಿದೆ.

ಈ ಎಲ್ಲ ಬೆಳವಣಿಗೆ ಅರಿತು ಕೊನೆಗೂ ಕೈ ಮುಖಂಡ ರಾಜಿ ಸಂಧಾನಕ್ಕೆ ಮುಂದಾಗಿದ್ದಾರೆ .ಖಂಡ್ರೆ ಇಬ್ಬರು ನಾಯಕರ ಜೊತೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ .ರಾಜಿ ಸಂಧಾನ ಪ್ರಕಾರ ಮೊದಲ ಅವಧಿ ಅದ್ಯಕ್ಷ ಸ್ಥಾನ ಸತೀಶ ಬಣಕ್ಕೆ ನಂತರದ ಅವಧಿ ಲಕ್ಷ್ಮಿ ಬಣಕ್ಕೆ ನೀಡುವ ಸಂಧಾನ ಖಂಡ್ರೆ ಇಬ್ಬರು ನಾಯಕ ಮುಂದಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ .

loading...