ಜಿಪಂ ಸಾಮಾನ್ಯ ಸಭೆಯಲ್ಲಿ ಅದೇ ಹಾಡು ….ಅದೇ ರಾಗಾ…… ಮಾಹಿತಿ ದೊರೆಯುತ್ತಿಲ್ಲವೆಂದು ಅಧ್ಯಕ್ಷೆ ಆರೋಪ

0
1
loading...

ಜಿಪಂ ಸಾಮಾನ್ಯ ಸಭೆಯಲ್ಲಿ ಅದೇ ಹಾಡು ….ಅದೇ ರಾಗಾ…….!  ಮಾಹಿತಿ ದೊರೆಯುತ್ತಿಲ್ಲವೆಂದು ಅಧ್ಯಕ್ಷೆ ಆರೋಪ

ಕನ್ನಡಮ್ಮ ಸುದ್ದಿ- ಬೆಳಗಾವಿ : ಪ್ರತಿ‌ ಸಾಮಾನ್ಯ ಸಭೆಯಲ್ಲಿ ಹೇಳುವಂತೆ ಈ ಬಾರಿಯು ಸಹ ಜಿಪಂಗೆ ಬರುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಸಿಇಒ ತಿಳಿಸುತ್ತಿಲ್ಲವೆಂದು ಜಿಪಂ.ಅಧ್ಯಕ್ಷ ಆಶಾ ಐಹೊಳೆ ಆರೋಪಿಸಿದರು.

ಗುರುವಾರ‌ ಜಿಲ್ಲಾ ಪಂಚಾಯತ ಸಮಾನ್ಯ ಸಭೆಯಲ್ಲಿ ಅಧ್ಯಕ್ಷರಿಗೆ,ಸದಸ್ಯರಿಗೆ ಜಿಪಂಗೆ ಬಂದ ಸರಕುಲಗಳು , ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಕುಡಿಯುವ ನೀರಿಗೆ ಂದು ಬಂದ ಒಂದು ಕೋಟಿ ಅನುದಾನದ ಬಗ್ಗೆ ಮಾಹಿತಿ ನೀಡಿಲ್ಲವೆಂದು ಆರೋಪಿ ಸಿದರು.

ಈ ವಿಷಯಕ್ಕೆ ಅಧಿಕಾರಿ ಮಾತನಾಡಿ,
ಚುನಾವಣೆ ಮೊದಲು ಕುಡಿಯುವ ನೀರಿಗೆಂದು ಅನುದಾನ ಬೀಡುಗಡೆಯಾಗಿತ್ತು. ಆ ಹಣ ಅಧ್ಯಕ್ಷ ರ ಹೆಸರಿನಲ್ಲಿ ಬರುವುದಿಲ್ಲ.
ಆ ಹಣಕ್ಕೆ ಸಿಇಒ ಅವರ ವಿವೇಚನಗೆಂದು ಬಂದಿತ್ತು. ಆ ಹಣದ ಮೇಲೆ ಅಧಿಕಾರ ಅಧ್ಯಕ್ಷರ ಇರುವುದಿಲ್ಲವೆಂದು ಸ್ಪಷ್ಟಪಡಿಸಿದರು. ಅಧ್ಯಕ್ಷ ರಿಗೆ ಅಧಿಕಾರವಿಲ್ಲವೆಂದರೆ ಮತ್ತೆ ಯಾರಿಗೆ ಇದೆ.ಸ್ಪಷ್ಟ ಪಡಿಸಬೇಕೆಂದು ಸಭೆ ಬೈಕೊಟ್‌ ಮಾಡಿದರು. ನಂತರ ಜಿಪಂ‌ ಸದಸ್ಯರು ಮನೋಲಿಸಿ ಸಭೆಗೆ ಕರೆ ತಂದರು.

loading...