ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

0
0
loading...

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಕನ್ನಡಮ್ಮ ಸುದ್ದಿ-ರಾಮದುರ್ಗ: ತಾಲ್ಲೂಕಾ ಮಟ್ಟದ ಪದವಿ ಪೂರ್ವ ಮಹಾವಿದ್ಯಾಲಯಗಳ ಕ್ರಿÃಡಾಕೂಟದಲ್ಲಿ ಸ್ಥಳಿಯ ವಿದ್ಯಾ ಪ್ರಸಾರಕ ಸಮಿತಿಯ, ಸುಶೀಲಾ ವಾಯ್.ಕುಲಗೋಡ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ವೈಯಕ್ತಿಕ ಹಾಗೂ ಗುಂಪು ಕ್ರಿÃಡೆಗಳಲ್ಲಿ ಸಾಧನೆಗೈದು ಪ್ರಶಸ್ತಿ ಗಳಿಸುವ ಮೂಲಕ ಜಿಲ್ಲಾಮಟ್ಟದ ಕ್ರಿÃಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಪುರುಷರ ವಿಭಾಗ ಗುಂಪು ಆಟಗಳು ವ್ಹಾಲಿಬಾಲ್ ಪ್ರಥಮ ಸ್ಥಾನ, ಕಬಡ್ಡಿ ಪ್ರಥಮ ಸ್ಥಾನ ಪುರುಷರ ವಿಭಾಗದ ವೈಯಕ್ತಿಕ ಆಟಗಳು ಶ್ರಿÃಧರ್ ಕಡಕೋಳ ಗುಂಡು ಎಸೆತ ಪ್ರಥಮ, ಸಣ್ಣಫಕೀರಪ್ಪ ಬಿಜಗುಪ್ಪಿ ೧೦೦೦೦.ಮೀ ನಡಿಗೆ ಪ್ರಥಮ, ಶ್ರಿÃಶೈಲ ಕುರಿ ೫೦೦೦ ಮೀ ಪ್ರಥಮ, ಶ್ರಿÃ.ಚಂದ್ರು ಬಜಂತ್ರಿ ಚೆಸ್ ಪ್ರಥಮ, .ಬಸಪ್ಪ ಕೋಟಿ ಕ್ರಾಸ ಕಂಟ್ರಿÃ ತ್ರತೀಯ ಸ್ಥಾನ ಪಡೆದು ಕೊಂಡಿರುತ್ತಾರೆ. ಮಹಿಳೆಯರ ವಿಭಾಗದಲ್ಲಿ ಕು.ರಾಜೇಶ್ವರಿ ತುಪಳ್ಳಿ ೧೦೦ ಮೀ, ೩೦೦೦ ಮೀ, ಉದ್ದ ಜಿಗಿತ, ಕ್ರಾಸ ಕಂಟ್ರಿಯಲ್ಲಿ ಪ್ರಥಮ,ಸ್ಥಾನ ಪಡೆದು ಮಹಿಳೆಯರ ವಿಭಾಗದ ವಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾಳೆ ಕು.ರೇಣುಕಾ ಹುಚ್ಚನ್ನವರ ೪೦೦ ಮೀ ಪ್ರಥಮ, ಕು.ಸವಿತಾ ಚಿಕ್ಕನರಗುಂದ ೮೦೦ ಮೀ,೩೦೦೦ ಮೀ,ಕ್ರಾಸ ಕಂಟ್ರಿ. ದ್ವಿತೀಯ ಸ್ಥಾನ, ಕು.ಸಂಗಿತಾ ಹೊಸಮನಿ ೫೦೦೦ ಮೀ ನಡಿಗೆ ದ್ವಿತೀಯ, ವಿದ್ಯಾರ್ಥಿನಿಯರು ೪ಘಿ೧೦೦ ಮೀ ರಿಲೇಯಲ್ಲಿ ಪ್ರಥಮ, ಸ್ಥಾನ ಪಡೆದು ಕೊಂಡಿರುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಮಹಾವಿದ್ಯಾಲಯದ ಕೀರ್ತಿ ತಂದಿರುತ್ತಾರೆ. ವಿದ್ಯಾರ್ಥಿಗಳನ್ನು ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಪಿ.ಎಂ.ಜಗತಾಪ, ಉಪಾಧ್ಯಕ್ಷರಾದ ಬಿ ಎಸ್ ಪಾಟೀಲ ಹಾಗೂ ಗೌರವಕಾರ್ಯದರ್ಶಿಗಳಾದ ವ್ಹಿ.ಜಿ.ಬೈಲವಾಡ, ಪದವಿ ಪೂರ್ವ ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ಪಿ.ಎಫ್.ಪಾಟೀಲ ಹಾಗೂ ಪ್ರಾಚಾರ್ಯರಾದ ಪ್ರೊ.ಎಮ್ ಬಿ ಪಾಟೀಲ ದೈಹಿಕ ಶಿಕ್ಷಣ ನಿರ್ದೆÃಶಕರಾದ ಬಿ ಬಿ ಕಬಾಡಗಿ, ಜಿಮಖಾನಾ ಉಪಾಧ್ಯಕ್ಷರಾದ ಪ್ರೊ..ಎಸ್.ಬಿ.ಕಟ್ನೂರ, ಸಂಯೋಜಕರಾದ ಪ್ರೊÃ. ಬಿ ಬಿ ವಂದಾಲ ಮತ್ತು ಕಾಲೇಜಿನ ಎಲ್ಲ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.

loading...