ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

0
7
loading...

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಬೈಲಹೊಂಗಲ: ಗ್ರಾಮೀಣ ಸೊಗಡಿನ ಕ್ರಿÃಡೆಯಾದ ಕಬಡ್ಡಿಗೆ ಪ್ರೊÃತ್ಸಹ ಅಗತ್ಯ ಎಂದು ನವಚೇತನ ಯುವಕ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಸಂಚಾಲಕ ನಾರಾಯಣ ನಲವಡೆ ನುಡಿದರು.
ಅವರು ತಾಲೂಕಿನ ನಯಾನಗರ ಸರ್ಕಾರಿ ಪ್ರೌಢ ಶಾಲಾ ವಿಧ್ಯಾರ್ಥಿನೀಯರು ತಾಲೂಕ ಮಟ್ಟದಲ್ಲಿ ಜರುಗಿದ ಕಬಡ್ಡಿಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದ ಪ್ರಯುಕ್ತ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ ಶರೀರವನ್ನು ಆರೋಗ್ಯವಾಗಿಡುವ ಕ್ರಿÃಡೆಗಳಿಗೆ ಸರ್ಕಾರಗಳು ಸಾಕಷ್ಟು ಅನುಧಾನವನ್ನು ನೀಡುವ ಮೂಲಕ ಪ್ರೊÃತ್ಸಾಹಿಸುವ ಕೆಲಸವಾಗಬೇಕೆಂದರು. ಅಲ್ಲದೆ ಮಕ್ಕಳನ್ನು ಕ್ರಿÃಡಾಳುಗಳನ್ನಾಗಿ ತಯಾರಿಸಿದ ಗುರುಬಳಗವನ್ನು ಅಭಿನಂದಿಸಿದ್ದಲ್ಲದೆ, ಮುಂದಿನ ಹಂತಕ್ಕೆ ತಯಾರಿಸುವ ಗುರುತರ ಜವಾಬ್ದಾರಿ ಗುರು ಬಳಗದ ಮೇಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಮುಖ್ಯೊಪಾದ್ಯಾಯ ಎನ್.ಆರ್.ಮಾಳನ್ನವರ ಮಾತನಾಡಿ, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ನವಚೇತನ ಯುವಕ ಸಂಘದ ಅಧ್ಯಕ್ಷರಾದ ಶ್ರಿÃ ನಾರಾಯಣ ನಲವಡೆ ಯವರು ಟ್ರಾಕ್ ಸೂಟ್ ಗಳನ್ನು ವಿತರಿಸಿ ಪ್ರೊÃತ್ಸಾಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರುಬಳಗ ದೈಹಿಕ ಶಿಕ್ಷಕ ಸಿದ್ದಯ್ಯ ಹಿರೇಮಠ, ಮತ್ತು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸರ್ವಸದಸ್ಯರು ಸಿಬ್ಬಂದಿಯವರು ಊರಿನ ಗಣ್ಯಮಾನ್ಯರು ಸಾಧಕರನ್ನು ಅಭಿನಂದಿಸಿದ್ದಾರೆ

loading...