ಜೀವನ ಶಾಂತಿ ಬಿಡುಗಡೆ

0
0
loading...

ಬಸವನಬಾಗೇವಾಡಿ: ಭಾರತೀಯ ಜೀವ ವಿಮಾ ನಿಗಮದಲ್ಲಿ ತೊಡಗಿಸಿದ ಹಣ ಭದ್ರವಾಗಿಸುವುದರ ಜೊತೆಗೆ ಜೀವ ರಕ್ಷಣೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಪಟ್ಟಣದ ಗಣ್ಯ ವರ್ತಕ ಬಲಕಿಶೋರ ಅಗರವಾಲ ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಭಾರತೀಯ ಜೀವ ವಿಮಾ ನಿಗಮದ ಶಾಖೆಯ ಸಭಾಗಂಣದಲ್ಲಿ ಬುಧುವಾರ ಬಿಡುಗಡೆಯಾದ ಜೀವನ ಶಾಂತಿ ಹೊಸ ಪಾಲಿಸಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ನಿಗಮದ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ವರ್ಗದವರು ಉತ್ತಮವಾಗಿ ಕರ‍್ಯ ನಿರ್ವಹಿಸುತ್ತಿರುವುದು ಸಂತಸದ ಸಂಗತಿ, ಇನ್ನೂ ಹೆಚ್ಚಿನ ಸೇವೆ ನೀಡುವಲ್ಲಿ ಆಲೋಚನೆ ಮಾಡಬೇಕೆಂದರು.

ಶಾಖಾಧಿಕಾರಿ ಬಿಬಿ ಬಿರಾದಾರ ಮಾತನಾಡಿ,ಹಣಕಾಸು ಸಂಸ್ತೆಗಳಲ್ಲಿ ಬಡ್ಡಿ ದರ ಇಳಿಯುತ್ತಿರುವ ಈ ಸಂದರ್ಭದಲ್ಲಿ ನಿಗಮವು ಬಿಡುಗಡೆ ಮಾಡಿದ ಜೀವನ ಶಾಂತಿ ಯೋಜನೆ ಗ್ರಾಹಕರಿಗೆ ತುಂಬಾ ಸಹಾಯಕಾರಿಯಾಗಿದೆ ಎಂದು ಹೇಳಿದರು. ಈ ಯೋಜನೆಯ ಪ್ರಯೋಜನೆಯನ್ನು ಹೆಚ್ಚು ಗ್ರಾಹಕರಿಗೆ ನೀಡಲು ಪ್ರತಿನಿಧಿಗಳು ಶ್ರಮಿಸಬೇಕೆಂದರು. ಇದೇ ಸಂದರ್ಭದಲ್ಲಿ ಎಸ್.ಬಿ ಕುಂಟೋಜಿ, ಬಿ.ಪಿ ವಾಲೀಕಾರ ಅವರನ್ನು ಸನ್ಮಾನಿಸಲಾಯಿತು. ಶಾಖೆಯ ಸಿಬ್ಬಂದಿ ವರ್ಗ ಹಾಗೂ ಪ್ರತಿನಿಧಿಗಳು ಇದ್ದರು.

loading...