ಜೀವಾವಧಿ ಶಿಕ್ಷೆಗೊಳಗಾದ ಕೈದಿಯಿಂದ 1 ಲಕ್ಷ ರೂ. ದೇಣಿಗೆ

0
0
loading...

ಕೇರಳ ಪ್ರವಾಹಕ್ಕೆ ದೇಶ ವಾಸಿಗಳು ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಕೋಲ್ಕತಾದ ಅಲಿಪೂರ್ ಸೆಂಟ್ರಲ್ ಜೈಲ್ ನಲ್ಲಿರುವ ಜೀವಾವಧಿ ಶಿಕ್ಷೆಗೊಳಗಾಗಿರುವ ಕೈದಿ, ಕೇರಳ ಪ್ರವಾಹಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದಾನೆ.

ಅಂದಹಾಗೆ ಜೈಲಿನಲ್ಲಿರುವ ಕೈದಿ ಅವನ ಕಾರ್ಯಕ್ಕೆ ಅನುಗುಣವಾಗಿ 8 ಗಂಟೆಯ ಕೆಲಸಕ್ಕೆ ಸುಮಾರು 200 ರೂ. ಯಿಂದ 280 ರೂಪಾಯಿ ಪಡೆಯುತ್ತಾರೆ. ಈ ರೀತಿ ಸಂಗ್ರಹವಾದ ಹಣವನ್ನೇ ಶೇಖ್ ಅಜೀಜ್ ಕೇರಳ ಪರಿಹಾರ ನಿಧಿಗೆ ನೀಡಲು ತೀರ್ಮಾನಿಸಿದ್ದಾನೆ.

ಜೈಲಿನ ನಿಯಮದಂತೆ, ಕೈದಿಗಳು ಜೈಲಿನಲ್ಲಿ ಸಂಪಾದಿಸಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಕೈದಿಗಳಿಗೆ ನೀಡಿದ್ರೆ, ಇನ್ನು ಅರ್ಧ ಭಾಗದ ಹಣವನ್ನು ಬ್ಯಾಂಕ್ ಗಳಲ್ಲಿ ಡಿಪಾಸಿಟ್ ಮಾಡಲಾಗುತ್ತದೆ. ಶೇಖ್ ತನ್ನ ಖಾತೆಯಲ್ಲಿ ಜಮೆ ಆದ ಹಣವನ್ನು ದೇಣಿಗೆ ನೀಡಲು ನಿರ್ಧರಿಸಿದ್ದಾನೆ.

loading...