ಜೆ.ಎನ್ ರಸ್ತೆ ಮರು ಡಾಂಬರೀಕರಣಕ್ಕೆ ಮನವಿ

0
0
loading...

 

ಕನ್ನಡಮ್ಮ ಸುದ್ದಿ-ದಾಂಡೇಲಿ: ನಗರದ ಬಸ್ ನಿಲ್ದಾಣದ ಬಳಿಯ ಜೆ.ಎನ್ ರಸ್ತೆ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಈ ರಸ್ತೆಯ ಗುಣ ಮಟ್ಟದ ಮರು ಡಾಂಬರೀಕರಣ ಮಾಡಬೇಕೆಂದು ಸ್ಥಳೀಯ ಪ್ರೆಸ್ ಕ್ಲಬ್, ಹಾಗೂ ಲಯನ್ಸ ಕ್ಲಬ್ ಹಾಗೂ ಜೆ.ಎನ್. ರಸ್ತೆಯ ಅಂಗಡಿಕಾರರು ಪೌರಾಯುಕ್ತರಾದ ಆರ್.ವಿ ಜತ್ತಣ್ಣನವರಿಗೆ ಗುರುವಾರರಂದು ಮನವಿ ಸಲ್ಲಿಸಿದರು.
ಈ ರಸ್ತೆ ಹಾಳಾಗಿದ್ದರಿಂದ ಅತಿಯಾದ ಧೂಳು ಏಳುತ್ತಿದ್ದು ಇದರಿಂದ ಅಂಗಡಿಕಾರರು, ಗ್ರಾಹಕರು, ವಾಹನ ಚಾಲಕರು, ಪಾದಚಾರಿಗಳು ತೊಂದರೆಗೊಳಗಾಗುತ್ತಿದ್ದಾರೆ. ಇಲ್ಲಿ ರಸ್ತೆಯ ಧೂಳು ಕುಡಿದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ, ಆದ ಕಾರಣ ಈ ಕುರಿತು ಕೂಡಲೆ ಕ್ರಮ ತೆಗೆದು ಕೊಳ್ಳಬೇಕೆಂದು ಹಾಗೂ ರಸ್ತೆ ಕಾಮಗಾರಿ ಆರಂಭವಾಗುವ ವರೆಗೆ ಧೂಳು ಹಾರದಂತೆ ಪರ್ಯಾಯ ವ್ಯವಸ್ತೆ ಮಾಡಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಮನವಿಯಲ್ಲಿ ನಗರದಲ್ಲಿ ಬಿಡಾಡಿ ದನಗಳ, ಬಿದಿನಾಯಿಗಳ ಹಾವಳಿ ಹೆಚ್ಚಿದ್ದು, ಸಾರ್ವಜನಿಕರಿU,É ಶಾಲಾ ಮಕ್ಕಳಿಗೆ, ವಾಹನಗಳ ಪಾದಚಾರಿಗಳ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ ಇದನ್ನು ತಡೆಗಟ್ಟಲು ತಕ್ಷಣ ಸೂಕ್ತ ಕ್ರಮತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ. ನಗರದ ಬಸ್ ನಿಲ್ದಾಣದ ಬಳಿ ಮಳೆ ನೀರು ಚರಂಡಿಗೆ ಹೋಗದೆ ನೇರವಾಗಿ ಜೆ.ಎನ್ ರಸ್ತೆಗೆ ಹರಿದು ಬರುವದರಿಂದ ಕಾಮಗಾರಿ ಮುಗಿದ ಒಂದು ವರ್ಷದಲ್ಲಿಯೇ ರಸ್ತೆಗಳು ಹಾಳಾಗುತ್ತಿವೆ ಇದಕ್ಕೆ ನಗರಸಭೆಯ ಲೋಕೋಪಯೋಗಿ ಇಲಾಖೆ ಹಾಗೂ ಕೆ.ಎಸ್.ಆರ್.ಟಿ.ಸಿ ಮುಖ್ಯಸ್ಥರು ಈ ಕುರಿತು ಜಂಟಿಯಾಗಿ ಯೋಜನೆಯನ್ನು ಸಿದ್ಧಪಡಿಸಿ ಜೆ.ಎನ್. ರಸ್ತೆ ಹಾಳಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರೆಸ್ ಕ್ಲಬಿನ ಅಧ್ಯಕ್ಷ ಬಿ.ಎನ್ ವಾಸರೆ, ಕಾರ್ಯದರ್ಶಿ ಸಂದೇಶ ಜೈನ್, ಉಪಾಧ್ಯಕ್ಷ ಯು.ಎಸ್. ಪಾಟೀಲ, ಖಜಾಂಚಿ ಗುರುಶಾಂತ ಜಡೇಹಿರೇಮಠ, ಸದಸ್ಯ ಕೃಷ್ಣಾ ಪಾಟೀಲ್, ಲಯನ್ಸ್ ಕ್ಲಬಿನ ಅಧ್ಯಕ್ಷ ವೈ.ಎನ್ ಮುನವಳ್ಳಿ, ಕಾರ್ಯದರ್ಶಿ ಪ್ರಸಾದ ಶಿರಹಟ್ಟಿ, ಖಜಾಂಚಿ ಮಾರುತಿರಾವ್ ಮಾನೆ, ರೋಟರಿ ಕ್ಲಬಿನ ಇಮಾಮ ಸರವರ್, ಜೆ.ಎನ್ ರಸ್ತೆಯ ಅಂಗಡಿಕಾರರಾದ ಉಮೇಶ ಸಾವಳಗಿಮಠ, ಸುನಿಲ ಸಾಮಂತ, ಪ್ರಮೋದ್ ಅಚಲಕರ್, ಇನಾಯತ್ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

loading...