ಜ್ಞಾನವಂತರಾಗಿ ಕುಟುಂಬದ ಜವಾಬ್ದಾರಿ ನಿಭಾಯಿಸುವವರು ಮಹಿಳೆ ಮಾತ್ರ

0
0
loading...

ಜ್ಞಾನವಂತರಾಗಿ ಕುಟುಂಬದ ಜವಾಬ್ದಾರಿ ನಿಭಾಯಿಸುವವರು ಮಹಿಳೆ ಮಾತ್ರ

ಕನ್ನಡಮ್ಮ ಸುದ್ದಿ-ಗೋಕಾಕ: ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲೆ ಹೆಚ್ಚಿದ್ದು ಅವರು ಜ್ಞಾನವಂತರಾಗಿ ಸಮರ್ಥವಾಗಿ ನಿಭಾಯಿಸುವಂತೆ ಇಲ್ಲಿಯ ಮಹಿಳಾ ಸಾಂತ್ವಾನ ಕೇಂದ್ರದ ಕಾರ್ಯಕರ್ತೆ ರೇಖಾ ಕಂಬಾರ ಹೇಳಿದರು.
ಅವರು, ಸೋಮವಾರದಂದು ನಗರದ ಅಂಬಿಗೇರ ಗಲ್ಲಿಯ ವಿಠ್ಠಲ ರುಕ್ಮಿÃಣಿ ದೇವಸ್ಥಾನದಲ್ಲಿ ಶ್ರಿÃ ಕ್ಷೆÃತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಆಯೋಜಿಸಿದ್ದ ವರಮಹಾಲಕ್ಷಿö್ಮÃ ಪೂಜಾ ಕಾರ್ಯಕ್ರಮ ಹಾಗೂ ಮಹಿಳಾ ವಿಚಾರಗೋಷ್ಠಿಯಲ್ಲಿ ಮುಖ್ಯತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಮಹಿಳೆಯರ ಜ್ಞಾನ ವಿಕಾಸಕ್ಕಾಗಿ ಇಂತಹಗೋಷ್ಠಿಗಳನ್ನು ಡಾ.ವಿರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಹಮ್ಮಿಕೊಂಡು ಮಹಿಳೆಯರನ್ನು ಜಾಗ್ರತಗೊಳಿಸಿ ಕುಟುಂಬ ಸಾಮರಸ್ಯ ತರುವಂತ ಈ ಕಾರ್ಯ ಮಾದರಿಯಾಗಿದೆ. ಮಹಿಳೆಯರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಜ್ಞಾನ ವಿಕಾಸಹೊಂದಿ ಅದನ್ನು ಆಚರಣೆಗೆ ತರುವದರೊಂದಿಗೆ ಸಾಮರಸ್ಯ ಸಮಾಜ ನಿರ್ಮಿಸಲು ಶ್ರಮಿಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ನಗರಸಭೆಯ ಸದಸ್ಯೆ ಪ್ರಭಾವತಿ ಪೂಜಾರಿ ಉದ್ಘಾಟಿಸಿದರು.
ವೇದಿಕೆಯ ಮೇಲೆ ನಗರಸಭೆ ಸದಸ್ಯ ಹನಮಂತ ಕಾಳಮ್ಮನಗುಡಿ, ಯೋಜನಾಧಿಕಾರಿ ಸುರೇಂದ್ರಕುಮಾರ, ಮರಾಠಾಗಲ್ಲಿ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ನೂರಜಾನ ಗೋಟಿರ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಪೂಜಾರಿ, ಮೇಲ್ವಿಚಾರಕ ಶಂಕುಶ ಇದ್ದರು.

loading...