ತಪ್ಪು ತಿದ್ದಿಕೊಂಡು ಬದುಕುವುದೇ ಜೀವನ: ಶ್ರೀನಿವಾಸ

0
0
loading...

ಕನ್ನಡಮ್ಮ ಸುದ್ದಿ-ಕೊಪ್ಪಳ: ಬಂಧಿಖಾನೆಯಲ್ಲಿರುವವರು ತಮ್ಮ ಜೀವನದಲ್ಲಿ ಆದ ತಪ್ಪನ್ನು ತಿದ್ದಿಕೊಂಡು, ನಂತರದ ಜೀವನದಲ್ಲಿ ಹೊಸ ಮನುಷ್ಯರಾಗಿ ಬಾಳಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧಿಶ ಟಿ. ಶ್ರೀನಿವಾಸ ಹೇಳಿದರು.
ಜಿಲ್ಲಾ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೋಟಾರ್ ರೀವೈಂಡಿಂಗ್ ಮತ್ತು ಪಂಪಸೆಟ್ ದುರಸ್ತಿ ತರಬೇತಿ ಕಾರ್ಯಕ್ರಮದಲ್ಲಿ ಮತನಾಡಿದ ಅವರು ಬದಲಾವಣೆ, ವೃತ್ತಿ ಪರಕಲಿಯಲು ಮೋಟಾರ್ ರೀವೈಂಡಿಂಗ್ ಮತ್ತು ಪಂಪಸೆಟ್ ದುರಸ್ತಿ ತರಬೇತಿಯ ಪ್ರಯೋಜನೆಯನ್ನು ಪಡೆದುಕೊಂಡು ಅದರಿಂದ ಹೊಸ ಬದುಕು ಕಟ್ಟಿಕೊಳ್ಳುವುದಕ್ಕೆ ಯತ್ನಿಸುವುಂತೆ ತಿಳಿಸಿದರು. ಎಸ್.ಬಿ.ಐ ಆರ್‍ಸೆಟ್‍ನ ನಿರ್ದೇಶಕರಾದ ವಿ.ಎಸ್. ಪಲ್ಲಾಪೂರ ಅವರು ಮಾತನಾಡಿ, ನಮ್ಮ ಸಂಸ್ಥೆಯಿಂದ ಜರುಗಿದ ಮೋಟಾರ್ ರೀವೈಂಡಿಂಗ್ ಮತ್ತು ಪಂಪಸೆಟ್ ದುರಸ್ತಿ ತರಬೇತಿ ಕಾರ್ಯಕ್ರಮದ ಸದುಪಯೋಗವನ್ನು ಮುಂದಿನ ಜೀವನದಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಕಾರಾಗೃಹದ ಆಧೀಕ್ಷಕರಾದ ಹನುಮಂತರಾಯ ಮಾತನಾಡಿ, ಇಂತಹ ತರಬೇತಿಗಳು ಕಾರಾಗೃಹದಲ್ಲಿ ಇನ್ನು ಹೆಚ್ಚು ನಡೆಯಬೇಕೆಂದು ಆಶಿಸುತ್ತೇನೆ. ಜಿಲ್ಲಾ ಕಾರಾಗೃಹದಲ್ಲಿರುವ ಬಂಧಿಗಳು ಪಡೆದ ತರಬೇತಿಯನ್ನು ಮುಂದೆ ತಮ್ಮ ಜೀವನದಲ್ಲಿ ಉದ್ಯೋಗಕ್ಕಾಗಿ ಉಪಯೋಗಿಸಿಕೊಳ್ಳಬೇಕೆಂದರು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಅಮರಪ್ಪ ಪೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆರ್‍ಸೆಟ್ ಲಕ್ಷ್ಮೀಕಾಂತ ಅವರು ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.

loading...