ತಲೆಗೆ ಹುಳ ಬಿಟ್ಟ ವೀರೇಂದ್ರ ಸೆಹ್ವಾಗ್…!

0
0
loading...

ನವದೆಹಲಿ:-ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೇ ಹೆಸರು ವಾಸಿ. ಈಗ ಅಂಗಳದಿಂದ ಹಿಂದೆ ಸರಿದಿರುವ ಸೆಹ್ವಾಗ್, ಟ್ವಿಟರ್ ನಲ್ಲಿ ಸದ್ದು ಮಾಡ್ತಾ ಇದ್ದಾರೆ. ಟ್ವಿಟರ್ ನಲ್ಲಿ ವೀರೂ ಹಾಕುವ ಪೋಸ್ಟ್ ಗಳಿಗೆ ಸಕತ್ ರೆಸ್ಪಾನ್ಸ್ ಸಿಗುತ್ತದೆ.
ವೀರೇಂದ್ರ ಸೆಹ್ವಾಗ್ ಟ್ವೀಟರ್ ನಲ್ಲಿ ಸಾಮಾಜಿಕ ಕಳಕಳಿ, ಕೌಟುಂಬಿಕ ಜೋಕ್ ಗಳನ್ನು ಹಾಕಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿನ್ನೆ ಎರಡು ಪಕ್ಷಿಗಳು ಒಂದು ಟೊಂಗೆಯ ಮೇಲೆ ಕುಳಿತಿರುವ ಫೋಟೋ ಹಾಕಿದ್ದಾರೆ. ಈ ಫೋಟೋ ಕೆಳಗಡೆ ಈ ಪಕ್ಷಿಯ ಬಗ್ಗೆ ಹೆಚ್ಚಿನ ಮಾಹಿತಿ ಸಿಗದು. ಆದ್ರೆ, ಈ ಎರಡೂ ಪಕ್ಷಿಗಳಲ್ಲಿ ಪತಿ ಯಾರು ಎಂಬುದನ್ನು ಕಂಡು ಹಿಡಿಯಬಹುದು ಎಂದು ಟ್ವಿಟ್ ಮಾಡಿದ್ದಾರೆ.

loading...