ತೈಲ ಬೆಲೆ ಖಂಡಿಸಿ ಮನವಿ

0
0
loading...

ತೈಲ ಬೆಲೆ ಖಂಡಿಸಿ ಮನವಿ
ಕನ್ನಡಮ್ಮ ಸುದ್ದಿ-ರಾಮದುರ್ಗಃ ಮೋದಿ ಸರ್ಕಾರವು ವಿಧಿಸಿರುವ ದೈತ್ಯಾಕಾರದ ತೆರಿಗಳ ಪರಿಣಾಮವಾಗಿ, ಪೆಟ್ರೊÃಲ್.ಡೀಸಲ್ ಮತ್ತು ಅಡಿಗೆ ಅನಿಲಗಳ ಬಲೆ ಗಗನಕ್ಕೆÃರಿವೆ. ಜನಸಾಮಾನ್ಯರಿಗೆ ಮೋದಿ ಸರ್ಕಾರವು ಕಳೆದ ೫೨ ತಿಂಗಳಲ್ಲಿ ಸರಿ ಸುಮಾರು ೧೧ ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಜನಸಾಮಾನ್ಯರಿಗೆ ಘಾಸಿಗೊಳಿರುದಲ್ಲದೆ, ದೈನಂದಿನ ಆರ್ಥಿಕ ಮಟ್ಟ ಹಾಗೂ ಕುಟುಂಬದ ವರಮಾನ ಕಡಿಮೆಯಾಗಿ ಜೀವನ ಸಾಗಿಸಿವುದು ಕಷ್ಟವಾಗಿದೆ ಬರುವ ದಿನಗಳಲ್ಲಿ ಸರ್ಕಾರವನ್ನು ಕಿತ್ತುಹಾಬೇಕೆಂದು ಎಂದು ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಪರಪ್ಪ ಜಂಗವಾಡ ಆಕ್ರೊÃಶ ವ್ಯೆಕ್ತ ಪಡಿಸಿದರು.
ಸ್ಥಳೀಯ ರಾಮರ್ದುಗ ತಾಲೂಕಾ ಕಾಂಗ್ರೆಸ್ ಘಟಕ ಹಾಗೂ ವಿವಿಧ ಕನ್ನಡ ಪರ ಸಂಘಟನೆ ಹಾಗೂ ರೈತ ಸಂಘ ಮಹಿಳಾ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಪೆಟ್ರೊÃಲ್-ಡೀಸಲ್ ಅಡುಗೆ ಅನಿಲ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಬಂದ್ ಪ್ರತಿಭಟನಾ ಮೆರವಣಿಗೆಯ ವೆಂಕಟೇಶ್ವರ ದೇವಸ್ಥಾನದಿಂದ ಮುಖಾಂತರ ಪ್ರಾರಂಭವಾಗಿ ಮಿನಿ ವಿಧಾನ ಸೌಧಕ್ಕೆ ತೆರಳಿ ತಹಶೀಲ್ದಾರ ಮುಖಾಂತರ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಸಿ ಮಾತನಾಡಿದ ಅವರು
ಪೆಟ್ರೊÃಲ್, ಡೀಸಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದ ವಾಹನ ಸಾವಾರರಿಗೆ, ಆಟೋ ರೀಕ್ಷಾ, ಕಾರ, ರೈತರಿಗೆ ನೇಕಾರರಿಗೆ, ಮಧ್ಯಮ ವರ್ಗದ ವ್ಯಾಪಾರಸ್ಥರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಮೇ ೧೪,೨೦೧೪ ರಿಂದ ಡೀಸಲ್ ಮೇಲಿನ ಅಬಾಕಾರಿ ತೆರಿಗೆ ಶೇಕಡ ೪೪೩.೬ ಕ್ಕೆ ಏರಿಕೆಯಾಗಿದೆ. ಮೇ ೧೪ ೨೦೧೪ ರಲ್ಲಿ ಡೀಸಲ್ ಮೇಲಿನ ಅಬಕಾರಿ ತೆರಿಗೆ ಲೀಟರಗೆ ರೂಪಾಯಿ ೩.೪೬ ಇದ್ದದ್ದು ೧೫.೩೩ಕ್ಕೆ ಏರಿಕೆಯಾಗಿದೆ. ಬಿಜೆಪಿ ಅಧಿಕಾರಕ್ಕೆ ವಹಿಸಿಕೊಂಡ ನಂತರ ೧೨ ಬಾರಿ ತೆರಿಗೆಯನ್ನು ಏರಿಕೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರಿÃ ರಾಹುಲ ಗಾಂಧಿಯವರು ಪದೇ ಪದೇ ಪೆಟ್ರೊÃಲ್-ಡೀಸಲ್ ಅಡುಗೆ ಅನಿಲ ಬೆಲೆಗಳನ್ನು ಜಿಎಸ್‌ಟಿ ಪರಿಮಿತಿಗೆ ತರಬೇಕೆಂದು ಒತ್ತಾಯಿಸುತ್ತಾ ಬಂದಿದ್ದರೂ ಸಹ ಬಿಜೆಪಿ ನೇತೃತ್ವದ ಮೋದಿ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ
ಸಾಮಾನ್ಯ ಜನರ ಮೇಲೆ ಆಗುತ್ತಿರುವ ತೊಂದರೆಗಳನ್ನು ನಿವಾರಣೆ ಮಾಡಬೇಕು ಹಾಗೂ ಡೀಸಲ್, ಪೆಟ್ರೊÃಲ್ ಅಡುಗೆ ಅನಿಲಗಳ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು ಕೇಂದ್ರ ಹಣಕಾಸು ಸಚಿವರು ಶ್ರಿÃ ಅರುಣ ಜೇಟ್ಲಿಯವರು ಯಾವುದೆ ಕಾರಣಕ್ಕೂ ಬೆಲೆಗಳನ್ನು ಕಡಿಮೆ ಮಾಡಲು ಆಗುವದಿಲ್ಲ ಎಂದು ಜನ ಸಮಾನ್ಯರ ಬೇಡಿಕೆಗಳನ್ನು ತಿರಸ್ಕರಿಸಿದ್ದಾರೆ.
ದೇಶದ ಮಧ್ಯಮ ಜನರ ಮತ್ತು ಸಾಮಾನ್ಯ ವರ್ಗದವರ ಹಿತವನ್ನು ಕಾಪಾಡುವ ಬದ್ಧತೆ ಕಾಂಗ್ರೆಸ್ ಪಕ್ಷಕ್ಕೆ ಇದೆ. ಈ ದಿಸೆಯಲ್ಲಿ ಕಾಂಗ್ರೆಸ್ ಪಕ್ಷವು ಪೆಟ್ರೊÃಲ್, ಡೀಸಲ್ ಮತ್ತು ಅನಿಲಗಳ ಬೆಲೆಗಳನ್ನು ಜಿಎಸ್‌ಟಿ ಪರಿಮಿತಿಗೆ ತರಬೇಕೆಂದು ೨೦೧೭ ರಿಂದಲೂ ಒತ್ತಾಯಿಸುತ್ತಲೆ ಬಂದಿದೆ ಸರ್ವಾಜನಕರಿಗೆ ತೊಂದರೆ ನೀಡುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಜಹೂರ ಹಾಜಿ, ಕೃಷ್ಣಪ್ಪ ಲಮಾಣಿ, ಯುವಕ ಕಾಂಗ್ರೆಸ್ ಅಧ್ಯಕ್ಷ ರಮೇಶ ಬಂಡಿವಡ್ಡರ, ಮುಖಂಡರಾದ ಜಿ.ಬಿ.ರಂಗನಗೌಡ,,ಪ್ರದೀಪ ಪಟ್ಟಣ, ಎಸ್.ಎನ್. ಪಾಟೀಲ, ಹುಸೇನಬಾಷಾ ಮೊರಬ ಪ್ರಕಾಶ ಸೂಳಿಬಾವಿ, ಮಹಮ್ಮದ ಶೆಫೀ ಬೆಣ್ಣಿ, ಪುರಸಭೆಯ ಸದಸ್ಯರಾದ ಸಂಗೀತಾ ರಾಯಬಾಗ, ಹುಸೇನ್ ಐನಾಪೂರ, ಇಮಾಮ ಕಲಾದಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

loading...