ದೇಶದ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಿ: ಶಾಸಕ ಬೆನಕೆ

0
0
loading...

ಗುರು ವಿವೇಕಾನಂದ ವಿವಿಧೋದ್ದೆÃಶದ ೬ನೇ ವಾರ್ಷಿಕ ಸರ್ವಸಾಧಾರಣ ಸಭೆ
ದೇಶದ ಉಜ್ವಲ ಭವಿಷ್ಯಕ್ಕಾಗಿ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರಿಸಿ: ಶಾಸಕ ಬೆನಕೆ
ಕನ್ನಡಮ್ಮ ಸುದ್ದಿ-ಬೆಳಗಾವಿ : ಆತ್ಮ ಸ್ಥೆöÊರ್ಯದ ಜೊತೆಗೆ ಸಾಧಿಸುವ ಛಲವಿದ್ದರೆ ಇಡಿ ಜಗತ್ತನ್ನೆ ಗೆಲ್ಲಬಹುದು ಎಂದು ಬೆಳಗಾವಿ ಉತ್ತರ ವಿಧಾನಸಭಾ ಕ್ಷೆÃತ್ರದ ಶಾಸಕರಾದ ಅನಿಲ ಬೆನಕೆ ಅಭಿಪ್ರಾಯಪಟ್ಟರು.
ನಗರದ ಬಡಕಲ್ ಗಲ್ಲಿ ಬನಶಂಕರಿ ಸಭಾ ಭವನದಲ್ಲಿ ರವಿವಾರ ೦೯ ರಂದು ನಡೆದ ಗುರು ವಿವೇಕಾನಂದ ವಿವಿಧೋದ್ದೆÃಶಗಳ ಸಹಕಾರ ಸಂಘ ನಿ. ಬೆಳಗಾವಿ ಇದರ ೬ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಾಧಕರ ಸನ್ಮಾನ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು
ಇಂದಿನ ದಿನಗಳಲ್ಲಿ ಪ್ರತಿಯೊಂದು ಕ್ಷೆÃತ್ರವೂ ತುಂಬಾ ಸ್ಪರ್ಧೆಯಿಂದ ಕೂಡಿದ್ದು ವಿದ್ಯಾರ್ಥಿಗಳು ತುಂಬಾ ಕಠಿಣ ಪರಿಶ್ರಮ ಮಾಡಬೇಕಾಗಿದೆ. ಇಂದು ವಿದ್ಯಾರ್ಥಿನಿಯರು ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸಿದರೂ ಹಲವಾರು ಕಾರಣಗಳಿಂದಾಗಿ ಮುಂದೆ ಅವರ ಶಿಕ್ಷಣ ಕುಂಠಿತವಾಗುತ್ತಿದೆ. ಇದು ದೇಶದ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬಿರುತ್ತಿದೆ. ಆದ್ದರಿಂದ ವಿದ್ಯಾರ್ಥಿನಿಯರು ದೇಶದ ಉಜ್ವಲ ಭವಿಷ್ಯಕ್ಕಾಗಿ ತಮ್ಮ ಶಿಕ್ಷಣವನ್ನು ಮುಂದುವರಿಸಬೇಕೆಂದರು. ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದ ಮಹಮ್ಮದ ಕೈಫ್ ತಮ್ಮೆಲ್ಲರಿಗೂ ಮಾದರಿಯೆಂದರು.
ಅತಿಥಿಗಳಾದ ಆರ್. ಎಲ್. ಎಸ್. ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶಶಿಕಾಂತ ತಾರದಾಳೆ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸುತ್ತ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನವನ್ನು ತಪಸ್ಸನ್ನಾಗಿ ಮಾಡಿಕೊಂಡಲ್ಲಿ ಅವರ ಭವಿಷ್ಯ ಉಜ್ವಲವಾಗುತ್ತದೆಂದರು. ಸಾಧಕರ ಸನ್ಮಾನ ಸ್ವಿÃಕರಿಸಿದ ಮಹಮ್ಮದ್ ಕೈಫ್ ನಾನು ಗುರುಗಳಲ್ಲಿಟ್ಟಿರುವ ಭಕ್ತಿ-ಭಾವ-ಶ್ರದ್ಧೆ ಮತ್ತು ತಂದೆ-ತಾಯಿಯ ಪ್ರೊÃತ್ಸಾಹ ಹಾಗೂ ವಿವೇಕಾನಂದರ ಸ್ಪೂರ್ತಿಯ ನುಡಿಗಳು ನನ್ನ ಈ ಸಾಧನೆಗೆ ಕಾರಣಗಳಾಗಿವೆ.
ಮಾನವ ಕಂಪ್ಯೂಟರ್ ಬಸವರಾಜ ಉಮ್ರಾಣಿಯವರು ಪ್ರಸ್ತುತ ಪಡಿಸಿದ ಅಂಕಿಸಂಖ್ಯೆಗಳ ಜೊತೆಗಿನ ಆಟವು ಸಭಿಕರನ್ನು ಚಕಿತಗೊಳಿಸಿತು. ಮಹೇಶ ಪೌಂಡೇಶನ್ ಅಧ್ಯಕ್ಷರಾದ ಮಹೇಶ ಜಾಧವ ಹಾಗೂ ಪ್ರಗತಿಪರ ಕೃಷಿಕರಾದ ಗೋಕಾಕಿನ ಎ. ಆರ್. ಪಾಟೀಲ್ ಹಾಗೂ ವಿದ್ಯಾರ್ಥಿಯಾದ ಪ್ರತೀಕ್ಷಾ ರಾವ್ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಸಭೆಯ ಅಧ್ಯಕ್ಷತೆ ವಹಿಸಿದ ನಾರಾಯಣ ನಾಯ್ಕ ಮಾತನಾಡುತ್ತಾ ಸಂಸ್ಥೆಯು ಹಣಕಾಸಿನ ವ್ಯವಹಾರದ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಕಳೆದ ೫ ವರ್ಷಗಳಿಂದ ಮಾಡುತ್ತಾ ಬಂದಿದೆ.
ವಿದ್ಯಾರ್ಥಿಗಳಿಗಾಗಿ ವಿಶೇಷ ಕಾಳಜಿಯನ್ನು ಸಂಸ್ಥೆ ಹೊಂದಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ ಬಹಳಮುಖ್ಯವಾದುದು. ಅವರು ವಿಶ್ವಾಸವಿಟ್ಟು ಸಂಸ್ಥೆಯಲ್ಲಿ ವ್ಯವಹಾರ ಮಾಡಿರುವುದರಿಂದ ಸಂಸ್ಥೆಯ ಠೇವಣಿ, ಸಾಲ ಕಳೆದ ವರ್ಷಕ್ಕಿಂತ ಅಧಿಕವಾಗಿ ಸಂಘದ ಬೆಳವಣಿಗೆಗೆ ಕಾರಣವಾಯಿತು. ಸದಸ್ಯರ ಅನುಕೂಲಕ್ಕಾಗಿ ಸಂಘವು ಇನ್ನೂ ಹಲುವಾರು ಯೋಜನೆಗಳನ್ನು ರೂಪಿಸುತ್ತಿದೆ. ಪ್ರತಿ ವರ್ಷ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರವನ್ನು ಮತ್ತು ವಿವಿಧ ಕ್ಷೆÃತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತ ಬಂದಿದೆಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಮಹಾವೀರ ಜೈನ್ ನಿರ್ದೇಶಕರಾದ ಡಾ. ವಾಯ್. ಬಿ. ಘಸಾರಿ, ಅಂಜನಕುಮಾರ ಗಂಡಗುದರಿ, ಭಾರತಿ ಶೆಟ್ಟಿಗಾರ, ರಾಜೇಶ ಗೌಡ, ಜಗದೀಶ ಹಗ್ಡೆ, ಮುನಿರಾಜ ಜೈನ್, ಸತೀಶ ಮನ್ನಿಕೇರಿ, ವಿದ್ಯಾರಾಣಿ ಶೆಟ್ಟಿ, ಅಕ್ಷತಾ ಮರಕಳ ಹಾಗೂ ಪಿಗ್ಮಿ ಸಂಗ್ರಹಕಾರರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಸತೀಶ ಮನ್ನಿಕೇರಿ ಸ್ವಾಗತಿಸಿದರು, ವಿಶಾಲ ಪಾಟೀಲ ವರದಿ ವಾಚಿಸಿದರು. ಮುನಿರಾಜ ಜೈನ್ ವಂದಿಸಿದರು, ಮಲ್ಲೆÃಶ ದೊಡ್ಡಲಕ್ಕನವರ ನಿರೂಪಿಸಿದರು.

loading...