ದೇಶದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು :ಅಂಗಡಿ

0
1
loading...

ದೇಶದ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು :ಅಂಗಡಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸಮಾಜದ ಬದಲಾವಣೆ ಮತ್ತು ದೇಶದ ಬೆಳವಣಿಗೆಯಲ್ಲಿ ಪ್ರಮುಖವಾಗಿ ಶಿಕ್ಷಕರ ಪಾತ್ರ ದೊಡ್ಡದು .ಎಲ್ಲ ಸೇವೆಗಳಿಂದ ಶಿಕ್ಷಕ ವೃತ್ತಿ ಶ್ರೇಷ್ಠವಾದ ಕಾರ್ಯ ಎಂದು ಶಿಕ್ಷಕರ ಕಾರ್ಯವನ್ನು ಸಂಸದ ಸುರೇಶ ಅಂಗಡಿ ಶ್ಲಾಘಿಸಿದರು .

ಇಂದು ನಗರದ ಕೆಇಬಿ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದಿನ ಮಕ್ಕಳಲ್ಲಿ ಮೌಲ್ಯಗಳನ್ನು ಕಲಿಸುವುದು ಅವಶ್ಯಕತೆಯಿದೆ .ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಶಿಕ್ಷಕರಿಂದ ಸಮಾಜದಲ್ಲಿ ಬದಲಾವಣೆ ಸಾದ್ಯ ,ಯಾವುದೇ ಜನಪ್ರತಿನಿಧಿಗಳು ಮಾಡದ ಕಾರ್ಯಗಳನ್ನು ಶಿಕ್ಷಕರು ಮಾಡುತ್ತಾರೆ .ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿಯನ್ನು ಕೆಎಲ್ಇ ಮತ್ತು ಇಲ್ಲಿನ ಮಠ ಮಂದಿರಗಳು ಮಾಡುತ್ತಿವೆ ಎಂದರು .

ಕಾರ್ಯಕ್ರಮದಲ್ಲಿ ಜಿ.ಪಂ ಅದ್ಯಕ್ಷ ಆಶಾ ಐಹೋಳೆ ,ಸಿಇಓ ರಾಮಚಂದ್ರನ್ ,ಶಾಸಕ ಅನಿಲ ಬೆನಕೆ ಸೇರಿದಂತೆ ಇತರರು ಇದ್ದರು .

loading...