ಧರ್ಮದ ಅಮೃತ ನಿತ್ಯ ಕುಡಿದರೆ ಅಜ್ಞಾನದ ದುಃಖ ನಿವಾರಣೆ: ಶ್ರಿÃಗಳು

0
0
loading...

ಬೀಳಗಿ: ಮನುಷ್ಯನ ಬದುಕಿನಲ್ಲಿ ಧರ್ಮ ಪ್ರಮುಖ ಪಾತ್ರ ವಹಿಸುತ್ತದೆ. ಧರ್ಮದ ಅಮೃತವನ್ನು ನಿತ್ಯ P ÀÄಡಿದರೆ ಅಜ್ಞಾನದ ದುಃಖ ನಿವಾರಣೆಯಾಗುತ್ತದೆ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ತಾಲೂಕಿನ ಮನ್ನಿಕೇರಿ ಗ್ರಾಮದ ದಿಗಂಬರೇಶ್ವರ ಮಠದ ೬೩ನೇ ಜಾತ್ರಾ ಮಹೋತ್ಸವ, ೧೫ನೇ ಶ್ರಾವಣ ಮಾಸದ ಪುರಾಣ ಮಂಗಲೋತ್ಸವ, ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಸಂಪತ್ತು, ಆಯುಷ್ಯ, ಅಧಿಕಾರ, ಸತಿ-ಸುತರು ಶಾಶ್ವತವಲ್ಲ. ಧರ್ಮ ಒಂದೇ ಶಾಶ್ವತವಾಗಿದೆ ಎಂದರು.
ಮಠಗಳು ಕಾಯಿ ಒಡೆಯುವ, ಕರ್ಪೂರ, ಊದಬತ್ತಿ ಬೆಳಗುವ ತಾಣವಾಗದೆ, ಜಾಗೃತ ತಾಣಗಳಾಗಬೇಕು. ಅಲ್ಲಿನ ಪೀಠಾಧಿಕಾರಿಗಳು ಮಾತನಾಡುವ ದೇವರು. ಆದ್ದರಿಂದ ಭಕ್ತರು ಗುರು ಮತ್ತು ಧರ್ಮದ ಸಂಗವನ್ನು ಮಾಡಬೇಕೆಂದು ಕರೆ ನೀಡಿದರು.
ಕೋಲ್ಹಾರದ ಕಲ್ಲಿನಾಥ ದೇವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಕ್ತಿ ಮಾರ್ಗದಲ್ಲಿ ನಡೆದರೆ ಶ್ರಿÃಮಂತಿಕೆ ಉಳಿಯುತ್ತದೆ. ದಿಗಂಬರೇಶ್ವರರು ಭಕ್ತಿಯಿಂದ ನಡೆದುಕೊಂಡರೆ ಕಾಮಧೇನು-ಕಲ್ಪವೃಕ್ಷವಾಗಿ ಭಕ್ತರ ಇಷ್ಟಾರ್ಥಿಗಳನ್ನು ಪೂರೈಸುವ ಶಕ್ತಿಹೊಂದಿರುವನೆಂದು ತಿಳಿಸಿ, ಭಾರತೀಯ ಪರಂಪರೆ, ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳಿಸಿಕೊಂಡು ಹೋಗಬೇಕೆಂದರು.
ಅಶ್ವಾರೂಢರಾದ ಶ್ರಿÃಮಠದ ನಿರ್ವಾಣ ಸ್ವಾಮಿಗಳು, ಬಸವೇಶ್ವರ, ಘನಮಠದ ನಾಗಭೂಷಣರ ಭಾವಚಿತ್ರಗಳ ಮೆರವಣಿಗೆ ಭಜನೆ, ಸುಮಂಗಲೆಯರ ಆರತಿ, ಕುಂಭ, ಬಾಗಲಕೋಟೆ ಹಳಪೇಟೆಯ ಮಡುವಿನ ದೈವದ ಮಾಲೆ, ಸಕಲ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರಿÃಮಠಕ್ಕೆ ಆಗಮಿಸಿದ ನಂತರ ಧರ್ಮಸಭೆಯಾಗಿ ಮಾರ್ಪಟ್ಟಿತು.
ಹಲಕುರ್ಕಿಯ ಷಡಕ್ಷರಿ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಪಡೇಕನೂರದ ಚನ್ನಮಲ್ಲಿಕಾರ್ಜುನ ಸ್ವಾಮಿಗಳು `ಘನಮಠದ ನಾಗಭೂಷಣ ಶಿವಯೋಗಿಗಳ’ ಪುರಾಣವನ್ನು ಮಹಾ ಮಂಗಲಗೊಳಿಸಿದರು.
ಅತಿಥಿಗಳಾಗಿ ಬೀಳಗಿಯ ಕಲ್ಮಠದ ಗುರುಪಾದ ದೇವರು, ಫಕೀರಯ್ಯ ಸ್ವಾಮಿಗಳು, ಶಿವಾನಂದ ದೇವರು, ಕಿತ್ತಲಿಯ ಮಂಜುನಾಥ ಸ್ವಾಮಿಗಳು, ಗುಂದವಾನದ ಸಾವಿತ್ರಮ್ಮನವರು, ಬಳೂತಿಯ ಶಂಕ್ರಯ್ಯ ಸ್ವಾಮಿಗಳು, ಹನಮಂತ ದಳವಾಯಿ ಆಗಮಿಸಿದ್ದರು. ಶಿವಾನಂದ ಮಂಕಣಿ ಪ್ರಾಸ್ತಾವಿಕ ನುಡಿ ಹೇಳಿದರು. ಅರವಿಂದ ಮಂಕಣಿ, ತಿಪ್ಪಣ್ಣ ಮೆಟಗುಡ್ಡ ನಿರೂಪಿಸಿದರು. ಸಿದ್ದು ಛಬ್ಬಿ ಸ್ವಾಗತಿಸಿದರು. ಹನಮಂತ ಕೆಳಗಿನಮನಿ ವಂದಿಸಿದರು.

loading...