ಧಾರ್ಮಿಕ ಸಂಪ್ರದಾಯಗಳು ಮುಂದಿನ ಪೀಳಿಗೆಗಳಿಗೆ ಅವಶ್ಯ : ವೀಣಾ ಕಾಶಪ್ಪನವರ

0
0
loading...

ಹುನಗುಂದ-ಧಾರ್ಮಿಕ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗಳಿಗೆ ಉಳಿಸಲು ಇಂತಹ ಜಾತ್ರೆ,ಉತ್ಸವ,ಹಬ್ಬ ಹರಿದಿನಗಳನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಎಂದು ಜಿ.ಪಂ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಅವರು ತಾಲೂಕಿನ ಸಮೀಪದ ದಮ್ಮೂರ ಗ್ರಾಮದ ಶ್ರೀ ದಿಡಗಿನ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ತೃತೀಯ ವರ್ಷದ ರಥೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಸಾಕಷ್ಟು ಬಾರಿ ಈ ಗ್ರಾಮಕ್ಕೆ ಬಂದಿದೆ ಆದರೇ ಈ ನಿಸರ್ಗದ ಮಡಿಲಲ್ಲಿ ನೆಲೆಸಿರುವ ಬಸವೇಶ್ವರ ದರ್ಶನ ಪಡೆಯುವ ಭಾಗ್ಯ ಇಂದು ದೊರೆಯಿತು.ಜಾತ್ರೆ,ಹಬ್ಬಗಳು ಜಾತಿ,ಮತ,ಪಂಥ ಬೇಧವಿಲ್ಲದೆ ಜೀವನದ ಕಷ್ಟವನ್ನು ಬದಿಗೊತ್ತಿ ಸಂತೋಷ ಭಕ್ತಯಿಂದ ಆಚರಿಸುವ ವಾಡಿಕೆ ನಮ್ಮದಾಗಿದೆ.ಗ್ರಾಮದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ಸತ್ಪ್ರಜೆಗಳನ್ನಾಗಿ ಮಾಡಿ.ಶಿಕ್ಷಣ ಕೊಡಿಸುವುದರಲ್ಲಿ ತಾಯಿ ಪಾತ್ರ ಅಗಾಧವಾದುದು.ಬಾಗಲಕೋಟಿ ಜಿಲ್ಲೆಯನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಕೆಲಸ ಮಾಡುತ್ತೇನೆ ಅದಕ್ಕೆ ನಿಮ್ಮೆಲ್ಲರ ಬೆಂಬಲ ಆಶೀರ್ವಾದ ಮುಖ್ಯ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎಲ್.ಶಾಂತಗಿರಿ ಮಾತನಾಡಿ ಪೂಜ್ಯರ ಪಾದ ಸ್ಪರ್ಶದಿಂದ ದಿಡಗಿನ ಬಸವೇಶ್ವರರು ಇಲ್ಲಿ ನೆಲಿಸಿದ್ದು.ಈ ದೇವಸ್ಥಾನ ಹುಟ್ಟಿನಿಂದ ಈ ಗ್ರಾಮದ ಜನತೆಗೆ ಮಳೆ,ಬೆಳೆ,ಉದ್ಯೋಗಕ್ಕೆ ತೊಂದರೆಯಿಲ್ಲ,ಈ ಗ್ರಾಮ ಯುವಕರು ವಿವಿಧ ಕ್ಷೇತ್ರದಲ್ಲಿ ಒಳ್ಳೆಯ ಹುದ್ದೆಯನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.ಅದಕ್ಕಾಗಿ ಈ ರಥೋತ್ಸವ ಕಾರ್ಯವನ್ನು ಸರ್ವ ಜನಾಂಗವು ಭಾವೈಕ್ಯತೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಗುಳೇದಗುಡ್ಡದ ಒಪ್ಪತ್ತೇಶ್ವರ ಮಹಾಸ್ವಾಮಿಗಳು,ಸುಕ್ಷೇತ್ರದ ಅಂಕಲಿಮಠದ ವೀರಭದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದರು, ಸಾನಿಧ್ಯ ವಹಿಸಿಕೊಂಡು ಆದ್ಯಾತ್ಮೀಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿದರು,ಅಧ್ಯಕ್ಷತೆಯನ್ನು ಮಾಜಿ ಜಿ.ಪಂ ಸದಸ್ಯ ಮಲ್ಲಣ್ಣ ಹೂಲಗೇರಿ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿರುವ ಗ್ರಾಮದ ಪ್ರತಿಭಾವಂತ ಸಾಧಕರಾದ ಪತ್ರಕರ್ತೆ ಸುಧಾ ಪಾಟೀಲ,ಶಾಂತಾ ಬಿಲೋರ,ವಾಯ್.ಬಿ.ಕಬ್ಬರಗಿ,ಉಮೇಶ ಕರಡಿ,ಯಲ್ಲನಗೌಡ ಕೆಂದೂರ ಅವರನ್ನು ಗ್ರಾಮದ ಪರವಾಗಿ ಸತ್ಕರಿಸಲಾಯಿತು,
ಪರಶುರಾಮ ಶ್ರೀಗಳು,ದೇವೇಂದ್ರಪ್ಪ ಶ್ರೀಗಳು ಸಾನಿಧ್ಯವನ್ನು ವಹಿಸಿಕೊಂಡಿದ್ದರು,ಪರಸನಗೌಡ ಪಾಟೀಲ,ದಾಸೋಹಿಗಳಾದ ಪ್ರಗರಾಮ್ ಚೌದರಿ ಮತ್ತು ಚುನಿಲಾಲ ಚೌದರಿ,ಪಿಎಲ್.ಡಿ.ಬ್ಯಾಂಕ್ ನಿರ್ದೇಶಕ ಚಂದ್ರಶೇಖರಯ್ಯ ಕಟಾಪೂರಮಠ,ಶರಣಪ್ಪ ಜಲ್ಲಿ,ಗ್ರಾ,ಪಂ ಸದಸ್ಯ ಖಾಜೇಸಾಬ ಬಾಗವಾನ,ಯಲ್ಲನಗೌಡ ಪಾಟೀಲ,ಮುತ್ತವ್ವ ಮೇಟಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.ಕಾರ್ಯಕ್ರಮ ಶಿಕ್ಷಕ ಎಂ.ವಾಯ್.ಹುಲ್ಯಾಳ ನಿರೂಪಿಸಿ ವಂದಿಸಿದರು.

loading...