ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ !

0
0
loading...

ನಗರದಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ !

ಕುಂಟು ನೆಪ ಹೇಳಿ ಕೈ ಕಟ್ಟಿ ಕುಳಿತ ಪಾಲಿಕೆ | ಬಳಕೆಯಾಗದ ೩೦ ರೂ ಲಕ್ಷ ಅನುದಾನ

ಅಶೋಕ ಬಾ ಮಗದುಮ್ಮ

ಬೆಳಗಾವಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದು, ಮಹಾನಗರ ಪಾಲಿಕೆ ಬೀದಿ ನಾಯಿಗಳ ನಿಯಂತ್ರಣ ಮುಂದಾಗದೆ. ಕುಂಟು ನೆಪ ಹೇಳುವ ಮೂಲಕ ಕೈ ಕಟ್ಟಿ ಕುಳಿತಿದ್ದಾರೆ.

ರಾಜ್ಯದಲ್ಲಿ ಅತೀ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯ ಮಹಾನಗರ ಪಾಲಿಕೆಗೆ ಪ್ರತಿವರ್ಷವೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆಯಿಂದ ಟೆಂಡರ್ ಕರೆದು ನಿಯಂತ್ರಣಕ್ಕೆ ಮುಂದಾಗುತ್ತಿದ್ದರು. ಆದರೆ ಈ ಬಾರಿ ಟೆಂಡರ್ ಕರೆದರು ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲವೆಂದು ಕೈ ಕಟ್ಟಿ ಕುಳಿತಿರುವುದರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.

ಮುಂಜಾನೆಯಿಂದ ನಗರದಲ್ಲಿ ಸಂಚರಿಸುವ ಸಾವಿರಾರೂ ಸಾರ್ವಜನಿಕರಿಗೆ ಈ ಬೀದಿ ನಾಯಿಗಳ ಕಾಟದಿಂದ ಬೇಸತ್ತು ಕೈಯಲ್ಲಿ ಕೊಲ್ಲನ್ನು ಹಿಡಿದು ಸಂಚರಿಸುವ ಪರಿಸ್ಥತಿ ನಿರ್ಮಾಣವಾಗುತ್ತಿದೆ. ಸಾರ್ವಜನಿಕರಿಗೆ ಬೀದಿ ನಾಯಿಗಳು ದಾಳಿ ಮಾಡುತ್ತಿದ್ದರು ಸಹ ಬೆಳಗಾವಿ ಮಹಾನಗರ ಪಾಲಿಕೆ ಸುಮ್ಮನೆ ಇರುವುದು ಸಾರ್ವಜನಿಕರ ಕೆಂಗಣ್ಣಿಗೆÉ ಗುರಿಯಾಗುತ್ತಿದೆ.

ರಾತ್ರಿಯಾಗುತ್ತಿದಂತೆ ನಾಯಿಗಳು ಪಾದಚಾರಿಗಳ ಮೇಲೆ ಎಗರಿ ಅವರ ಜೀವದ ಜೊತೆ ಆಟವಾಡಿತ್ತಿವೆ. ನಗರದಲ್ಲಿ ಇಷ್ಟೆÃಲ್ಲ ಘಟನೆಗಳು ನಡೆಯುತ್ತಿದ್ದರೂ ಜನಸಾಮನ್ಯರಿಗೆ ರಕ್ಷಣೆ ನೀಡುವಲ್ಲಿ ಮಹಾನಗರ ಪಾಲಿಕೆ ನೀರ್ಲಕ್ಷö್ಯ ತೊರುತ್ತಿದೆ.

ಪಾಲಿಕೆಯಲ್ಲಿ ಕಾಗೆ ಗುಬ್ಬಕ್ಕನ ಕಥೆ: ಈ ವರ್ಷ ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆ ವಿಶೇಷ ಅನುದಾನದಲ್ಲಿ ಸುಮಾರು ೩೦ ಲಕ್ಷ ರೂ ಅನುದಾನವನ್ನ ಮಿಸಲಿಡಲಾಗಿದೆ. ಟೆಂಡರ್ ತೆಗೆದುಕೊಳ್ಳುತ್ತಿಲ್ಲವೆಂದು ಹಾರಿಕೆ ಉತ್ತುರ ಹೇಳುವ ಮೂಲಕ ಅನುದಾನ ಹಣವನ್ನು ಪಾಲಿಕೆ ನುಂಗಿಹಾಕುತ್ತಿದೆ ಎಂಬುವುದೇ ಸಾರ್ವಜನಿಕರ ಆರೋಪವಾಗಿದೆ. ಬೀದಿ ನಾಯಿಗಳ ಹೆಸರಲ್ಲಿ ಲಕ್ಷ ಲಕ್ಷ ವೀಶೆಷ ಅನುದಾನ ಪಾಲಿಕೆಯಲ್ಲಿದ್ದರೂ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಪಾಲಿಕೆಯಿಂದ ಸಾಧ್ಯವಾಗುತ್ತಿಲ್ಲ ಈ ಪ್ರಶ್ನೆÃ ಕೇಳಿದರೆ ಪಾಲಿಕೆ ಅಧಿಕಾರಿಗಳು ಕಾಗೆ ಗುಬ್ಬಕ್ಕನ ಕಥೆ ಹೇಳಲಾರಂಭಿಸುತ್ತಾರೆ.

ಬೀದಿ ನಾಯಿಗಳ ಅಟ್ಟಹಾಸ: ನಾಯಿಗಳು ರಾಜಾರೋಷವಾಗಿ ಓಡಾಡುತ್ತಲೇ ಅಟ್ಟಹಾಸ ಮೆರೆಯುತ್ತವೆ. ೨೦೧೮ರಲ್ಲಿ ಬೀದಿ ನಾಯಿ ದಾಳಿಗೆ ೩೫ ಜನ ಗಾಯಗೊಂಡು ಓರ್ವ ಬಾಲಕ ಕ್ರೂರವಾಗಿ ಸಾವನ್ನಪ್ಪಿದ್ದಾನೆ. ಬೀದಿ ನಾಯಿ ಹಾವಳಿ ಮುಂದುವರೆದಿದೆ. ಬೆಳಗಾವಿ ಪಾಲಿಕೆ ಪಶುಪಾಲನಾ ವಿಭಾಗ ಇದ್ದು ಇಲ್ಲದಂತಾಗಿದೆ. ಸಂತಾನ ಹರಣ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಖರ್ಚಾಗಿದೆ. ಸಂತಾನ ಹರಣ ಮಾಡಿದರೂ ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಬೀದಿ ನಾಯಿಗಳ ಸಂತತಿ ಬೆಳೆಯುತ್ತಲೇ ಇವೆ.

೨೦೧೭ ರಿಂದ ಈಚೆಗೆ ೨೦೦೦ ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಕಡಿವಾಣ ಕಚ್ಚಿವೆ. ಪಾಲಿಕೆ ಪ್ರಕಾರ ೩೦ ಲಕ್ಷ ಬೀದಿ ನಾಯಿಗಳಿವೆ. ಕಳೆದ ಐದು ವರ್ಷದಲ್ಲಿ ಬೀದಿ ನಾಯಿ ಸೆರೆ ಹಿಡಿಯಲು ಕೋಟಿಗಟ್ಟಲೆ ಹಣ ಖರ್ಚು ಮಾಡಲಾಗಿದೆ.

ಒಟ್ಟಾರೆಯಾಗಿ ಬೀದಿನಾಯಿಗಳನ್ನು ಹಿಡಿಯುತ್ತಾರೋ, ಸಂತಾನಹರಣ ಚಿಕಿತ್ಸೆ ಮಾಡುತ್ತಾರೋ ಇಲ್ಲವೋ ಗೊತ್ತಿಲ್ಲ. ಲೆಕ್ಕ ಮಾತ್ರ ಪಕ್ಕಾ ಆಗಿರುತ್ತದೆ.

======ಬಾಕ್ಸ್==========

ಕಾಲೇಜಿಗೆ ಹೋಗುವಾಗ ಬರುವಾಗ ಬೀದಿ ನಾಯಿಗಳ ಎಷ್ಟೂ ಬಾರಿ ಎಗರಿ ಮೈ ಮೇಲೆ ಬರುತ್ತಾವೆ. ಭಯದಲ್ಲಿಯೇ ಕಾಲೇಜ್ ಗೆ ಹೋಗಬೇಕಾಗಿದೆ. ಪಾಲಿಕೆ ಈ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಬೇಕು.

ಸಂತೋಷ ಬೋಜಗಾರ

ಕಾಲೇಜ ವಿದ್ಯಾರ್ಥಿ

=====ಬಾಕ್ಸ್========

ಬೀದಿ ನಾಯಿಗಳ ನಿಯಂತ್ರಣಕ್ಕೆ ಪಾಲಿಕೆಯಲ್ಲಿ ವಿಶೇಷ ಅನುದಾನವಿದೆ. ಈಗಾಗಲೇ ನಾಲ್ಕು ಬಾರಿ ಟೆಂಡರ್ ಕರೆಯಲಾಗಿದೆ. ಆದರೆ ಟೆಂಡರ್ ತೆಗೆದುಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಈಗ ಮತ್ತೊಂದು ಬಾರಿ ಟೆಂಡರ್ ಕರೆಯಲಾಗುತ್ತದೆ.

ಶಶಿಧರ ನಾಡಗೋಡ

ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ

loading...