ನನ್ನನು ಯಾರು ಅಪಹರಣ ಮಾಡಿಲ್ಲ:ನನ್ನ ನಡೆ ಅಭಿವೃದ್ಧಿ ಕಡೆ:ಅಜೀತ ಕರಜಗಿ ಸ್ಪಷ್ಟನೆ .

0
4
loading...

ನನ್ನನು ಯಾರು ಅಪಹರಣ ಮಾಡಿಲ್ಲ:ನನ್ನ ನಡೆ ಅಭಿವೃದ್ಧಿ ಕಡೆ:ಅಜೀತ ಕರಜಗಿ ಸ್ಪಷ್ಟನೆ .

ಕನ್ನಡಮ್ಮ ಸುದ್ದಿ-ಸಂಕೇಶ್ವರ :ಸಂಕೇಶ್ವರ ಪುರಸಭೆಯ ಚುನಾವಣಾಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣದ ಫಲಿತಾಂಶ ಬಂದಿದ್ದು ,ನಾನು ವಾರ್ಡ ನಂ. 19 ರ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದೆನೆ ,ನನ್ನ ಮೇಲೆ ವಿ ಪಕ್ಷಗಳಿಂದ ವಿಫರಿತ ಒತ್ತಡವಿದೆ,ನನ್ನನ್ನು ಯಾರು ಅಪಹರಣ ಮಾಡಿಲ್ಲ ಎಂದು ಪುರಸಭೆ ಪಕ್ಷೇತರ ಸದಸ್ಯ ಅಜೀತ ಕರಜಗಿ ಸ್ಪಷ್ಟ ಪಡೆಸಿದರು .

ಇಂದು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಂಕೇಶ್ವರ ಪುರಸಭೆ ಅದ್ಯಕ್ಷ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸಾಮಾನ್ಯ ಮೀಸಲು ಬಂದಿದೆ.ನನ್ನನು ಅಪಹರಣ ಮಾಡಲಾಗಿದೆ ಎಂದು ಸುಳ್ಳು ವದಂತಿ ಹರಿ ಬೀಡಲಾಗಿದೆ.ಆದರೆ ನನ್ನನು ಯಾರು ಅಪಹರಣ ಮಾಡಿಲ್ಲ.ಮುಂದಿನ ದಿನಗಳಲ್ಲಿ ಹಿರಿಯರು ಮತ್ತು ಯುವಕರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳುತ್ತೆನೆ.ನನ್ನ ನಡೆ ಏನೆ ಇದ್ದರು ಅಭಿವೃದ್ಧಿ ಕಡೆಗೆ ಎಂದು ತಿಳಿಸಿದ್ದಾರೆ.

ಸಂಕೇಶ್ವರ ಪುರಸಭೆಯಲ್ಲಿ ಈ ಬಾರಿ 11 ಕಾಂಗ್ರೆಸ್, 11 ಬಿಜೆಪಿ ಸದಸ್ಯರು ಆಯ್ಕೆಯಾಗಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ .ಪಕ್ಷೇತರನಾಗಿ ಆಯ್ಕೆಯಾಗಿರುವ ಅಜೀತ ಕರಜಗಿ ಬೆಂಬಲ ನೀಡಿದ ಪಕ್ಷ ಅಧಿಕಾರ ಚುಕ್ಕಾಣಿ ಹಿಡಿಯಲಿದೆ .

loading...