ನಮ್ಮ ಸಮಾಜಕ್ಕೆ ಶಿಕ್ಷಕರು ಮಾದರಿಯಾಗಬೇಕು: ಡಾ. ಮಂಟೂರ

0
0
loading...

ಜಮಖಂಡಿ: ಇಂದಿನ ದಿನಮಾನದಲ್ಲಿ ಶಿಕ್ಷಕರು ಪರಿವರ್ತನೆಯಾಗಬೇಕು. ಶಿಕ್ಷಕರು ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸಿ ಮಕ್ಕಳಿಗೆ ಉತ್ತಮ ಜ್ಞಾನ ನೀಡುವ ಕಾರ್ಯ ನಡೆಸಬೇಕು ಎಂದು ಡಾ. ಈಶ್ವರ ಮಂಟೂರ ಕರೆ ನೀಡಿದರು. ಅವರು ಬುಧವಾರ ತಾಲೂಕಿನ ಹುನ್ನೂರು-ಮಧುರಖಂಡಿಯ ಬಸವಜ್ಞಾನ ಗುರುಕುಲದ ಬಸವ ಚೇತನ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಡಾ. ರಾಧಾಕೃಷ್ಣರ ಜನ್ಮದಿನ-ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ಶಿಕ್ಷಕರು ಮುಜುಗುರ, ನಾಚಿಕೆ ಸ್ವಭಾವ ಬಿಟ್ಟು ತಮ್ಮಲ್ಲಿನ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆಯಬೇಕು. ಶಿಕ್ಷಕರು ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಯಲ್ಲಿ ಹೆಚ್ಚಿನ ಗಮನ ಹರಿಸಬೇಕು. ರಾಷ್ಟçಪತಿ ಡಾ. ರಾಧಾಕೃಷ್ಣರು ದೇಶದ ಶ್ರೆÃಷ್ಠ ತತ್ವಜ್ಞಾನಿ ಜಮಖಂಡಿಯ ಗುರುದೇವ ರಾನಡೆ ಅವರು ಪರಮ ಶಿಷ್ಯರಾಗಿದ್ದು, ನಮ್ಮಲ್ಲೆರ ಭಾಗ್ಯ. ನಮ್ಮ ಸಮಾಜಕ್ಕೆ ಶಿಕ್ಷಕರು ಮಾದರಿಯಾಗಬೇಕು ಎಂದರು.
ಅತಿಥಿಗಳಾಗಿದ್ದ ಮುಧೋಳದ ನಿವೃತ್ತ ಶಿಕ್ಷಕ ಎಸ್.ಸಿ ಬಿಳ್ಳೂರ ಮಾತನಾಡಿ, ಇಂದು ನಮ್ಮ ಮಕ್ಕಳಲ್ಲಿ ಹೋರಾಟ ಮತ್ತು ಛಲಗಾರಿಕೆ ಕೊರತೆಯಾಗುತ್ತಿದೆ. ಮಕ್ಕಳಲ್ಲಿ ಸಂಸ್ಕಾರ ಮನೋಭಾವನೆ ಬೆಳೆಸುವ ಕೆಲಸ ನಡೆಯಬೇಕು. ದೇಶಾಭಿಮಾನ ಹಾಗೂ ರಾಷ್ಟಾçಭಿಮಾನ ಬೆಳೆಸಬೇಕು. ಮಕ್ಕಳಲ್ಲಿ ಸ್ವಯಂ ವ್ಯಕ್ತಿತ್ವ ಬೆಳೆಸಿಕೊಳ್ಳುವ ಜಾಣ್ಮೆ-ಶಕ್ತಿ ಬರುವಂತೆ ಮಾಡಬೇಕಾಗಿದೆ ಎಂದರು. ಮಕ್ಕಳು ದೇವಲೋಕದ ಬಂಗಾರ ಪುಷ್ಪಗಳಿದ್ದಂತೆ ಅವರನ್ನು ಮೃದುವಾಗಿ ಲಾಲನೆ-ಪಾಲನೆ ಮಾಡಬೇಕು. ಈ ಸಮಾಜ ಮತ್ತು ದೇಶ ಬದಲಿಸಲು ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು.

ಡಾ.ರಾಧಾಕೃಷ್ಣರ ಬಗ್ಗೆ ವಿದ್ಯಾರ್ಥಿಗಳಾದ ರಾಹುಲ್ ಕಲ್ಹಳ್ಳಿ, ಸಾಗರ ಖವಾಸಪೂರ, ಶಿಕ್ಷಕಿಯರಾದ ದೀಪಾ ಕಳಸಗೊಂಡ, ಶಂಕ್ರಮ್ಮಾ ಗೆದ್ದೆಪ್ಪನ್ನವರ, ಶ್ರಿÃದೇವಿ ಉಮರ್ಜಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸರ್ಕಾರಿ ಸೇವೆಗೆ ಹಾಜರಾಗುವ ಶಿಕ್ಷಕ ಭೀಮಪ್ಪ ಕಂಟೆಪ್ಪನ್ನವರ ಅವರನ್ನು ಸನ್ಮಾನಿಸಲಾಯಿತು. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ವಿವಿಧ ಕ್ರಿÃಡೆ, ಸಾಂಸ್ಕçತಿಕ ಚಟುವಟಿಕೆಗಳು ನಡೆದವು.
ನಿವೃತ್ತ ಶಿಕ್ಷಕ ಲಕ್ಷö್ಮಣ ಕೆಳೇಗಾಂವಿ, ಶಿಕ್ಷಕ,ಪತ್ರಕರ್ತ ಗುರುರಾಜ ವಾಳ್ವೆÃಕರ, ಮುಖ್ಯಗುರು ವಿನೋದ ಚಲವಾದಿ, ಆನಂದ ಬಿರಾದಾರ, ಸುರೇಶ ಸನದಿ, ಮಹಾಲಕ್ಷಿö್ಮÃ ಕಲಬುರ್ಗಿ ಇತರರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಸುಧೀರ ಬೂದಿಗೊಪ್ಪ ಸ್ವಾಗತಿಸಿದನು. ಸಾನಿಕಾ ಭಂಗಿ ನಿರೂಪಿಸಿದಳು. ಪ್ರಿÃತಿ ಜಂಬಗಿ ವಂದಿಸಿದರು.

loading...