ನವದೆಹಲಿಯಲ್ಲಿ ಭಾರಿ ಮಳೆ

0
0
loading...

ನವದೆಹಲಿ:ಕೇರಳ ಹಾಗೂ ಕೊಡಗಿನಲ್ಲಿ ಸುರಿದು ಭಾರಿ ಅನಾಹುತಕ್ಕೆ ಕಾರಣವಾಗಿದ್ದ ವರುಣದೇವ ಈಗ ರಾಷ್ಟ್ರ ರಾಜಧಾನಿ ದೆಹಲಿಗೆ ಲಗ್ಗೆ ಇಟ್ಟಿದೆ. ಕಳೆದ ಕೆಲ ದಿನಗಳಿಂದ ನವದೆಹಲಿಯಲ್ಲಿ ಭಾರಿ ಮಳೆ ಆಗುತ್ತಲೇ ಇದೆ.
ಇಂದು ಸಹ ಭಾರಿ ಮಳೆ ಆಗುತ್ತಿದ್ದು,ಮಹಾನಗರದ ಹಲವು ಭಾಗಗಳು ನೀರಿನಿಂದ ಆವೃತವಾಗಿವೆ.ಲಕ್ಷ್ಮೀ ನಗರ ಏರಿಯಾದಲ್ಲಂತೂ ಬಸ್ ಹಾಗೂ ಕಾರು ಚಾಲಕರು ಮುಂದಕ್ಕೆ ಹೋಗಲಾಗದೇ ಒದ್ದಾಡುತ್ತಿದ್ದಾರೆ.
ಇನ್ನು ಮೋತಿ ಭಾಗಾ ಪ್ರದೇಶದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು,ರಸ್ತೆ ಮೇಲೆ ನೀರು ಹರಿಯುತ್ತಿದೆ.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಮಳೆಯಿಂದಾಗಿ ಅಲ್ಲಲ್ಲಿ ನಿಧಾನವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

loading...