ನಾಗನೂರ ಕಲ್ಲೊಳ್ಳಿ ಪಟ್ಟಣ ಪಂಚಾಯತಿಯಲ್ಲಿ ಭ್ರಷ್ಟಾಚಾರ, ಅಕ್ರಮ ಕಾರ್ಯಗಳನ್ನು ಖಂಡಿಸಿ ಪ್ರತಿಭಟನೆ

0
0
loading...

ನಾಗನೂರ ಕಲ್ಲೊಳ್ಳಿ ಪಟ್ಟಣ ಪಂಚಾಯತಿಯಲ್ಲಿ
ಭ್ರಷ್ಟಾಚಾರ, ಅಕ್ರಮ ಕಾರ್ಯಗಳನ್ನು ಖಂಡಿಸಿ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯ ಅರಭಾವಿ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ನಾಗನೂರು ಹಾಗೂ ಕಲ್ಲೊÃಳ್ಳಿ ಪಟ್ಟಣ ಪಂಚಾಯತಿಯಲ್ಲಿ ಆಗುತ್ತಿರುವ ಭ್ರಷ್ಟಾಚಾರ, ಅಕ್ರಮ ಕಾರ್ಯಗಳನ್ನು ಖಂಡಿಸಿ ಬೆಳಗಾವಿ ಜಿಲ್ಲಾ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಲಕ್ಕನ್ನ ಸವಸುದ್ದಿ ನೇತೃತ್ವದಲ್ಲಿ ನೂರಾರು ಮಹಿಳೆಯರು, ಸೂರಿಲ್ಲದ ಕುಟುಂಬಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಲಕ್ಕನ್ನ ಸವಸುದ್ದಿ, ಕಲ್ಲೊÃಳ್ಳಿ ಪಟ್ಟಣದಲ್ಲಿ ಬೋರವೆಲ್, ರಸ್ತೆ, ಚರಂಡಿ, ಜಲಕುಂಭ ಗ್ಯಾಸ ವಿತರಣೆಗಳು ಬಡವರ ಪಾಲಾಗದೇ ಲಂಚದ ಮೂಲಕ ಉಳ್ಳವರ ಪಾಲಾಗುತ್ತಿವೆ. ಅಲ್ಲದೇ ೬೪ ಎಕರೆ ಗೋಮಾಳ ಕಡು ಬಡವರಿಗೆ ನೀಡದೇ ಶ್ರಿÃಮಂತರು ಭ್ರಷ್ಟಾಚಾರದ ಮೂಲಕ ಆಸ್ತಿ ಮಾಡುವ ಹುನ್ನಾರ ನಡೆಸಿದ್ದಾರೆ. ಇದನ್ನು ಜಿಲ್ಲಾಡಳಿತ ತಡೆದು ಅರ್ಹ ಫಲಾನುಭವಿಗಳಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.
ನಾಗನೂರು ಪಟ್ಟಣ ಪಂಚಾಯತಿಯಲ್ಲಿ ಸದಸ್ಯರ ಸಂಬಂಧಿಕರು ವಸತಿ ಯೋಜನೆಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಜಿಲ್ಲಾಧಿಕಾರಿಗಳು ಪಟ್ಟಣ ಪಂಚಾಯತಿಯ ಕಾರ್ಯವೈಖರಿಯನ್ನು ನೇರವಾಗಿ ಪರಿಶೀಲಿಸಿ ಬಡ ಕುಟುಂಬಗಳಿಗೆ ಹಂಚಿಕೆ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದರು.
ಅರಭಾಂವಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲವ್ವ ಬೆಣ್ಣಿ, ಗೂಳಪ್ಪ ಮೇಟಿ, ಹೊಳೆಪ್ಪ, ಮಂಜುನಾಥ ಫಿರೋಜಿ ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

loading...