ನಾಡಿನಾದ್ಯಂತ ಅಷ್ಟಮಿಯ ಸಂಭ್ರಮ-ಸಡಗರ

0
2
loading...

ಬೆಂಗಳೂರು: ಶ್ರಿÃ ಕೃಷ್ಣ ಜನ್ಮಾಷ್ಟಮಿ. ನಾಡಿನಾದ್ಯಂತ ಅಷ್ಟಮಿಯನ್ನು ಸಂಭ್ರಮ-ಸಡಗರದೊಂದಿಗೆ, ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಡುಪಿಯ ಶ್ರಿÃಕೃಷ್ಣಮಠ ಶೃಂಗಾರಗೊಂಡಿತ್ತು.
ಬೆಳಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠದತ್ತ ಹರಿದು ಬಂತು. ಕಳೆದ ಎರಡು ದಿನಗಳ ಹಿಂದಿನಿಂದಲೇ ಕೃಷ್ಣಮಠ ಮತ್ತು ರಥ ಬೀದಿಗೆ ಕಳೆ ಬಂದಿತು.ಉತ್ಸವದ ಪ್ರಯುಕ್ತ ಕೃಷ್ಣಮಠವನ್ನು ಬಗೆ ಬಗೆ ಪುಷ್ಪಗಳಿಂದ ಅಲಂಕಾರಗೊಳಿಸಲಾಗಿತು. ಇನ್ನು ಬೆಳಗ್ಗೆಯಿಂದಲೇ ಭಕ್ತರು ಮಠಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು.
ಪರ್ಯಾಯ ಶ್ರಿÃಗಳು ಬೆಳಗ್ಗೆ ಶ್ರಿÃ ಕೃಷ್ಣನಿಗೆ ಮಹಾಪೂಜೆ ನೆರವೇರಿಸಿದರು. ಇನ್ನು ಅಷ್ಟಮಿ ಹಬ್ಬ ಬಂದಿರುವುದನ್ನು ಸಾರುವಂತೆ ಉಡುಪಿಯಾದ್ಯಂತ ಹುಲಿವೇಷಧಾರಿಗಳು ಸಂಚರಿಸಿ ನೃತ್ಯವಾಡುತ್ತಿರುವುದನ್ನೆÃ ನೊಡುವುದು ಕಣ್ಣಿಗೊಂದು ಹಬ್ಬ. ಮುಖ್ಯವಾಗಿ ಹುಲಿಕುಣಿತ ಉಡುಪಿಯಲ್ಲಿ ಅಧಿಕೃತವಾಗಿ ಪ್ರಾರಂಭವಾಗುವುದೇ ಅಷ್ಟಮಿ ದಿವಸ.ಹೀಗಾಗಿ ಹುಲಿಕುಣಿತ ತಂಡಗಳು ನಗರ ಸಂಚಾರ ಮಾಡಿದವು ಮೊದಲ ದಿನವಾದ ಇಂದು ನೋಟಿನ ಮಾಲೆಗಳನ್ನು ಹಾಕಿದ ತಂಡಗಳು ಕೃಷ್ಣನಿಗೆ ಪೂಜೆ ಸಲ್ಲಿಸಿ ಸಂಚಾರ ಪ್ರಾರಂಭಿಸಿದವು.
ಒಟ್ಟಿನಲ್ಲಿ ಅಷ್ಟಮಿಗೆ ಕೃಷ್ಣನೂರು ಸಿಂಗಾರಗೊಂಡಿದೆ. ಉಡುಪಿ ತುಂಬೆಲ್ಲಾ ಹಬ್ಬದ ವಾತಾವರಣ ನಿರ್ಮಾಣಗೊಂಡಿತು.

loading...