ನಾನು ಕ್ರಿಮಿನಲ್ ಅಲ್ಲ ನಾನು ಕಿವಿಯಲ್ಲಿ ಹೂ ಇಟ್ಟಿಕೊಂಡು ಬೆಂಗಳೂರಿಗೆ ಬಂದಿಲ್ಲ

0
1
loading...

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕ್ರಿಮಿನಲ್ ಅಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನಂಗೂ ಗೊತ್ತು, ಕಾನೂನಾತ್ಮಕವಾಗಿ ಹೇಗೆ ಹೋರಾಟ ಮಾಡಬೇಕೆಂದು. ಐಟಿ ದಾಳಿ ಪ್ರಕರಣದ ಹಿಂದೆ ಕೆಲ ಬಿಜೆಪಿ ನಾಯಕರ ಕೈವಾಡ ಇದೆ. ನಾನು ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದರು.
ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಡಿಕೆಶಿ ಇವತ್ತು ಅರೆಸ್ಟ್ ಆಗ್ತಾರೆ, ನಾಳೆ ಆಗ್ತಾರೆ ಎನ್ನುತ್ತಿದ್ದಾರೆ.ಆದರೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು, ನಾನು ಹೋಗಿದ್ದೆ.ನಾನು ಯಾವುದೇ ತಪ್ಪು ಮಾಡಿಲ್ಲ.ಅಕ್ರಮ ಆಸ್ತಿ ನನ್ನ ಹತ್ತಿರ ಇಲ್ಲ ಎಂದರು.
ದೆಹಲಿಯಲ್ಲಿ ನಂಗೆ ಎರಡು ಮನೆ ಇದೆ. ಕಾನೂನು ನಂಗೂ ಗೊತ್ತಿದೆ. ಯಾವುದೇ ನೋಟಿಸ್ ಬಂದ್ರು ಎದುರಿಸಲು ಸಿದ್ಧನಿ ದ್ದೇನೆ.ನಾನು ಯಾವುದಕ್ಕೂ ಹೆದರುವುದಿಲ್ಲ. ಬಿಜೆಪಿ ಅವರು ನಮ್ಮ ಶಾಸಕರಿಗೆ ಆಮಿಷವೊಡ್ಡಿದ್ದಾರೆ.ರಾಜಕೀಯದಲ್ಲಿ ಇದು ಕಾಮನ್ ಗೇಮ್.ಅಡೋಕ್ಕೆ ನಂಗು ಬರುತ್ತೆ. ರಾಜಕೀಯದಲ್ಲಿ ಯಾರ ಶಕ್ತಿ ಹೆಚ್ಚಿರುತ್ತೆ ಅವರನ್ನು ಟಾರ್ಗೆಟ್ ಮಾಡ್ತಾರೆ. ನನ್ನ ಹಿಂದೆ ಬಿಜೆಪಿ ಬಿದಿದ್ದೆ ಎಂದು ಅಪ್ತ ಗೆಳೆಯರು ಮಾಹಿತಿ ನೀಡಿದ್ದಾರೆ ಎಂದರು.
ಯಡಿಯೂರಪ್ಪ ಅವರ ಕೇಸುಗಳು ಕೋರ್ಟ್‍ಗಳಲ್ಲಿ ಇವೆ.ದೆಹಲಿಗೆ ಹೊಗುತ್ತಿದ್ದೇನೆ.ಕೊಡಗು ನಿಯೋಗದ ಜೊತೆ ದೆಹಲಿಗೆ ಹೊಗ್ತಿದ್ದಿನಿ.ಮೋದಿರನ್ನ ಭೇಟಿ ಮಾಡಿ ಮಾತನಾಡುತ್ತೇನೆ.80ಜನ ವಕೀಲರ ಜೊತೆ ದಿನ ಚರ್ಚೆ ಮಾಡುತ್ತಿದ್ದೇನೆ.ಇಡಿ ಪ್ರಕರಣದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್‍ಗೆ ತಿಳಿಸಿಲ್ಲ. ಸಿಎಂ ಜೊತೆ ಚರ್ಚೆ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಜೊತೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ನಾನು ಕಿವಿಯಲ್ಲಿ ಹೂ ಇಟ್ಟಿಕೊಂಡು ಬೆಂಗಳೂರಿಗೆ ಬಂದಿಲ್ಲ. ರಾಜಕಾರಣ ಮಾಡುವುದಕ್ಕಾಗಿ ಬಂದಿದ್ದೇನೆ, ಮಾಡಿ ತೋರಿಸುತ್ತೇನೆ ಎಂದು ಖಡಕ್ ಆಗಿ ಹೇಳಿಕೆ ನೀಡಿದರು.

loading...