ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ: ಎಸ್.ಜಿ.ಸಿದ್ದರಾಮಯ್ಯ ಸೂಚನೆ

0
0
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ನಗರದ ಎಲ್ಲ ಅಂಗಡಿಗಳ ನಾಮಫಲಕಗಳಲ್ಲಿ ಇನ್ಮುಂದೆ ಕಡ್ಡಾಯವಾಗಿ ಕನ್ನಡ ಭಾಷೆ ಅಕ್ಷರವನ್ನು ಶೇ.೬೦ ರಷ್ಟು ಬಳಕೆ ಮಾಡುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಕನ್ನಡ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದವರು, ನವೆಂಬರ್ ೧ ರೊಳಗಾಗಿ ನಗರದ ಎಲ್ಲಾ ಅಂಗಡಿಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಅಕ್ಷರವನ್ನು ಶೇ.೬೦ ಬಳಕೆ ಮಾಡದಿದ್ದರೆ ಅಂಗಡಿಗಳ ಪರವಾನಿಗೆಯನ್ನು ರದ್ದು ಪಡಿಸುವಂತೆ ಹೇಳಿದರು.
ಮಹಾನಗರ ಪಾಲಿಕೆ ೧೫ ದಿನಗಳಲ್ಲಿ ಎಲ್ಲ ಕಡತಗಳನ್ನು ಕನ್ನಡ ವೆಬ್ ಸೈಟ್‌ನಲ್ಲಿ ಅಳವಡಿಕೆ ಮಾಡಲು ಸೂಚಿಸಿದರು. ಲೀಡ್ ಬ್ಯಾಂಕ್‌ನವರು ಎಲ್ಲ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವವರು ಕನ್ನಡದಲ್ಲಿ ಮಾತನಾಡಬೇಕು. ನೌಕರರು ಕೆಲಸಕ್ಕೆ ಸೇರಿದ ನಂತರ ೬ ತಿಂಗಳೋ ಒಳಗಾಗಿ ಕನ್ನಡ ಮಾನಾಡದೇ ಹೋದರೆ ಅವರನ್ನು ಸೇವೆಯಿಂದ ತೆಗೆಯಲಾಗುವುದು ಎಂದರು.
ಕನ್ನಡ ಪ್ರಾಧಿಕಾರದ ಕಾರ್ಯದರ್ಶಿ ಮುರಳಿಧರ, ನಗರ ಪೊಲೀಸ್ ಆಯುಕ್ತ ಡಾ. ಡಿ.ಸಿ.ರಾಜಪ್ಪ, ಎಸ್ಪಿ ಸುಧೀಂದ್ರಕುಮಾರ ರೆಡ್ಡಿ, ಡಾ.ಸರಜೂ ಕಾಟ್ಕರ್, ಅಪರ ಜಿಲ್ಲಾಧಿಕಾರಿ ಹೆಚ್.ಬಿ.ಬೂದೇಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

loading...