ನಾಲ್ಕೈದು  ಬಿಜೆಪಿ ಶಾಸಕರೇ ರಾಜೀನಾಮೆ ನೀಡಲಿದ್ದಾರೆ: ಸಿಎಂ 

0
0
loading...

ಮಂಡ್ಯ: ಜಾರಕಿಹೊಳಿ ಬ್ರದರ್ಸ್ ಬಿಜೆಪಿ ಸೇರುತ್ತಾರೆ, ಅವರ ಜೊತೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುತ್ತಾರೆ ಎಂಬುದೆಲ್ಲ ನೀವು ಮಾಧ್ಯಮದವರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯಷ್ಟೆ ಎಂದು ಸಿಎಂ ಗರಂ ಆಗಿ ಕೇಳಿದರು.ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬೇಕಾದರೆ ಬಿಜೆಪಿ ಶಾಸಕರೇ ಯೂ ಟರ್ನ್ ಹೊಡೆಯಲಿದ್ದಾರೆ.
ಜಾರಕಿಹೊಳಿ ಬ್ರದರ್ಸ್ ಬಿಜೆಪಿಗೆ ಹೋಗುತ್ತಾರೆ ಎಂಬ ಸುದ್ದಿ ಸುಳ್ಳು. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವುದಿಲ್ಲ, ಬಿಜೆಪಿಯ ನಾಲ್ಕೈದು ಶಾಸಕರೇ ಯೂ ಟರ್ನ್ ಹೊಡೆಯಲಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.ಅವರು ಮಂಡ್ಯದಲ್ಲಿ ಮಾತನಾಡಿ, , ಹೀಗೆ ಸುಳ್ಳು ಸುದ್ದಿ ಹಬ್ಬಿಸುವುದರಿಂದ ನಿಮಗೆ ಏನು ಸಿಗುತ್ತದೆ
ಬಿಜೆಪಿಯ ನಾಲ್ಕೈದು ಶಾಸಕರಿಂದ ರಾಜೀನಾಮೆ ಕೊಡಿಸೋಣ, ಕಾಯುತ್ತಿರಿ ಎಂದರು.ಜಾರಕಿಹೊಳಿ ಬ್ರದರ್ಸ್ ಬಗ್ಗೆ ಯಾವುದೇ ಗೊಂದಲವಿಲ್ಲ, ಬಿಜೆಪಿಗೆ ಹೋಗುವ ಬಗ್ಗೆ ಅವರು ವಿಚಾರ ಮಾಡಿಲ್ಲ ಎಂದರು.
loading...