ನಾಳೆ ಬೆಳಗಾವಿಗೆ ಕುಮಾರಸ್ವಾಮಿ:ಸುವರ್ಣ ಸೌಧದಲ್ಲಿ ಜನತಾ ದರ್ಶನ

0
0
loading...

ನಾಳೆ ಬೆಳಗಾವಿಗೆ ಕುಮಾರಸ್ವಾಮಿ:ಸುವರ್ಣ ಸೌಧದಲ್ಲಿ ಜನತಾ ದರ್ಶನ

ಕನ್ನಡಮ್ಮ ಸುದ್ದಿ-ಬೆಳಗಾವಿ:ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಇದೆ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ.ನಾಳೆ ಸುವರ್ಣ ವಿಧಾನಸೌಧದಲ್ಲಿ ಸೆ. ೧೫ ರಂದು ಮಧ್ಯಾಹ್ನ ೩ರಿಂದ ೫ ಗಂಟೆಯವರೆಗೆ ಸಾರ್ವಜನಿಕರನ್ನು ಭೇಟಿ ಮಾಡಿ, ಕುಂದುಕೊರತೆಗಳ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಸುವರ್ಣಸೌಧದಲ್ಲಿ ನಡೆಯಲಿರುವ ಜನತಾ ದರ್ಶನಕ್ಕೆ ಹೆಸರು ನೋಂದಣಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ವಿಶೇಷ ತಂಡ ಆಗಮಿಸಲಿದ್ದು, ಅಹವಾಲು ಸಲ್ಲಿಸುವ ಸಾರ್ವಜನಿಕರ ಹೆಸರುಗಳನ್ನು ನೋಂದಣಿ ಮಾಡಿಕೊಂಡು, ನೋಂದಣಿ ಸಂಖ್ಯೆಯನ್ನು ನೀಡಲಾಗುವುದು.

loading...