ನಿಗದಿತ ವೇಳೆಗೆ ಗಣಪತಿ ವಿಸರ್ಜಿಸಲು ಮನವಿ

0
0
loading...

ಕೆರೂರ : ಪಟ್ಟಣದಲ್ಲಿ ನಾನಾ ಸಂಘಟನೆಗಳು ೨೨ ಕಡೆ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು ಸೋಮವಾರ ೧೩ ಸಂಘಟನೆಗಳ ಗಣಪತಿಯ ವಿಸರ್ಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾನೂನು ಹಾಗೂ ಶಾಂತಿ ಪರಿಪಾಲನೆಯ ದೃಷ್ಠಿಯಿಂದ ರಾತ್ರಿ ೧೦ ಗಂಟೆಯ ಒಳಗೆ ಗಣಪತಿಯ ವಿಸರ್ಜನೆಯನ್ನು ಮಾಡಬೇಕೆಂದು ಬಾದಾಮಿ ವಲಯ ಸಿ.ಪಿ.ಆಯ್. ಕೆ.ಎಸ್.ಹಟ್ಟಿ ಹೇಳಿದರು.
ಅವರು ಭಾನುವಾರ ಪೊಲೀಸ್ ಕಛೇರಿಯ ಆವರಣದಲ್ಲಿ ಆಯೋಜಿಸಿದ ನಾನಾ ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ರಾತ್ರಿಯಾಗುತ್ತಿದ್ದಂತೆ ಕಿಡಿಗೇಡಿಗಳ ಹಾಗೂ ಮಧ್ಯವ್ಯಸನಿಗಳಿಂದ ಶಾಂತಿ ಹಾಳಾಗುವ ಪರಿಸ್ಥಿತಿ ಸಂಭವಿಸಬಹುದು. ಅದಕ್ಕೆ ಅವಕಾಶ ನೀಡದಂತೆ ಎಲ್ಲ ಸಂಘಟನೆಗಳು ಸಹಕಾರ ನೀಡಿ ನಿಗದಿತ ವೇಳೆಗೆ ಗಣಪತಿ ವಿಸರ್ಜನೆ ಕಾರ್ಯಕ್ರಮ ಮುಗಿಯಬೇಕೆಂದರು.
ಪಿ.ಎಸ್.ಆಯ್. ಚಂದ್ರಶೇಖರ ಹೆರಕಲ್ ಮಾತನಾಡಿ, ಪಟ್ಟಣವು ಎಲ್ಲ ಹಬ್ಬ ಹರಿದಿನಗಳಲ್ಲಿ ಶಾಂತಿ ಕಾಪಾಡಿಕೊಳ್ಳತ್ತಾ ಬಂದಿದ್ದು ಈ ಸಲವೂ ಎಲ್ಲ ಹಿರಿಕಿರಿಯರು ಕಾನೂನು ಪಾಲನೆ ಗಮನದಲ್ಲಿಟ್ಟುಕೊಂಡು ಕೆಟ್ಟ ಘಟನೆಗಳು ಜರುಗದಂತೆ ಗಣಪತಿ ವಿಸರ್ಜನಾ ಕಾರ್ಯಕ್ರಮ ಶಾಂತಿಯುತವಾಗಿ ಮಂಗಲವಾಗುವಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು. ಯಲ್ಲಪ್ಪ ಪೂಜಾರ ವಂದಿಸಿದರು.

loading...