ನಿಡಗುಂದಿ: ಶಾಂತಿಯುತ ಮತದಾನ

0
0
ನಿಡಗುಂದಿ:ಬಿಜಾಪುರ ದ್ವಿಸದಸ್ಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಶೇ ೯೯ ಮತದಾನವಾಗಿದೆ. ನಿಡಗುಂದಿ ಹೋಬಳಿಗೆ ಸಂಬಂಧಿಸಿದ ೯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಳೀಯ ಸಂಸ್ಥೆಯ ಸದಸ್ಯರು ಮತದಾರರಾಗಿದ್ದರು. ಒಟ್ಟಾರೇ ೧೬೭ ಮತದಾರರ ಪೈಕಿ ೧೬೬ ಮತದಾರರು ತಮ್ಮ ಮತಚಲಾಯಿಸಿದರು ಎಂದು ಮತಗಟ್ಟೆ ಅಧಿಕಾರಿ ಎಸ್.ಜಿ. ಕುಂಬಾರ ತಿಳಿಸಿದರು.
ಅನಾರೋಗ್ಯದ ಕಾರಣ ನಿಡಗುಂದಿ ಪಟ್ಟಣ ಪಂಚಾಯಿತಿ ಸದಸ್ಯೆ ನೀಲಮ್ಮ ದೊಡಮನಿ ಮಾತ್ರ ಮತಚಲಾಯಿಸಲಿಲ್ಲ ಎಂದು ಮೂಲಗಳು ತಿಳಿಸಿವೆ. ಮತದಾನ ಬಹುತೇಕ ಶಾಂತಿಯುತವಾಗಿತ್ತು. ಆಲಮಟ್ಟಿ, ಗಣಿ, ಬೀರಲದಿನ್ನಿ, ವಂದಾಲ, ಗೊಳಸಂಗಿ, ಚಿಮ್ಮಲಗಿ, ಹೆಬ್ಬಾಳ, ಬೇನಾಳ, ಇಟಗಿ ಗ್ರಾಮ ಪಂಚಾಯಿತಿ ಹಾಗೂ ನಿಡಗುಂದಿ ಪಟ್ಟಣ ಪಂಚಾಯಿತಿ ಸದಸ್ಯರು ಮತಚಲಾಯಿಸಿದರು. ಬೆಳಿಗ್ಗೆಯಿಂದಲೇ ಮತದಾನ ನಡೆದಿತ್ತು. ಬೇರೆ ದೂರದ ಗ್ರಾಮಗಳಿಂದ ಬರುವ ಮತದಾರರನ್ನು ಜೀಪ್ ಮೂಲಕ ಕರೆತರಲಾಗುತ್ತಿತ್ತು. ಒಟ್ಟಾರೇ ಮತದಾನ ಶಾಂತಿಯುತವಾಗಿ ನಡೆಯಿತು.

loading...