ನೂತನ ಲೋಕಮಾನ್ಯ ತಿಲಕ ಗಣೆಶೋತ್ಸವ ಮಹಾ ಮಂಡಳ ಆರಂಭ

0
1
loading...

ನೂತನ ಲೋಕಮಾನ್ಯ ತಿಲಕ ಗಣೆಶೋತ್ಸವ ಮಹಾ ಮಂಡಳ ಆರಂಭ

ಕನ್ನಡಮ್ಮ ಸುದ್ದಿ – ಬೆಳಗಾವಿ: ಈಗಾಗಲೇ ಬೆಳಗಾವಿಯಲ್ಲಿ 354 ಮಹಾ ಮಂಡಳ ಅದರ ಜೊತೆಗೆ ಸ್ವಂತದಾಗಿ ನೂತನವಾಗಿ ಲೋಕಮಾನ್ಯ ತಿಲಕ ಗಣೇಶೋತ್ಸವ ಮಹಾಮಂಡಳ ನಗರದಲ್ಲಿ ರಚನೆಯಾಗಿದೆ ಎಂದು ವಿಜಯ ಜಾಧವ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು ಈಗಿರುವ ಗಣೇಶೋತ್ಸವ
ಮಂಡಳಿಗೆ ಆಡಳಿತದಿಂದ ಹಲವು ಅನುಮತಿ ಪಡೆಯಲು ಸಮಸ್ಯೆಗಳು ಆಗುತ್ತಿವೆ ಅದಕ್ಕಾಗಿ ನೂತನ ಗಣೇಶೋತ್ಸವ ಮಹಾಮಂಡಳದ ಸುಮಾರು 170 ಮಂಡಳಗಳನ್ನು ಸೇರಿಸಿಕೊಂಡು ಇನ್ನು ಹೆಚ್ಚುವರಿ ಸಾಂಸ್ಕೃತಿ ಮಟ್ಟದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ
ಉತ್ಸವ ನಡೆಸಲು ತಯಾರಾದಿವೆ ಇದ್ದರ ಉದ್ದೇಶ ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಡೆ ತಡೆಗಳು ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಮತ್ತೊಂದು ಮಹಾಮಂಡಳ ಆರಂಭ ಮಾಡಲಾಗುತ್ತಿದೆ.
ಎಲ್ಲ ಇಲಾಖೆಯ ಆಡಳಿತದೊಂದಿಗೆ ಪ್ರೀತಿ ಪ್ರೋತ್ಸಾಹ ಬೆಳೆಸಿಕೊಂಡು ಅಧಿಕಾರಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ.
ಒಟ್ಟು 354 ಮಂಡಳಗಳ ಪೈಕು 170 ಮಂಡಳಗಳು ನಮ್ಮೊಂದಿಗಿವೆ ಎಂದರು.
ಈ ಸಂದರ್ಭದಲ್ಲಿ
ರಾಜು ಚಿಕ್ಕನಗೌಡ್ರ,ರಾಕೇಶ ಕೊಂಗಳ, ಗಿರೋಶ ಧೋಂಗಡಿ, ವಿಜಯ ಭೋಸಲೆ, ನ್ಯಾಯವಾದಿ ದೇವರಾಜ ಬಸ್ತವಾಡೆ, ಪವಣ ಅಗಸಗಿ ಇತರರು ಉಪಸ್ಥಿತರಿದ್ದರು.

loading...